July 13, 2025

ದೇವಾಲಯಗಳಿಗೆ ಸಾಂಪ್ರದಾಯಿಕ ಹೊಸರೂಪ ನೀಡಲಾಗುವುದು :ಶಾಸಕ ನೇಮಿರಾಜನಾಯ್ಕ್

ಜೂಡಿ ನ್ಯೂಸ್ :

ಮರಿಯಮ್ಮನಹಳ್ಳಿ:ಲಕ್ಷ್ಮೀನಾರಾಯಣಸ್ವಾಮಿ,ಆಂಜನೇಯಸ್ವಾಮಿ ದೇವಾಲಯಗಳನ್ನು ಶಿಲಾಮಯ ದೇವಾಲಯಗಳನ್ನಾಗಿ ಸಾಂಪ್ರದಾಯಿಕವಾಗಿ ಹೊಸರೂಪ ನೀಡಲಾಗುವುದೆಂದು ಶಾಸಕ ನೇಮಿರಾಜನಾಯ್ಕ್ ಹೇಳಿದರು.

ಅವರು ಪಟ್ಟಣದ ಲಕ್ಷ್ಮೀನಾರಾಯಣಸ್ವಾಮಿ,ಆಂಜನೇಯಸ್ವಾಮಿ ದೇವಸ್ಥಾನದಲ್ಲಿ,ದೇವಸ್ಥಾನ ಅಭಿವೃದ್ದಿಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ವಿವಿಧ ಯೋಜನೆಗಳಡಿಯಲ್ಲಿ ಅಂದಾಜು 56 ಲಕ್ಷರೂ.ಗಳ ವೆಚ್ಚದಲ್ಲಿ,ರಥನಿರ್ಮಾಣತಜ್ಞ ಹಾಗು ವಾಸ್ತುಪ್ರವೀಣರಾದ ರಾಜಶೇಖರಹೆಬ್ಬಾರರು ದೇವಸ್ಥಾನದ ನವೀಕರಣ ಕಾರ್ಯ ಮಾಡಲಿದ್ದಾರೆಂದರು.

ರಾಜಶೇಖರಹೆಬ್ಬಾರಮಾತನಾಡಿ,ವಾಸ್ತುಶಾಸ್ತ್ರದ ಪ್ರಕಾರವಾಗಿ ಅಧಿಷ್ಟಾನ, ಕೆಳಭಾಗದಲ್ಲಿ ಪಂಚಾಂಗ ಪಾದುಕದಲ್ಲಿ ಮೂಲ ಗಣಪನವೇದಿಕೆ, ಭಿತ್ತಿಸ್ತಂಭಗಳು, ಘನ ದ್ವಾರಗಳು,ಪಂಜರಗಳು, ಮೇಲ್ಭಾಗದಲ್ಲಿ ಉತ್ತರಗಳು ಅಲ್ಲಿಯವರೆಗೆ ಶಾಸ್ತ್ರ ಪಕ್ಷಿಗಳ ಪ್ರಕಾರವಾಗಿನಿರ್ಮಿಸಲು,ದೇವರ ನಕ್ಷತ್ರದ ಪ್ರಕಾರನೀಲನಕ್ಷೆ ತಯಾರಿಸಲಾಗಿದೆ.ನಂತರ ಶಾಸ್ತ್ರದ ಪ್ರಕಾರವಾಗಿ ಒಳ ಮತ್ತು ಹೊರ ಭಾಗದಲ್ಲಿ ಶಿಲಾಮೂರ್ತಿಗಳಿಂದ ಪುರಾತನ ಶೈಲಿಯಲ್ಲೇ ನಿರ್ಮಿಸಲಾಗುವುದೆಂದು ನವೀಕರಣದ ಕುರಿತುಮಾಹಿತಿ ನೀಡಿದರು.

31ಅಡಿಯಮೂಲದೇವರ,ಆಂಜನೇಯಸ್ವಾಮಿಯ 29ಅಡಿಗಳು ಎತ್ತರದರಥಗಳು,ವಾಸ್ತುಶಾಸ್ತ್ರದ ಪ್ರಕಾರವಾಗಿ ವಿವಿಧ ಅಂಕಣಗಳ ಜೊತೆ ಎರಡೂ ಬ್ರಹ್ಮ ರಥಗಳು ಈ ಬಾರಿಯ ರಥೋತ್ಸವದ ಸಮಯಕ್ಕೆ ಸಿದ್ಧಗೊಳ್ಳಲಿವೆ. ರಥಗಳಿಗೆ ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಬ್ರೇಕ್ ಮತ್ತು ಸ್ಟೇರಿಂಗ್‌ಗಳನ್ನು ಅಳವಡಿಸಲಾಗುವುದು. ರಥವನ್ನು ಎಳೆಯುವ ವೇಗಕ್ಕನುಗುಣವಾಗಿ ಬ್ರೇಕನ್ನು ಅಳವಡಿಸಲಾಗುವುದೆಂದರು. 

ದೇವಸ್ಥಾನ ಆಡಳಿತ ಮಂಡಳಿಗೆ ಸ್ಥಳೀಯ ರಾಜಸ್ಥಾನಿ ಮರ್ವಾಡಿ ಸಮಾಜದವರ್ತಕರು ಹಾಗೂ ಕುಟುಂಬಸ್ಥರು 5,32,000 ರೂ.ಗಳನ್ನು ದೇಣಿಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳಾದ ಚಿದ್ರಿಸತೀಶ್, ಗೋವಿಂದರ ಪರುಶುರಾಮ,ತಳವಾರ ದೊಡ್ಡರಾಮಣ್ಣ,ಡಿ.ನರಸಿಂಹಮೂರ್ತಿ,

ರಘುವೀರ್,ಉರವಕೊಂಡ ವೆಂಕಟೇಶ್,ಈ ಎರ್ರಿಸ್ವಾಮಿ,ಸಜ್ಜೇದವಿಶ್ವನಾಥ,ಎಲೆಗಾರಮಂಜುನಾಥ,ರುದ್ರಮುನಿ,ಸಣ್ಣದುರುಗಪ್ಪಸೇರಿದಂತೆ ಇತರರಿದ್ದರು.

ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಟ ಏಕಾಧಶಿ

ಮರಿಯಮ್ಮನಹಳ್ಳಿ: ಪಟ್ಟಣದ ಆರ್ಯವೈಶ್ಯ ಸಮಾಜದ ನಗರೇಶ್ವರ ದೇವಸ್ಥಾನದ,ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಟ ಏಕಾಧಶಿಯ ಅಂಗವಾಗಿ,ಶ್ರೀವೆಂಕಟೇಶ್ವರ ಸ್ವಾಮಿಗೆ ಕ್ಷೀರಾಭಿಷೇಕ,ಸಹಸ್ರ ತುಳಸಿ,ಪುಷ್ಪಾರ್ಚನೆ ಹಾಗು

ಶ್ರೀದೇವಿ,ಭೂದೇವಿಸಹಿತ ಶ್ರೀವಾರಿಗೆ ತುಲಾಭಾರ,ವಿಷ್ಣುಸಹಸ್ರನಾಮ ಪಾರಾಯಣ,ಭಕ್ತಿಗೀತೆಗಳಗಾಯನ ಸೇರಿದಂತೆ ವಿವಿಧ ಧಾರ್ಮಿಕ ವಿಧಾನಗಳು ನೆರವೇರಿದವು.ಈ ಸಂಧರ್ಭದಲ್ಲಿ ಆರ್ಯವೈಶ್ಯಸಂಘ,ವಾಸವಿಮಹಿಳಾಸಮಾಜ,ವಾಸವಿಯುವಜನ ಸಂಘ,ವಾಸವಿಕನ್ನಿಕೆಯರ ಸಂಘ,ವಾಸವಿಕ್ಲಬ್ಬಿನ ಪದಾಧಿಕಾರಿಗಳು ಹಾಜರಿದ್ದರು.