ಜೂಡಿ ನ್ಯೂಸ್ :
ಹೊಸಪೇಟೆಯ : ಕರ್ನಾಟಕ ಗಮಕ ಕಲಾ ಪರಿಷತ್, ಶ್ರೀ ವಾಗ್ದೇವಿ ಗಮಕಲ ಪ್ರತಿಷ್ಠಾನ ಜಿಲ್ಲಾ ಘಟಕ ವಿಜಯನಗರ ವತಿಯಿಂದ ಕವಿ ಕಾವ್ಯ ಪರಿಚಯ ಭಾಷಣ ಸ್ಪರ್ಧೆಯಲ್ಲಿ ಹೊಸಪೇಟೆಯ ಎಸ್,ಬಿ,ಬಿ, ಎನ್, ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ನಾಗರಾಜ್ ಗಂಟಿ ಜಿಲ್ಲಾ ಮಟ್ಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ…
ಹಾಗೆ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಮಂಜುಳಾ ಏನ್, ದ್ವಿತೀಯ ಸ್ಥಾನ, ಶಿವಕುಮಾರ್ C, ಮತ್ತು ಪ್ರಶಾಂತ್ ಕುಮಾರ್ ಸಮಾಧಾನಕರ ಬಹುಮಾನಗಳಿಸಿದ್ದಾರೆ…
ಪ್ರಥಮ ಸ್ಥಾನ ಗಳಿಸಿ ನಾಗರಾಜ ಗಂಟಿ ಜನವರಿ 12 ಬೆಂಗಳೂರಿನಲ್ಲಿ ನಡೆಯುವ ಕುಮಾರವ್ಯಾಸ ಜಯಂತಿಯ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಭಾಗವಹಿಸುತ್ತಾರೆ ಎಂದು ವಿಜಯನಗರ ಜಿಲ್ಲಾ ಗಮಕ ಕಲಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾದ ಶ್ರೀ ಮತಿ ಪಲ್ಲವಿ ಆರ್ ಭಟ್ ರವರು ತಿಳಿಸಿದ್ದಾರೆ…
ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಗೆ… ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಶ್ವನಾಥ ಗೌಡ, ಹಾಗೂ ಮಹಾ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ, ಬಾದಾಮಿ ಕರಿಬಸವರಾಜ್, ಹಾಗೆ ಮಹಾವಿದ್ಯಾಲಯದ ಆಧ್ಯಾಪಕರಾದ, ಡಾ: ಜಗದೀಶ್, ಡಾ: ಸತೀಶ್ ಸೂರಿಮಠ್, ಡಾ ಶಿವನಗೌಡ ಸಾತ್ಮರ್, ಡಾ: ಪಾರ್ವತಿ ಕೆಎಂ. ಡಾ. ಮಲ್ಲಿಕಾ, ಡಾ. ಶೋಭಾ ಪಾಟೀಲ್, ಇಟ್ಟಗಿ ಮಲ್ಲಿಕಾರ್ಜುನ, ಬಿದರಿಕುಂದಿ ಮಲ್ಲಿಕಾರ್ಜುನ, ಮಹಾವಿದ್ಯಾಲಯದ ಅಧ್ಯಾಪಕರು ಅಭಿನಂದನೆ ತಿಳಿಸಿ, ರಾಜ್ಯಮಟ್ಟದಲ್ಲಿಯೂ ಸಹ ಸ್ಥಾನ ಗಳಿಸಲಿ ಎಂದು ಶುಭ ಹಾರೈಕೆ ಮಾಡಿದ್ದಾರೆ….
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ