ಜೂಡಿ ನ್ಯೂಸ್ :
ಯಲಬುರ್ಗಾ: ತಾಲೂಕಿನ ಮುಧೋಳ ಜಿ.ಪಂ. ಕ್ಷೇತ್ರ ‘೨ಎ’ ಆದರೆ ನಾನು ಬಿ.ಜೆ.ಪಿ. ಟಿಕೇಟ್‌ನ ಪ್ರಬಲ ಆಕಾಂಕ್ಷಿ ಎಂದು ಬಿ.ಜೆ.ಪಿ.ಯುವ ಮುಖಂಡ ಶಾಮೀದಸಾಬ ಮುಲ್ಲಾ ಕರಮುಡಿ ಹೇಳಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ನಾನು ಕಳೆದ ೧೦ ವರ್ಷಗಳಿಂದ ಬಿ.ಜೆ.ಪಿ. ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತನಾಗಿ ಮುಖ್ಯವಾಗಿ ತಾಲೂಕಿನಲ್ಲಿ ಜರುಗಿದ ಬಿ.ಜೆ.ಪಿ. ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆ.ವಿಶೇಷವಾಗಿ ಈ ತಾಲೂಕಿನಲ್ಲಿ ಬಿ.ಜೆ.ಪಿ.ಯ ಕಾರ್ಯಕರ್ತರ ಜೊತೆಗೂಡಿ ಪಕ್ಷ ನಿಷ್ಠನಾಗಿ ಗುರುತಿಸಿಕೊಂಡಿದ್ದೇನೆ. ಮುಧೋಳ ಜಿ.ಪಂ. ವ್ಯಾಪ್ತಿಯ ಮತದಾರ ಪ್ರಭುಗಳು ಮತ್ತು ವಿಶೇಷವಾಗಿ ಎಲ್ಲಾ ಜಾತಿ ಜನಾಂಗಗಳ ಜನರ ಪ್ರತಿ ಪಾತ್ರಕ್ಕೆ ನಾನು ಬದ್ದನಾಗಿದ್ದೇನೆ. ಹೀಗಾಗಿ ಮುಧೋಳ ಕ್ಷೇತ್ರ ೨ಎ ಆದರೆ ಮುಧೋಳ ಜಿ.ಪಂ. ಕ್ಷೇತ್ರದ ಜನರೇ ನನ್ನನ್ನು ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬಿ.ಜೆ.ಪಿ.ಯ ಮಾಜಿ ಶಾಸಕರಾದ ಹಾಲಪ್ಪ ಬಸಪ್ಪ ಆಚಾರ ರವರ ನಾಯಕತ್ವದ ಮೇಲೆ ನಾನು ಅಪಾರ ನಂಬಿಕೆಯನ್ನು ಹೊಂದಿದ್ದೇನೆ. ಹೀಗಾಗಿ ನಾನು ಈ ಬಾರಿ ಮುಧೋಳ ಜಿ.ಪಂ. ಕ್ಷೇತ್ರ ೨ಎ ಆದರೆ ಬಿ.ಜೆ.ಪಿ. ವರಿಷ್ಠರು ನನಗೆ ಬಿ.ಜೆ.ಪಿ. ಟಿಕೇಟ್ ನೀಡುವ ವಿಶ್ವಾಸ ಇದ್ದು ಒಂದು ವೇಳೆ ನನಗೆ ಬಿ.ಜೆ.ಪಿ. ಟಿಕೇಟ್ ನೀಡಿದರೆ ಮುಧೋಳ ಜಿ.ಪಂ. ವ್ಯಾಪ್ತಿಯ ಮತದಾರ ದೇವರು ನನಗೆ ಆಶಿರ್ವಾದ ಮಾಡುತ್ತಾರೆ.
ಹೀಗಾಗಿ ನಾನು ಮುಧೋಳ ಜಿ.ಪಂ. ಕ್ಷೇತ್ರ ೨ಎ ಆದರೆ ನಾನು ಬಿ.ಜೆ.ಪಿ ಟಿಕೇಟ್ ನ ಪ್ರಬಲ ಆಕಾಂಕ್ಷಿ ಎಂದು ಶಾಮೀದಸಾಬ ಮುಲ್ಲಾ ಕರಮುಡಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ