January 31, 2026

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ, ಸಂಭ್ರಮದ ದಿನಾಚರಣೆ

ಜೂಡಿ ನ್ಯೂಸ್ :

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ, ಸಂಭ್ರಮದ ದಿನಾಚರಣೆ

ಕೊಪ್ಪಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಖಿ ಒನ್ ಸ್ಟಾಪ್ ಸೆಂಟರ್ ಕೊಪ್ಪಳ ಹಾಗೂ ತಾಯಿ ಮತ್ತು ಮಗು ಹೆರಿಗೆ ಆಸ್ಪತ್ರೆ, ಕಿಮ್ಸ್, ಜಿಲ್ಲಾ ಆಸ್ಪತ್ರೆ ಕೊಪ್ಪಳ , ಸಹಯೋಗದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ (ಅಕ್ಟೋಬರ್ 11) ಪ್ರಸೂತಿ ವಿಭಾಗದಲ್ಲಿ ಹದೆ ಹರೆಯದ ಮಕ್ಕಳು ಮತ್ತು ತಾಯಂದಿರಿಗೆ ಹೆಣ್ಣು ಮಕ್ಕಳ ಸುರಕ್ಷತೆ, ಸಂರಕ್ಷಣೆ, ಹೆರಿಗೆಯ ಆರೈಕೆ, ಹಕ್ಕುಗಳು, ಸಬಲೀಕರಣ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ಸಖಿ ಘಟಕ ಆಡಳಿತಾಧಿಕಾರಿ ಯಮುನಾ ಬೆಸ್ತರ್ಮಾ ತನಾಡುತ್ತಾ,  ಪ್ರಸುತ್ತ ಹೆಣ್ಣು ಮಕ್ಕಳು ಎದುರಿಸುವ ಬಾಲ್ಯ ವಿವಾಹ ಸಮಸ್ಯೆ, ಲಿಂಗ ತಾರತಮ್ಯ ಮತ್ತು ಹಿಂಸಾಚಾರದಂತಹ ಸವಾಲುಗಳನ್ನು ಕುರಿತು ಚರ್ಚಿಸಲಾಯಿತು. ಮತ್ತು ಅವರನ್ನು ಸಬಲೀಕರಣಗೊಳಿಸಲು ಸಮುದಾಯದ ಪ್ರತಿಯೊಬ್ಬರು ಉತ್ತೇಜಿಸುಬೇಕಂದು ಅವರು ತಿಳಿಸಿದರು.

ಹೆರಿಗೆ ಪ್ರಸ್ತುತಿ ವಿಭಾಗದ ಹಿರಿಯ ಶುಶ್ರೂಷಾಧಿಕಾರಿಗಳಾದ ಶ್ರೀಲತಾರವರು ಜೀವನದ ಸಮಸ್ಯೆಗಳ ಸವಾಲುಗಳನ್ನು ಎದುರಿಸುವಲ್ಲಿ ಹಲವಾರು ಮಾದರಿಯ ನಿರ್ದೇಶನಗಳನ್ನು ನೀಡುತ್ತ ಸಾಧನೆಗಳನ್ನು ಸಾಧಿಸುವಲ್ಲಿ ಕಷ್ಟಗಳು ಮತ್ತು ಸವಾಲುಗಳು ಇದ್ದಾಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಗರ್ಭಧಾರಣೆಯ ಸಮಯದಲ್ಲಿ ಪಡೆಯಬೇಕಾದ ಚಿಕಿತ್ಸೆ ಮತ್ತು ಆರೈಕೆ ಕುರಿತು ವಿವರಿಸಿದರು. 

 ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ದುರ್ಗಪ್ಪ ಗಾದಿನೂರು, ಬಿಸಿರಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯರಾದ ಶಿವಪ್ಪ, ಶುಶ್ರೂಷಾಧಿಕಾರಿಗಳು ಗೀತಾ, ಸಖಿ‌ ಘಟಕದ ವಕೀಲರಾದ ಪುಷ್ಪಲತಾ, ಮಲ್ಟಿ ಪರ್ಪಜ್ ವರ್ಕರ್ ಶೋಭಾ ಅಳವಂಡಿ ಆಶಾ ಕಾರ್ಯಕರ್ತರು ಆಸ್ಪತ್ರೆಯ ಆರೈಕೆದಾರರೆಲ್ಲರೂ ಭಾಗವಹಿಸಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ.