July 13, 2025

ರಸ್ತೆ ಒತ್ತುವರಿ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಬೀಳುತ್ತೆ ಫೈನ್: ಪಿಎಸ್ಐ ಮೌನೇಶ್ ರಾಥೋಡ್ ಖಡಕ್ ವಾರ್ನಿಂಗ್ 

ಜೂಡಿ ನ್ಯೂಸ್ :

ಮರಿಯಮ್ಮನಹಳ್ಳಿ: ಪಟ್ಟಣದ ಮುಖ್ಯಬೀದಿ ಸೇರಿ ಬೀದಿಗಳ ಎಲ್ಲಾ ರಸ್ತೆಗಳನ್ನು ಒತ್ತುವರಿ ಮಾಡಿ ಸಂಚಾರಕ್ಕೆ ಅಡಚಣೆ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತದೆಂದು ಪಟ್ಟಣದ ಪಿ.ಎಸ್.ಐ.ಮೌನೇಶರಾಥೋಡ ಹೇಳಿದರು.


ಅವರು ಇತ್ತೀಚೆಗೆ ಪಟ್ಟಣದ ಮುಖ್ಯಬೀದಿಯಲ್ಲಿ,ಸಂಚಾರ ಕುರಿತುಜಾಗೃತಿ ಮೂಡಿಸಿ ಹಾಗು ಪಾದಚಾರಿ(ಪುಟ್ ಪಾತ್) ರಸ್ತೆಯನ್ನು ಒತ್ತುವರಿ ಮಾಡಿದನ್ನು ತೆರವುಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.


ರಸ್ತೆಯ ಬದಿಯಲ್ಲೇ ವ್ಯಾಪಾರವಹಿವಾಟು ನಡೆಸುವುದು,ರಸ್ತೆಯ ಮದ್ಯದಲ್ಲೇ ವಾಹನಗಳನ್ನು ನಿಲ್ಲಿಸುವುದು,ದ್ವಿಚಕ್ರವಾಹನಗಳಲ್ಲಿ 3-4 ಜನ ಪ್ರಯಾಣಿಸುವುದು,ಅಪ್ರಾಪ್ತರು ವಾಹನಚಲಾಯಿಸುವುದು,ರಸ್ತೆಯ ಮದ್ಯದಲ್ಲೇ ನಿಲ್ಲುವುದು ಸಂಚಾರಿ ನಿಯಮದ ವಿರೋಧವಾಗುತ್ತದೆ.ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಎ.ಎಸ್.ಐ.ಗಳಾದ ಮಂಜುನಾಥ,ನಾಗಪ್ಪ,ರೂಪ್ಲನಾಯ್ಕ್ ಸೇರಿದಂತೆ ಇತರರಿದ್ದರು.