ಜೂಡಿ ನ್ಯೂಸ್ :
ಕೊಪ್ಪಳ ಜ.೭: ಸಮಾಜ ಸೇವೆ ಮಾಡಲು ಯಾವುದೇ ಪದವಿಯ ಅಗತ್ಯವಿಲ್ಲ ಎಂದು ಭಾಗ್ಯನಗರ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷ ರಮೇಶ ಹ್ಯಾಟಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ರಾಮ ಬಡಾವಣೆಯ ಎಂಟನೆ ವಾರ್ಡಿನ ನಾಗರಿಕರು ‘ಸೃಷ್ಟಿ ಹೋಂ ಕ್ಲಾಸಸ್’ ನ ಆವರಣದಲ್ಲಿ ಆಯೋಜಿಸಿದ್ದ ‘ನಾಗರಿಕ ಗೌರವ’ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಪಟ್ಟಣಕ್ಕೆ ಏನಾದರೊಂದು ಕೊಡುಗೆ ಸಲ್ಲಿಸುವುದಾಗಿ ಮಾತು ಕೊಟ್ಟರು. ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದಾಗಿ ಹೇಳಿದರು. ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಕೊಂಡು, ಸಂಗ್ರಹಿಸಿದ ಕಸವನ್ನು ನಿಗದಿ ಪಡಿಸಿದ ಜಾಗೆಯಲ್ಲಿ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಪಟ್ಟಣದ ಮಸಣಕ್ಕೆ ಹೊಸ ಕಾಯಕಲ್ಪ ಮಾಡಲು ಹೊಸ ಯೋಜನೆ ರೂಪಿಸಿದೆ. ಸಾರ್ವಜನಿಕರು ಸಹ ಅದಕ್ಕೆ ಕೈಜೋಡಿಸಬಹುದೆಂದು ಹೇಳಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ
ಮೌನೇಶ ಗ್ಯಾನಪ್ಪ ಬಡಿಗೇರ ಐದು ಸಾವಿರ ಒಂದು ರೂಪಾಯಿ ದೇಣಿಗೆ ನೀಡಲು ಒಪ್ಪಿಗೆ ಸೂಚಿಸಿದರು.
ವಾರ್ಡಿನ ಹಿರಿಯರು ಹಾಗೂ ನಿವೃತ್ತ ಚಿತ್ರಕಲಾ ಶಿಕ್ಷಕ ಬಿ ಎನ್ ಬಿಸ್ನಳ್ಳಿ ಅವರು ಮಾತನಾಡಿ ಮುಂದಿನ ದಿನಮಾನಗಳಲ್ಲಿ ರಮೇಶ ಹ್ಯಾಟಿ ಅವರ ಎಲ್ಲ ಕೆಲಸ ಕಾರ್ಯಗಳಲ್ಲಿ ವಾರ್ಡಿನ ಎಲ್ಲ ಸದಸ್ಯರು ಬೆಂಬಲವಾಗಿ ನಿಲ್ಲಬೇಕೆಂದು ಹೇಳಿದರು. ಮಂಜುನಾಥ ಹೆಬ್ಬಳ್ಳಿ ಮಾತನಾಡಿ ನಾಗರಿಕರ ಸಮಸ್ಯೆಗೆ ಯಾರು ಸ್ಪಂದಿಸುತ್ತಾರೋ ಅವರೇ ನಿಜವಾದ ಜನಪ್ರತಿನಿಧಿ. ಅಂತಹ ಸಾಲಿಗೆ ರಮೇಶ ಹ್ಯಾಟಿ ಸೇರುತ್ತಾರೆ ಎಂದರು.
ಮತ್ತೊಬ್ಬ ಹಿರಿಯ ನಾಗರಿಕ ಆದನಗೌಡ ಅವರು ಮಾತನಾಡಿ ಯಾವುದೇ ಸಮಸ್ಯೆಗೆ ಸ್ಪಂದಿಸಲು ಅಧ್ಯಕ್ಷರು ತಯಾರಿರಬೇಕೆಂದು ಮನವಿ ಮಾಡಿದರು. ಸಾಹಿತಿ ಶಿ ಕಾ ಬಡಿಗೇರ ಅಭಿನಂದನಾ ನುಡಿ ಹೇಳಿ ಎಲ್ಲರ ಪರವಾಗಿ ಅಭಿನಂದಿಸಿದರು.
ಮುಖಂಡರಾದ ನಾಗರಾಜ ಪವಾರ,
ನೇಮಾಸ ಮೆಹರ್ವಾಡೆ, ನಾರಾಯಣಪ್ಪ ಬೆಟಗೇರಿ, ಚಿದಾನಂದಪ್ಪ, ಮಾರುತಿ ಕುದರಿ, ವೀರಣ್ಣ ಕಬ್ಬೇರ, ಸಿದ್ದನಗೌಡ ಹಿರೇಗೌಡರ, ನಿಂಗನಗೌಡ ಪೋ ಪಾಟೀಲ, ಅಶೋಕ ಮೇಘರಾಜ, ಪ್ರಕಾಶ ಜೋಷಿ, ಸತೀಶ ಮೆಹರ್ವಾಡೆ ಮುಂತಾದವರು ಉಪಸ್ತಿತರಿದ್ದರು.

More Stories
ಹಂಪಾಪಟ್ಟಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಅರವಟ್ಟಿಗೆ ಪ್ರಾರಂಭ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್
ಎಡದಂಡೆ ಮುಖ್ಯ ಕಾಲುವೆ ಒಡೆದು ಬೆಳೆ ಹಾನಿ : ಬಿಜೆಪಿ ಪ್ರತಿಭಟನೆ