ಜೂಡಿ ನ್ಯೂಸ್:
ಕೊಪ್ಪಳ, ಡಿ, 27: ಕೊಪ್ಪಳದ ಸಂಗೀತ ಶಿಕ್ಷಕ ಕೀರ್ತನ ಕಲಾವಿದ ಮಹಾಂತಯ್ಯ ಶಾಸ್ತ್ರಿಗಳಿಗೆ ಜೀವಮಾನದ ಸಂಗೀತ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ 2024 ವಿಶ್ವಮಾನವ ದಿನಾಚರಣೆ ಅಂಗವಾಗಿ ನಿತ್ಯೋತ್ಸವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗಾಗಿ ನೀಡುವ ನಿತ್ಯೋತ್ಸವ ಕನ್ನಡ ಸಿರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಹಾಂತಯ್ಯ ಶಾಸ್ತ್ರಿಗಳು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಪುರಾಣ ಪ್ರವಚನ ಕಲಿತು ಮೈಸೂರು ಪ್ರಾಂತ್ಯದ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ ಸುಮಾರು ಹದಿಮೂರು ಹದಿನಾಲ್ಕು ವರ್ಷ ಸಂಗೀತ ಶಿಕ್ಷಕನಾಗಿ ಕರ್ತವ್ಯವನ್ನು ನಿರ್ವಹಿಸಿ ಆ ಕ್ಷೇತ್ರದಲ್ಲಿ ಗಣನೀಯವಾಗಿ ಅನೇಕ ಕಾರ್ಯಕ್ರಮಗಳುನ್ನು ನೀಡುತ್ತ ಮಠಮಾನ್ಯಗಳಲ್ಲಿ ಪುರಾಣ ಪ್ರವಚನ ಹಾಗೂ ಸಂಗೀತ ಸೇವೆ ಮಾಡುತ್ತಾ ಬಂದಿದ್ದಾರೆ.
ಶ್ರೀ ಗುರು ಪುಟ್ಟರಾಜ ಗುರುಗಳ ಆಶೀರ್ವಾದದಿಂದ ಗುರುವಿನ ಅನುಗ್ರಹದಿಂದ ಅನೇಕ ಪ್ರಶಸ್ತಿಗಳು ಲಭಿಸಿವೆ. ಸಂಗೀತ ಶ್ರೀ ಗುರು ಗಾನ ಲಹರಿ ಸಂಗೀತ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಪಂಡಿತ್ ಶಿವಾನಂದ ಹೇರೂರು ಆಕಾಶವಾಣಿ ದೂರದರ್ಶನ ಕಲಾವಿದರು ಬೆಂಗಳೂರು ನೀಡಿರುವಂಥ ಪುಟ್ಟ ಸನ್ಮಾನ, ಹಿಂದಿನ ಲೋಕಾಯುಕ್ತ ಸಂತೋಷ್ ಹೆಗಡೆಯವರು ನೀಡಿದ್ದಾರೆ.
ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ದಸರಾ ಉತ್ಸವ ಚಾಮರಾಜನಗರ ವಚನ ಸಂಗೀತ ಆನೆಗುಂದಿ ಉತ್ಸವದಲ್ಲಿ ದಾಸವಾಣಿ 25ನೇ ವರ್ಷದ ಕೊಪ್ಪಳ ವಚನ ಸಂಗೀತ ಸೇವೆಯನ್ನು ಪರಿಗಣಿಸಿ ನಿತೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಬೆಂಗಳೂರು ಕನ್ನಡ ರಾಜ್ಯೋತ್ಸವ 2024 ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ ಡಿ, 29 ರಂದು ಬೆಂಗಳೂರಿನ ಮಲ್ಲತಹಳ್ಳಿಯ ಕಲಾ ಗ್ರಾಮದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ