ಜೂಡಿ ನ್ಯೂಸ್ :
ಹೊಸಪೇಟೆ: ಮರಿಯಮ್ಮನಹಳ್ಳಿ:ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣಕೃಷಿ ಪತ್ತಿನ ಸಹಕಾರಸಂಘದ ಅಧ್ಯಕ್ಷರಾಗಿ ಬಿ.ವಿಜಯಕುಮಾರ್ ಹಾಗೂ ಉಪಾದ್ಯಕ್ಷರಾಗಿ ಕಮ್ಯಾನಾಯ್ಕ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸರ್ವಸದಸ್ಯರು ಹಾಗು ವ್ಯವಸ್ಥಾಪಕರನ್ನೊಳಗೊಂಡ ಪೂರ್ಣ ಕೋರಂಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಗಳಿಗೆ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿಯಾಗಿದ್ದ ಬಿ.ಪರಶುರಾಮ ಘೋಷಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಈ.ಶೇಷಪ್ಪ,ಟಿ.ಅಜ್ಜಪ್ಪ,ಕೆ.ಶಿವಾನಂದ,ಎಂ.ಮಾಬುಸಾಬ್,ಈ.ಯರಿಸ್ವಾಮಿ,ಹೆಚ್.ರಮೇಶ್,ಚಿಕ್ಕೊಳ್ಳಿರಾಮಕೃಷ್ಣ,ಮಂಜುಳ,ಹೆಚ್.ಅನ್ನಪೂರ್ಣ,ಡಿ.ಲಾಲ್ಯಾನಾಯ್ಕ್,ವ್ಯವಸ್ಥಾಪಕ ಎಂ.ರಮೇಶ್,ಕಾರ್ಯನಿರ್ವಾಹ ಅಧಿಕಾರಿ ಬಸವರಾಜಯ್ಯ,ಸಹಾಯಕ ಚುನಾವಣಾಧಿಕಾರಿ ಗಣೇಶ್.
ಸ್ಥಳಿಯ ಮುಖಂಡರಾದ ಎಸ್.ಕೃಷ್ಣನಾಯ್ಕ್,ಗೋವಿಂದರಪರಶುರಾಮ,ಎನ್.ಸತ್ಯನಾರಾಯಣ,ಎನ್.ಎಸ್.ಬುಡೇನಸಾಬ್,ವೀರೇಶ್ವರಸ್ವಾಮಿ,ಮಾಜಿ.ಜಿ.ಪಂ.ಸದಸ್ಯಎಲ್.ಮಂಜುನಾಥ,ತಳವಾರಹುಲುಗಪ್ಪ,ಹುರುಕೊಳ್ಳಿಮಂಜುನಾಥ,ಕೊಟ್ಗಿ ಮಾರತೇಶ,ತಾಯಪ್ಪ ಸೇರಿದಂತೆ ಇತರರಿದ್ದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ