ಜೂಡಿ ನ್ಯೂಸ್ :
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಎಚ್ ಓಬಳಾಪುರ ಗ್ರಾಮದ ಹಿರಿಯ ಸುಡುಗಾಡು ಸಿದ್ದ ಜಾನಪದ ಕೈಚಳಕ ಕಲಾವಿದ ಕಿಂಡ್ರಿ ಲಕ್ಷ್ಮಿಪತಿ ಅವರಿಗೆ ಕರ್ನಾಟಕ ಸರ್ಕಾರದ ಜಾನಪದ ಆಕಾಡೆಮಿಯ 2025 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ… .
ರಾಜ್ಯಮಟ್ಟದ ಹಿರಿಯ ಜಾನಪದ ಕಲಾವಿದರಾದ ಕಿಂಡ್ರಿ ಲಕ್ಷ್ಮಿಪತಿಯವರು ತಮ್ಮ ಪಾರಂಪರಿಕ ವಿದ್ಯೆಯನ್ನು ತಮ್ಮ ತಂದೆ ಸಿದ್ದರ ಹೋಸ್ಕೆರಪ್ಪ ಮತ್ತು ಸಹೋದರಮಾವ ರಾಜಪ್ಪ ಅವರಿಂದ ಸಣ್ಣ ವಯಸ್ಸಿನಿಂದಲೇ ಈ ಕಲೆಯನ್ನು ಕಲಿತು 1970 ರಿಂದ 2025ರ ವರೆಗೆ ಅರ್ಧ ದಶಕಕ್ಕಿಂತಲೂ ಸಾವಿರಕ್ಕೂ ಹೆಚ್ಚು ಜಾನಪದ ಕಲೆಯನ್ನು ಪ್ರದರ್ಶನ ನೀಡಿ ರಾಜ್ಯಮಟ್ಟದ ಜಾನಪದ ಹಿರಿಯ ಕಲಾವಿದರಾಗಿ ತಮ್ಮದೇ ಆದ ವೈಚಾರಿಕ ತತ್ವ ಮೂಲಕ ತಮ್ಮ ಕಾಯಕ ಮಾಡುವ ಊರುಗಳಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಗ್ರಾಮೀಣ ಪಾರಂಪರಿಕ ಕಲೆಯಾದ ಅಲೆಮಾರಿ ಸುಡುಗಾಡು ಸಿದ್ದ ಜಾನಪದ ಕೈಚಳಕ ಕಲೆಯ ಮೂಲಕ ತಮ್ಮ ವಿಶಿಷ್ಟ ಶಬ್ದದ ಮೂಲಕ ತಮ್ಮ ಜೋಳಗಿಯಿಂದ ಜಾ ಜಾ ಓದಿಸು ಮಂತ್ರಿಸು ಮಾಯ ಮಾಡು ಸಿದ್ದರಾಟ ಶಿವನ ಆಟ ಎಂದು ಜೋಳಗಿಯ ಮಲೆನಾಡ ಚೌಡಿ ನಸುಪುಡಿ ಮಲಮ್ಮ ವಿಭಿನ್ನ ಕೈಚಳಕದ ಮೂಲಕ ಒಂದೊಂದೇ ವಿವಿಧ ಶಿವಲಿಂಗ ರುದ್ರಾಕ್ಷಿ, ವಿಭೂತಿ, ಹನುಮಂತ, ಕ್ಷಣಮಾತ್ರದಲ್ಲಿ ವಸ್ತುಗಳನ್ನು ಮಾಯ ಮಾಡಿ ಇನ್ನೊಂದು ವಸ್ತುಗಳನ್ನು ಸೃಷ್ಟಿಸಿ ಆ ವಸ್ತುವಿಗೆ ತಕ್ಕ ತತ್ವವನ್ನು ಬೋಧಿಸುತ್ತಾ ಜನರಲ್ಲಿ ಇರತಕ್ಕಂತಹ ಅಜ್ಞಾನವನ್ನು ದೆವ್ವ ಭೂತ ಮೂಡನಂಬಿಕೆಯನ್ನು ಹೋಗಲಾಡಿಸಿ, ಮನರಂಜನೆಯ ಜೊತೆಗೆ ಜನರಿಗೆ ಜ್ಞಾನದ ಸಿಂಚನ ಮೂಡಿಸಿ ಬುದ್ಧ ಬಸವ ಸಾದು ಶರಣರ ಸಂತ ಮಹಾಂತರ ಕಾಯಕ ತತ್ವವನ್ನು ತಮ್ಮ ಸುಡುಗಾಡು ಸಿದ್ದ ಜಾನಪದ ಕಲೆಯ ಮೂಲಕ ಜನಮನಕ್ಕೆ ಮುಟ್ಟಿಸುತ್ತಿರುವುದು ಇವರ ಜಾನಪದ ಸೇವೆಯ ಹಿರಿಮೆಯಾಗಿದೆ ಹಾಗೆ ಇವರು ಪಾರಂಪರಿಕ ನಾಟಿ ಔಷಧೀಯ ಪಂಡಿತರು ಸಹ ಆಗಿದ್ದಾರೆ .
ಅರ್ಧ ದಶಕಕ್ಕಿಂತಲೂ ಹೆಚ್ಚು ಸುಮಾರು ಸಾವಿರ ಪ್ರದರ್ಶನವನ್ನು ನೀಡಿ ಜಾನಪದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇವರ ಕಲಾ ಪ್ರದರ್ಶನ ವಿಜಯನಗರ ಜಿಲ್ಲೆಯ 350 ಕ್ಕಿಂತ ಹೆಚ್ಚು ಶಾಲೆಗಳಲ್ಲಿ ಪ್ರದರ್ಶನ ನೀಡಿ ವಿದ್ಯಾರ್ಥಿಗಳಿಗೆ ಭಯವನ್ನು ಹೋಗಲಾಡಿಸಿ ಆತ್ಮಸ್ಥೈರ್ಯವನ್ನು ತುಂಬಿ ವಿದ್ಯಾರ್ಥಿಗಳಲ್ಲಿ ವೈಚಾರಿಕ ತತ್ವವನ್ನು ಬಿತ್ತುತ್ತ ವಿದ್ಯಾರ್ಥಿಗಳಲ್ಲಿರುವ ಮೌಢ್ಯವನ್ನು ಹೋಗಲಾಡಿಸಿ ಸುಜ್ಞಾನದ ದೀಪವನ್ನು ಬೆಳಗಿಸಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕರ್ನಾಟಕ ಸರ್ಕಾರದ ಖ್ಯಾತ ಉತ್ಸವಗಳಾದ ಹಂಪಿ ಉತ್ಸವ ಮೈಸೂರು ದಸರಾ ಉತ್ಸವ, ಒನಕೆ ಓಬವ್ವ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಆಳ್ವಾಸ್ ನುಡಿಸಿರಿ ಸಿರಿ ಉತ್ಸವ ಚಿಕ್ಕಮಂಗಳೂರು ಉತ್ಸವ, ರಾಜ್ಯದ ಅನೇಕ ಉತ್ಸವ ಮೆರವಣಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮದಗಳಲ್ಲಿ ತಮ್ಮ ಬುದ್ಧನ ಕಾಲದಿಂದಲೂ ಬಸವಣ್ಣನ ಕಾಲದಿಂದಲೂ ಇತಿಹಾಸ ಹೊಂದಿರುವ ಮನರಂಜನೆ ಭರಿತ ವೈಚಾರಿಕ ತತ್ವವನ್ನು ಒಳಗೊಂಡಿರುವ ಸುಡುಗಾಡು ಸಿದ್ದ ಕಲೆಯನ್ನು ಜನಮಾನಸಕ್ಕೆ ಮುಟ್ಟಿಸುತ್ತಾರೆ.
ಜಾನಪದ ಗಾರುಡಿಗ ಹಳ್ಳಿಯ ಮಹಾನ್ ಪ್ರತಿಭೆ, ಕಿಂಡ್ರಿ ಲಕ್ಷ್ಮಿಪತಿ ಅವರ ಅರ್ಧ ದಶಕಕ್ಕಿಂತ ಹೆಚ್ಚು ಜಾನಪದ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಜಾನಪದ ಅಕಾಡೆಮಿಯ ಮಾನ್ಯ ಜಾನಪದ ಹೃದಯ ಶ್ರೀಮಂತಿಕೆಯ ಅಧ್ಯಕ್ಷರಾದ ಡಾ. ಗೊಲ್ಲಹಳ್ಳಿ ಶಿವಪ್ರಸಾದ್ ಸರ್ ಹಾಗೂ ಅಕಾಡೆಮಿಯ ಸ್ಥಾಯಿ ಸಮಿತಿಯ ಸದ್ಯಸರಾದ ಮೆಹಬೂಬ್ ಕಿಲ್ಲೆದಾರ್ ಸರ್, ಅವರ ಆವಿರತ ಪರಿಶ್ರಮದಿಂದಾಗಿ ಕಿಂಡ್ರಿ ಲಕ್ಷ್ಮಿಪತಿ ಅವರಿಗೆ ಪ್ರಶಸ್ತಿ ಲಭಿಸಲು ಮೂಲ ಕಾರಣ ಜಾನಪದ ಕಲಾವಿದ ನಾಗರಾಜ್ ಗಂಟಿರವರು ತಿಳಿಸಿದರು
ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರು ರಿಜಿಸ್ಟರ್ ಸರ್ವ ಸದಸ್ಯರನ್ನು ಸ್ಮರಿಸಿ ಕೃತಜ್ಞತೆ ಸಮರ್ಪಿಸಿದರು… ಸುಡುಗಾಡು ಸಿದ್ದ ಸಮುದಾಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕಿಂಡ್ರಿ ಲಕ್ಷ್ಮಿಪತಿ ಅವರಿಗೆ ವಿಜಯನಗರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಸಿದ್ದಲಿಂಗೇಶ್ ರಂಗಣ್ಣನವರಿಗೆ, ಹಗರಿಬೊಮ್ಮನಹಳ್ಳಿ ಕರ್ನಾಟಕ ಕಾರ್ಯನಿರ ಪತ್ರಕರ್ತ ಸಂಘದ ಅಧ್ಯಕ್ಷರಾದ, ಬಾವಿಕಟ್ಟಿ ವಿಶ್ವನಾಥ್ ಬುಡ್ಡಿ ಬಸವರಾಜ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ. ಎಸ್ ಗಾಳಪ್ಪ. ಪತ್ರಿ ಎಲ್ಲಪ್ಪ ಎಸ್ ಮಹೇಶ್. ಸಣ್ಣ ಮಂಜುನಾಥ್ ಗಂಟಿ, ನಾಗರಾಜ್ ಗಂಟಿ, ಎಚ್ ಓಬಳಾಪುರ ಗ್ರಾಮದ ಸಮಸ್ತ ನಾಗರಿಕರು ನಿವೃತ್ತ ಮುಖ್ಯ ಶಿಕ್ಷಕರಾದ ಸಿದ್ದರ ರಾಮಣ್ಣ ಕನ್ನಡ, ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಕೇಶವಮೂರ್ತಿ, ಕಲ್ಯಾಣದರ್ಶನ ಪತ್ರಿಕೆಯ ಸಂಪಾದಕಿ, ಜಾನಪದ ಕಲಾವಿದೆ ಲಲಿತಾ ಪೂಜಾರ್, ಜೂಡಿ ನ್ಯೂಸ್ ಪತ್ರಿಕೆ ಸಂಪಾದಕ ವೈ ಬಿ ಜೂಡಿ ಸೇರಿದಂತೆ ಸಮಾಜದ ಎಲ್ಲಾ ಮುಖಂಡರು, ಕಲಾಪೋಷಕರು ಪತ್ರಕರ್ತರು ಸಾಹಿತಿಗಳು ಸಂಘಟಕರು ಪ್ರಶಸ್ತಿಗೆ ಭಾಜನರಾದ ಕಿಂಡ್ರಿ ಲಕ್ಷ್ಮಿಪತಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ