July 13, 2025

ನೆಮ್ಮದಿ ಬದುಕಿಗೆ ಪುರಾಣ ಪ್ರವಚನ ಪೂರಕ :ಶ್ರೀ ಗುರು ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು

ಜೂಡಿ ನ್ಯೂಸ್ :

ಶಹಾಪುರ : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಪುರಾಣ ಪ್ರವಚನಗಳು ಆಲಿಸುವುದರಿಂದ ಬದುಕಿಗೆ ನೆಮ್ಮದಿ ಸಿಗುತ್ತದೆ ಎಂದು ಹಾಲುಮತ ಗುರುಪೀಠ ಸರೂರ ಅಗತೀರ್ಥ ಪರಮಪೂಜ್ಯರಾದ ಶ್ರೀ ಗುರು ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಸೈದಾಪುರ ಗ್ರಾಮದ ಶ್ರೀ ಮಾಳಿಂಗರಾಯರ ಜಾತ್ರಾ ಮಹೋತ್ಸವ ಅಂಗವಾಗಿ ಕುರುಬರ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿರುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಮನುಷ್ಯ ಯಾಂತ್ರಿಕ ಬದುಕಿನ ಕಡೆಗೆ ಸಾಗಿ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಗ್ರಾಮೀಣ ಭಾಗಗಳಲ್ಲಿ ಜರಗುವ ಹಬ್ಬ,ಹರಿದಿನ,ಪುರಾಣ,ಪ್ರವಚನ ಮತ್ತು ಜಾತ್ರೆಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮರಸ್ಯ ಮೂಡುತ್ತದಲ್ಲದೆ ಮನಸ್ಸಿಗೆ ಖುಷಿ ನೀಡುತ್ತದೆ ಎಂದು ಕೆರೂಟಗಿಯ ಪಟ್ಟದ ಪೂಜಾರಿಗಳಾದ ಪರಮಪೂಜ್ಯ ಶ್ರೀ ಮಾಳಿಂಗರಾಯ ದೇವರು ನುಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ದೇವೇಂದ್ರಪ್ಪ ಮೇಟಿ,ಪರ್ವತ ರೆಡ್ಡಿ ಪೊಲೀಸ್ ಪಾಟೀಲ್,ಶರಣು ಮೇಟಿ, ಶರಣಬಸವ ಪೊಲೀಸ್ ಬಿರಾದರ್, ಸೇರಿದಂತೆ ಗ್ರಾಮದ ಸದ್ಭಕ್ತರು ಉಪಸಿತರಿದ್ದರು,ಬೂದಯ್ಯ ಹಿರೇಮಠ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿದವು

ವರದಿ  ಬಸವರಾಜ ಶಿನ್ನೂರ