July 13, 2025

ಗವಿಮಠದ ಮಹಾದಾಸೋಹಕ್ಕೆ ಹರಿದು ಬರುತ್ತಿರುವ ರೊಟ್ಟಿ ಹಾಗೂ ದವಸ, ಧಾನ್ಯ

ಜೂಡಿ ನ್ಯೂಸ್ :

ಕೊಪ್ಪಳ : ದಕ್ಷೀ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಸದ್ಭಕ್ತರಿಂದ ದವಸ-ಧಾನ್ಯ, ರೊಟ್ಟಿಗಳನ್ನು ಶ್ರೀಮಠಕ್ಕೆ ತಂದು ಅರ್ಪಿಸುತಿದ್ದಾರೆ.

ಇಂದು ಕನಕಗಿರಿ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದ ಸದ್ಭಕ್ತರಿಂದ ೫೬ ಪಾಕೇಟ್ ನೆಲ್ಲು ಮತ್ತು ಇತರ ದವಸ ಧಾನ್ಯ ಹಾಗೂ ಬಳ್ಳಾರಿ ತಾಲೂಕಿನ ಬೆವಿನಹಳ್ಳಿ ಗ್ರಾಮದ ಸದ್ಭಕ್ತರಿಂದ ೧೦ ಕ್ವಿಂಟಲ್ ಅಕ್ಕಿ ಟ್ರಾö್ಯಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ ಭಾವ, ಸಡಗರದೊಂದಿಗೆ ಶ್ರೀಗವಿಮಠಕ್ಕೆ ಆಗಮಿಸಿ ಮಹಾದಾಸೋಹಕ್ಕೆ ಸಲ್ಲಿಸಿದರು.

ಇದರಿಂದಾಗಿ ಗವಿಮಠದಲ್ಲಿ ರೊಟ್ಟಿಗಳ ಸಪ್ಪಳ ಆರಂಭವಾಗಿದೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.