ಜೂಡಿ ನ್ಯೂಸ್ :
ಕೊಪ್ಪಳ : ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಕೊಪ್ಪಳದ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮಾನವ ಸಂಪನ್ಮೂಲ ವಿಭಾಗ, ಆಡಳಿತ, ಇಹೆಚ್‌ಎಸ್ ಮತ್ತು ಕಾರ್ಖಾನೆ ವ್ಯವಸ್ಥಾಪಕ ರಾದ ಡಾ. ಪಿ.ನಾರಾಯಣ ಅವರಿಗೆ ರಾಷ್ಟ್ರೀಯ ಪರ್ಸ್‌ನಲ್ ಮ್ಯಾನೇಜ್‌ಮೆಂಟ್ ಇನ್ಸ್‌ಟಿಟ್ಯೂಟ್ (ಎನ್‌ಐಪಿಎಂ) ವತಿಯಿಂದ ಪ್ರತಿಷ್ಠತ ಫೆಲೋಶಿಪ್ ಪ್ರಶಸ್ತಿ 2025ರ ಅಕ್ಟೋಬರ್ 30 ರಂದು ನವದೆಹಲಿ ಏರೋಸಿಟಿಯ ಹೋಟೆಲ್ ಪುಲ್‌ಮ್ಯಾನ್‌ನಲ್ಲಿ ನಡೆದ “41ನೇ ಎನ್‌ಐಪಿಎಂ ರಾಷ್ಟ್ರೀಯ ಸಮ್ಮೇಳನ (ನ್ಯಾಟ್‌ಕಾನ್-2025) ನಲ್ಲಿ ಪ್ರಧಾನಿಸಲಾಯಿತು.
ಈ ಗೌರವಾನ್ವಿತ ಪ್ರಶಸ್ತಿ ಡಾ. ಪಿ. ನಾರಾಯಣರವರು ಸಂಸ್ಥೆಯ ಅಭಿವೃದ್ಧಿಗೆ ನೀಡಿದ ಅತ್ಯತ್ತಮ ಮತ್ತು ಶ್ರೇಷ್ಠ ಕೊಡುಗೆಯನ್ನು ಗುರುತ್ತಿಸುತ್ತದೆ ಈ ಪ್ರಶಸ್ತಿಯನ್ನು ಶ್ರೀ ಆರ್. ಪಿ. ಸಿಂಗ್, ನಿರ್ದೇಶಕರು, (ಮಾನವ ಸಂಪನ್ಮೂಲ ಮತ್ತು ಕಾನೂನು) ಇಷ್ಟೋ ಹಾಗೂ ಛೇರಮನ್ ಆರ್ಗ್‌ನೈಸಿಂಗ್ ಕಮಿಟಿ, ಇಸ್ರೋದ ಛೇರಮನ್, ಶ್ರೀ ದಿಲೀಪ್ ಸಂಘಾನಿ ಮತ್ತು ಕ್ರಿಭೋದ ಛೇರಮನ್ ಶ್ರೀ ಸುಧಾಕರ ಚೌಧರಿ ಇವರುಗಳು ವಿವಿಧ ಬಾಗಗಳಿಂದ ಅಗಮಿಸಿದ್ದ ಗಣ್ಯ ನಾಯಕರು ಮತ್ತು ಉದ್ಯಮ ತಜ್ಞರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಸುಮಾರು 38 ವರ್ಷಗಳ ಕಾಲ ವಿಶಿಷ್ಟ ವೃತ್ತಿಜೀವನದಲ್ಲಿ ಡಾ. ಪಿ. ನಾರಾಯಣರವರು ಮಾನವ ಸಂಪನ್ಮೂಲ ಕೈಗಾರಿಕಾ ಸಂಬಂಧಗಳು, ಪರಿಸರ, ಆರೋಗ್ಯ ಮತ್ತು ಸುರಕ್ಷತೆ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ದೃಷ್ಠಿಯುತ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಅವರು ಗ್ರಾಸಿಮ್ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಂತಹ ಪ್ರಮುಖ ಉತ್ಪಾದನಾ ಸಂಸ್ಥೆಗಳಲ್ಲಿ ಪರಿವರ್ತನಾ ನಾಯಕತ್ವವನ್ನು ತೋರಿಸಿದ್ದಾರೆ. ವಿಶ್ವಾಸ, ಪಾರದರ್ಶಕತೆ ಮತ್ತು ಸಬಲೀಕರಣದ ಮೇಲೆ ಕೈಗಾರಿಕಾ ವಲಯದಲ್ಲಿ ಶ್ರೇಷ್ಠತೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸಿದ್ದಾರೆ.
ಎನ್‌ಐಪಿಎಂ – ಉತ್ತರ ಕರ್ನಾಟಕ ಚಾಪ್ಟರ್ ಜೀವಮಾನ ಸದಸ್ಯರು ಮತ್ತು ಎರಡು ಬಾರಿ ಅಧ್ಯಕ್ಷರಾಗಿರುವ (2016-18 ಮತ್ತು 2023-2025) ಡಾ. ಪಿ ನಾರಾಯಣರವರು ಉತ್ತರ ಕರ್ನಾಟಕ ಚಾಪ್ಟರ್‌ರನ್ನು ಪುನರುಜ್ಜಿವನಗೊಳಿಸುವಲ್ಲಿ ಮತ್ತು ಆ ಪ್ರದೇಶದಲ್ಲಿ ತಮ್ಮ ನಾಯಕತ್ವದಲ್ಲಿ ಮಾನವ ಸಂಪನ್ಮೂಲ ವಿಭಾಗದ ಅರಿವು ಮತ್ತು ಚಿಂತನೆಗಳ ಮೂಲಕ ಉತ್ತರ ಕರ್ನಾಟಕ ಪ್ರದೇಶವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ರಾಷ್ಟ್ರೀಯ ಎಕ್ಸಲೆನ್ಸ್ ಅಸೆಸರ್ ಪ್ರಮಾಣಿಕರಾಗಿದ್ದರು, ಕೊಪ್ಪಳ ಇಂಡಸ್ಟ್ರೀಸ್ ಅಸೋಸಿಯೇಷನ್‌ನ ಸಂಯುಕ್ತ ಕಾರ್ಯದರ್ಶಿ ಮತ್ತು ಸರ್ಕಾರಿ ಐಟಿಐ, ಹನುಮಸಾಗರದ ಸೆಂಟರ್ ಆಫ್ ಎಕ್ಸಲೆನ್ಸ್‌ನ ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ನಾರಾಯಣರವರ ಪ್ರೇರಣಾದಾಯಕ ತತ್ವ- “ತಿಳಿದಿರುವುದು ಮಾಡುವುದಲ್ಲಾ ಮಾಡಿದರಷ್ಟೇ ಮಾಡುವುದು”ವೃತ್ತಿಪರರನ್ನು ಪ್ರಮಾಣಿಕತೆ ಸಹಾನುಭೂತಿ ಮತ್ತು ಉದ್ದೇಶಪೂರಿತ ಕಾರ್ಯದತ್ತ ಪ್ರೇರಿಪಿಸುತ್ತದೆ.
ಈ ಫೆಲೋಶಿಪ್ ಪ್ರಶಸ್ತಿ ಡಾ. ನಾರಾಯಣರವರ ಗಮನಾರ್ಹ ಪ್ರಯಾಣಕ್ಕೆ ಮತ್ತೊಂದು ಮೈಲಿಗಲ್ಲಿಗೆ ಸೇರ್ಪಡೆಯಾಗಿದೆ, ಗ್ರೇಟ್ ಮ್ಯಾನೇಜರ್ ಅವಾರ್ಡ್ ಹಾಗೂ ವರ್ಷದ ಅತ್ಯತ್ತಮ ಮಾನವ ಸಂಪನ್ಮೂಲ ವೃತ್ತಿಪರ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳ ಪಟ್ಟಿಗೆ ಸೇರುತ್ತದೆ.
ನಾವು ಡಾ. ಪಿ ನಾರಾಯಣರವರಿಗೆ ಈ ರಾಷ್ಟ್ರ ಮಟ್ಟದ ಗೌರವಕ್ಕಾಗಿ ಹಾರ್ದಿಕ ಅಭಿನಂದನೆಗಳನ್ನು ತಿಳಿಸುತ್ತಿದ್ದು ಅವರು ಜನನಾಯಕತ್ವ, ಕೈಗಾರಿಕಾ ಸಂಬಂಧಗಳು ಹಾಗೂ ಸಂಘಟನಾ ಶ್ರೇಷ್ಠತೆಯಲ್ಲಿ ಅಪಾರ ಕೊಡುಗೆಗಾಗಿ ಹೆಮ್ಮೆಯಿಂದ ಅಭಿನಂದಿಸುತ್ತೇವೆ.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ