July 13, 2025

ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಇಂಜಿನಿಯರ್ ಲಾಡ್ಜ್ ನಲ್ಲಿ ನೇಣಿಗೆ ಶರಣು

ಜೂಡಿ ನ್ಯೂಸ್ :

ಗದಗ: ನಿರ್ಮಿತಿ ಕೇಂದ್ರದ‌ ಪ್ರೊಜೆಕ್ಟ್ ಇಂಜನೀಯರ್ ಓರ್ವ ಖಾಸಗಿ‌ ಹೋಟೆಲ್‌ ನ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಪಲ್ಲವಿ ಲಾಡ್ಜ್ ನಲ್ಲಿ ನಡೆದಿದೆ. ಲಾಡ್ಜ್ ನ ರೂಮ್ ನಂಬರ್ 513 ರಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು 54 ವರ್ಷದ ಶಂಕರಗೌಡ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲ ಹಾತಲಗೇರಿ ನಿವಾಸಿಯಾಗಿದ್ದು, ಹತ್ತಾರು ವರ್ಷಗಳಿಂದ ಗದಗ ನಗರದ ಹಾತಲಗೇರಿ ನಾಕಾ ಬಳಿಯ ನಿವಾಸಿಯಾಗಿದ್ದರು. ಗದಗ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಇಂಜನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ರೋಣ ತಾಲೂಕಿನ ನಿರ್ಮಿತಿ ಕೇಂದ್ರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. 

ಇಂದು ಬೆಳಿಗ್ಗೆ 7:30 ರ ಸುಮಾರಿಗೆ ಸೈಟ್ ವಿಸಿಟ್ ಮಾಡಿ ಬರುವುದಾಗಿ ಮನೆಯವರ‌ ಬಳಿ ಹೇಳಿ ಹೊರಬಂದಿದ್ದಾರೆ‌. ಮನೆಯಿಂದ ಬಂದು ಪಲ್ಲವಿ ಲಾಡ್ಜ್ ನಲ್ಲಿ ಹಗ್ಗದೊಂದಿಗೆ ನೇಣಿಗೆ ಶರಣಾಗಿದ್ದಾರೆ. ಶಂಕರಗೌಡನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ‌. ಆದ್ರೆ ಈ ಇಂಜನೀಯರ್ ಆತ್ಮಹತ್ಯೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಯಾವುದೇ ಸಾಲ‌ ಮಾಡಿರಲಿಲ್ಲ. ಬೇರೆ ಯಾರಿಗೋ ಲೇವಾದೇವಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿಕೊಂಡು ತಾನು ಜವಾಬ್ದಾರಿ ತೆಗೆದುಕೊಂಡಿದ್ದ. ಅವರು ಸಮಯಕ್ಕೆ ಸರಿಯಾಗಿ ಹಣ ಕೊಡದಕ್ಕೆ ಜವಾಬ್ದಾರಿ ಉಸ್ತುವಾರಿ ವಹಿಸಿಕೊಂಡಿದ್ದ ಶಂಕರಗೌಡನನ್ನು ಪೀಡಿಸುತ್ತಿದ್ದರು ಎಂಬ ಆರೋಪವಿದೆ. 

ಅವರ ಸಾಲದ ಬಗ್ಗೆ ಅಥವಾ ಕೆಲಸ, ಅಧಿಕಾರಿಗಳು, ಸಿಬ್ಬಂದಿಗಳು ಕಿರುಕುಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೂಂ ಗೆ ಪೊಲೀಸರು ನನ್ನನ್ನು ಬಿಡಲಿಲ್ಲ, ವಿಷಯ ತಿಳಿದು ಮೂರ್ಛೆ ಹೋಗಿಬಿದ್ದೆ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ. ಸಣ್ಣ ಪುಟ್ಟ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಈ ಬಗ್ಗೆ ತನಿಖೆ ಆಗಬೇಕು ಅಂತಿದ್ದಾರೆ ಕುಟುಂಬಸ್ಥರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನಿಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ತನಿಖೆ ನಂತರ ಇಂಜನಿಯರ್ ಸಾವಿನ ಸತ್ಯಾಂಶ ಹೊರಬಿಳ್ಳಲಿದೆ.