ಜೂಡಿ ನ್ಯೂಸ್ :
ಗAಗಾವತಿ: ಹಂಪಿ ಕನ್ನಡ ವಿಶ್ವವಿದ್ಯಾಯದ ೨೦೨೫-೨೬ನೇ ಸಾಲಿನ ಸ್ನಾತಕೋತ್ತರ ಸಂಗೀತ ಪದವಿಯ ಫಲಿತಾಂಶದಲ್ಲಿ ನಗರದ ಕುಮಾರಿ ರಂಜನಿ ಆರತಿ ತಂ. ದಿ|| ಪರಸಪ್ಪ ಆರತಿ ಅವರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಕೊಪ್ಪಳ ಜಿಲ್ಲೆ ಹಾಗೂ ಗಂಗಾವತಿಗೆ ಕೀರ್ತಿ ತಂದಿರುತ್ತಾರೆ.
ಗAಗಾವತಿ ನಗರದ ನಿವಾಸಿಯಾದ ಕುಮಾರಿ ರಂಜನಿ ಆರತಿ ಅವರು ಮೂಲವಾಗಿ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದ ಇವರಿಗೆ ಸಂಗೀತ ಗುರುಗಳಾದ ಡಾ. ತಿಮ್ಮಣ್ಣ ಭೀಮರಾಯ ಅವರು ಸಂಗೀತ ಶಿಕ್ಷಣ ನೀಡಿ, ಶಾಸ್ತಿçÃಯ ಸಂಗೀತಾಭ್ಯಾಸಕ್ಕೆ ಒತ್ತು ಕೊಡಲು ತಿಳಿಸಿದ್ದರಿಂದ ಸದರಿ ರಂಜನಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಎ (ಹಿಂದೂಸ್ತಾನಿ ಗಾಯನ) ದಲ್ಲಿ ದಾಖಲಾತಿ ಪಡೆದು, ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ವಿ.ವಿ ಗೆ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.
ಕುಮಾರಿ ರಂಜನಿ ಆರತಿಯವರಿಗೆ ಹಂಪಿ ಕನ್ನಡ. ವಿ.ವಿ ಕುಲಪತಿಗಳು, ಆಡಳಿತ ವರ್ಗದವರು, ಇನ್ನೋರ್ವ ಸಂಗೀತ ಗುರುಗಳಾದ ಪಂ. ವಿರುಪಾಕ್ಷಪ್ಪ ಇಟಗಿ, ತಾಯಿಯವರಾದ ರತ್ನಮ್ಮ ಆರತಿ, ವಿಶೇಷ ಪೋಷಕರಾದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಡಾ. ಆರ್.ಮೋಹನರಾಜ್, ಬಂಧು-ಬಳಗದವರು, ಗಂಗಾವತಿಯ ಸಾರ್ವಜನಿಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ