January 31, 2026

ಉತ್ತಮ ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ :ಹಿರಿಯ ಸಮಾಜ ಸೇವಕ ಕೋರಿಶೆಟ್ಟರ್ ಲಿಂಗಪ್ಪರವರ ಅಭಿಮತ

ಜೂಡಿ ನ್ಯೂಸ್ :

 ವಿಜಯನಗರ : ಹೊಸಪೇಟೆಯ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ ಬಿಬಿಎನ್. ಬಿ ,ಎಡ್. ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಮತ್ತು ಸಂಕಲ್ಪ ಎಂಬ ವಿಶೇಷ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು ಹಿರಿಯ ಜೀವಿಗಳಾದ ಕೋರಿಶೆಟ್ಟರ್ ಲಿಂಗಪ್ಪ ಅವರು ಮಾತನಾಡಿದರು..

ಎಲ್ಲಾ ವೃತ್ತಿಗಳಿಗಿಂತ ವಿಶ್ವ ಮಾನ್ಯ ವೃತ್ತಿ ಎಂದರೆ ಅದುವೇ ಶಿಕ್ಷಣ ವೃತ್ತಿ ಶಿಕ್ಷಣ ವೃತ್ತಿಯಲ್ಲಿ ಶಿಕ್ಷಕರು ಉಪನ್ಯಾಸಕರು ಅಧ್ಯಾಪಕರು ಬೋಧನಾ ವೃತ್ತಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವವರು ಇವರುಗಳ ಸೇವೆ ಸ್ಮರಣೀಯವಾದದ್ದು, ಅಂತಹ ಭವಿಷ್ಯತ್ತಿನ ಶಿಕ್ಷಕರನ್ನುಪಠ್ಯ ಮತ್ತು ಪಠ್ಯೇತರ ವಿಷಯಗಳ ಮೂಲಕ ಉತ್ತಮ ಶಿಕ್ಷಕರನ್ನು ನಿರ್ಮಾಣ ಮಾಡುತ್ತಿರುವ ಹೊಸಪೇಟೆ ಎಸ್ ಬಿಬಿಎನ್ ಶಿಕ್ಷಣ ಮಹಾವಿದ್ಯಾಲಯ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಮುಂಬರುವ ದಿನಗಳಲ್ಲಿ ಈ ಕಾಲೇಜಿನಲ್ಲಿ ಬಿ ಎಡ್. ವ್ಯಾಸಂಗ ಪೂರೈಸಿದ ಪ್ರಶಿಕ್ಷಣಾರ್ಥಿಗಳಿಗೆ ಸರ್ಕಾರಿ ಉದ್ಯೋಗ ದೊರೆಯಲಿ ಎಂದು ಶುಭ ಹಾರೈಸಿದರು..

ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ವರದಿಯನ್ನು ವಿದ್ಯಾರ್ಥಿ ಸಂಘದ ಸಂಚಾಲಕರಾದ ಡಾ. ಪಿ ಎಂ ಸಿದ್ದಲಿಂಗಸ್ವಾಮಿ ರವರು ನೆರವೇರಿಸಿದರು, 

ಕ್ರೀಡಾ ಬಹುಮಾನ ಮತ್ತು ಶ್ರೇಣಿ ವಿಜೇತರು, ಮತ್ತು ಕಾಲೇಜಿನಿಂದ ಹೊರ ಹೋಗುವ ಉತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಕಾರ್ಯಕ್ರಮವನ್ನು ಐ ಕ್ಯೂ ಎ ಸಿ ಸಂಯೋಜಕರಾದ ಡಾ: ಜಗದೀಶ್ ಎಸ್ ಹಿರೇಮಠ ಸರ್ ಅವರು ನೆರವೇರಿಸಿದರು..

2023- 24ನೇ ಸಾಲಿನ ಶ್ರೇಣಿ ವಿಜೇತರಿಗೆ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ 5000 ಬಹುಮಾನ ಮೊತ್ತವನ್ನು ಕಾರ್ಯಕ್ರಮದಲ್ಲಿ ನೀಡಿದರು..

ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದ ಕೆ ಬಿ ಶ್ರೀನಿವಾಸ್ ಸರ್ ಅವರು ಸಹ ಮಾತನಾಡಿದರು…

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಾಜ ಸೇವಕರು ಹಿರಿಯ ಜೀವಿ ಕೋರಿ ಶೆಟ್ಟರ್ ಲಿಂಗಪ್ಪ ಅವರನ್ನು ಕಾಲೇಜಿನ ವತಿಯಿಂದ ಗೌರವ ಪೂರಕವಾಗಿ ಸನ್ಮಾನಿಸಲಾಯಿತು..

ಬೀಳ್ಕೊಡುಗೆ ಸಮಾರಂಭದ ಪ್ರಯುಕ್ತ ವಿಶೇಷ ಉಪನ್ಯಾಸವನ್ನು ಕಾಲೇಜಿನ ಹಿರಿಯ ಆಧ್ಯಾಪಕಿ ಡಾ:ಕೆ,ಎಮ್,ಪಾರ್ವತಿ ಮೇಡಂ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡುವ ಮೂಲಕ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ವಿಚಾರ ಪ್ರಜ್ಞೆ, ಬೆಳೆಸಿಕೊಂಡು ಉತ್ತಮ ಜ್ಞಾನವನ್ನು ಗಳಿಸಬೇಕೆಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಶಿವನಗೌಡ ಸಾತ್ಮಾರ್ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು..

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗುಡೆಕೋಟೆ ನಾಗರಾಜ ಸರ್ ಅವರು ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಓದಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಇದರ ಜೊತೆಗೆ ಅತ್ಯಂತ ಅನುಭವಿ ನೈಪುಣ್ಯತೆ ಹೊಂದಿರುವ ಅಧ್ಯಾಪಕ ಬಳಗದವರು ನಮ್ಮ ಮಹಾವಿದ್ಯಾಲಯದಲ್ಲಿ ಇರುವುದೇ ನಮ್ಮ ಬಳ್ಳಾರಿಯ ವೀರಶೈವ ವಿದ್ಯಾ ವರ್ಧಕ ಸಂಘಕ್ಕೆ ಒಂದು ಗೌರವದ ವಿಷಯವಾಗಿದೆ, ಇಂತಹ ಹಲವಾರು ಸೃಜನಶೀಲತೆ ಹೊಂದಿರುವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಹೊರ ಹೋಗುತ್ತಿರುವ ವಿದ್ಯಾರ್ಥಿಗಳೇ ನಿಜವಾದ ಪುಣ್ಯವಂತರು, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು..

 ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಧ್ಯಾಪಕರಾದ ಡಾ: ವಿಶ್ವನಾಥ ಗೌಡ, ಡಾ: ಕೆ ಎಮ್ ಮಲ್ಲಿಕಾ ಡಾ: ಶೋಭಾ , ಡಾ: ಸತೀಶ್ ಸೂರಿಮಠ. ಇಟಗಿ ಮಲ್ಲಿಕಾರ್ಜುನ, ಬಿದರಕುಂದಿ ಮಲ್ಲಿಕಾರ್ಜುನ , ಶ್ರೇಣಿ ವಿಜೇತರಾದ ಲಕ್ಷ್ಮಿ ಬಿ ಡೊಳ್ಳಿ, ಎಮ್ ಮೇಘನಾ, ಭೂಮಿಕಾ ಕೆ ಬಿ, ಕಾಲೇಜಿನಿಂದ ಹೊರಹೋಗುತ್ತಿರುವ ಉತ್ತಮ ವಿದ್ಯಾರ್ಥಿಗಳ ಪ್ರಶಸ್ತಿ ಪಡೆದ ಶಿವಾನಿ, ನೇಮಿಚಂದ್ರ, ನಾಗರಾಜ್ ಗಂಟಿ, ಇವರುಗಳು ಪ್ರಶಸ್ತಿ ಪತ್ರವನ್ನು ಪಡೆದರು ಕಾರ್ಯಕ್ರಮದಲ್ಲಿ ಪ್ರಥಮ ಮತ್ತುದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು.