ಜೂಡಿ ನ್ಯೂಸ್ :
ಪಾಶ್ಚಿಮಾತ್ಯ ಕಲೆಯಿಂದ ದೇಶಿಯ ಕಲೆಗೆ ಪೆಟ್ಟು : ಕೆ.ಜಿ.ಕುಲಕರ್ಣಿ
ಕೊಪ್ಪಳ : ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಕಲೆ ಮತ್ತು ಸಂಗೀತದ ಬೆನ್ನು ಬಿದ್ದು, ನಮ್ಮ ಮೂಲ ದೇಶಿಯ ಕಲೆ ಮತ್ತು ಸಂಗೀತಕ್ಕೆ ತುಂಬಾ ಹಿನ್ನಡೆಯಾಗುತ್ತಿದೆ. ಇದು ತುಂಬಾ ವಿಷಾಧಕರ ಸಂಗತಿಯಾಗಿದೆ. ಪಾಶ್ಚಿಮಾತ್ಯ ಕಲೆಯಿಂದ ದೇಶಿಯ ಕಲೆಗೆ ಪೆಟ್ಟು ಬೀಳುತ್ತಿದೆ ಎಂದು ಖ್ಯಾತ ಹಿರಿಯ ವೈದ್ಯರಾದ ಡಾ.ಕೆಜಿ.ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.
ಅವರು ನಗರದ ರಾಘವೇಂದ್ರಸ್ವಾಮಿಗಳವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಸಂಸ್ಕಾರ ಭಾರತಿಯ ಜಿಲ್ಲಾ ಪದಾಧಿಕಾರಿಗಳು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವ ಪೀಳಿಗೆಯು ನಮ್ಮ ಮೂಲವನ್ನು ಎಂದಿಗೂ ಮರೆಯಬಾರದು, ಪಾಶ್ಚಿಮಾತ್ಯ ಕಲೆ ಮತ್ತು ಸಂಗೀತದ ವ್ಯಾಮೋಹಕ್ಕೆ ಒಳಗಾಗದೇ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು. ಈ ನಿಟ್ಟಿನಲ್ಲಿ ಸಂಸ್ಕಾರ ಭಾರತಿಯ ಸಂಘಟನೆ ಈ ಕೆಲಸವನ್ನು ಮಾಡಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಕಾರ ಭಾರತಿಯ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಹ್ಲಾದ ಅಗಳಿ ಮಾತನಾಡಿ, ನಮ್ಮ ಮೂಲ ಉದ್ದೇಶ ದೇಶಿಯ ಕಲೆಯನ್ನು ಸಂರಕ್ಷಿಸಿ ಬೆಳೆಸುವುದು, ಈ ನಿಟ್ಟಿನಲ್ಲಿ ನಮ್ಮ ಮೂಲ ಸಂಸ್ಕೃತಿಯ ಉಳಿವಿಗಾಗಿ ನಾವುಗಳ ಸದಾ ಸಿದ್ಧ ಎಂದು ಹೇಳಿದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಕಲಾವಿದ ಕೃಷ್ಟ ಸೊರಟೂರ ಉಪಸ್ಥಿತರಿದ್ದರು. ಸಂಸ್ಕಾರ ಭಾರತಿಯ ಉತ್ತರ ಪ್ರಾಂತದ ಮುಖ್ಯಸ್ಥರಾದ ಶ್ರೀನಿವಾಸ ರವರು ಧ್ಯೇಯಗೀತೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಾದಿರಾಜ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರೆ, ಶ್ರೀನಿವಾಸ ಜೋಶಿ ಕೊನೆಯಲ್ಲಿ

More Stories
ಮಹಿಳೆ ಕೇವಲ ಗೃಹಿಣಿ ಅಲ್ಲ, ಸಮಾಜದ ನಿರ್ಮಾತೃ, ಮಾರ್ಗದರ್ಶಕಿ : ಡಾ. ಅನುಸೂಯ ಅಂಗಡಿ
ಹಂಪಾಪಟ್ಟಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಅರವಟ್ಟಿಗೆ ಪ್ರಾರಂಭ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್