ಜೂಡಿ ನ್ಯೂಸ್ :
ಕರ್ನಾಟಕ ಗಮಕ ಕಲಾ ಪರಿಷತ್, ಶ್ರೀ ವಾಗ್ದೇವಿ ಗಮಕಲಾ ಪ್ರತಿಷ್ಠಾನ, ಸಂಯುಕ್ತಾಶ್ರಯದಲ್ಲಿ ಕನ್ನಡ ಸಹೃದಯ ಪ್ರತಿಷ್ಠಾನ, ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಿಂದ ಜನವರಿ 12 ಬೆಂಗಳೂರಿನಲ್ಲಿ ನಡಿದ ಕವಿ ಕಾವ್ಯ ಪರಿಚಯ ಭಾಷಣ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪದವಿ ವಿಭಾಗದಿಂದ “ಶರಣರ ವಚನ ಕಾವ್ಯ”ಎಂಬ ವಿಷಯದ ಕುರಿತು ಭಾಷಣ ಮಾಡಿದ ವಿಜಯನಗರ ಜಿಲ್ಲೆಯ ಹೊಸಪೇಟೆಯ SBBN B.Ed. ಕಾಲೇಜಿನ ಪ್ರಶಿಕ್ಷಣಾರ್ಥಿ ನಾಗರಾಜ್ ಗಂಟಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ಬಹುಮಾನ ಮತ್ತು ಅಭಿನಂದನಾ ಪತ್ರ ಪಡೆದಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಸಿ,ವಿ, ಶ್ರೀಮತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…..
ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿಜಯನಗರ ಜಿಲ್ಲೆಯ ಪ್ರತಿಭೆ ನಾಗರಾಜ್ ಗಂಟಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಜಿಲ್ಲಾ ಗಮಕ ಕಲಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪಲ್ಲವಿ ಆರ್ ಭಟ್ ರವರು ತಿಳಿಸಿದ್ದಾರೆ…
ಮಹಾವಿದ್ಯಾಲಯದ ಪ್ರಾಶಿಕ್ಷಣಾರ್ಥಿ ನಾಗರಾಜ್ ಗಂಟಿ ಸಾಧನೆಗೆ… ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದಬಾದಾಮಿ ಕರಿ ಬಸವರಾಜ್ , ಪ್ರಾಂಶುಪಾಲರಾದ
ಡಾ. ವಿಶ್ವನಾಥ ಗೌಡ, ಮಹಾವಿದ್ಯಾಲಯದ ಆಧ್ಯಾಪಕರಾದ, ಡಾ: ಜಗದೀಶ್, ಡಾ: ಸತೀಶ್ ಸೂರಿಮಠ್, ಡಾ :ಶಿವನಗೌಡ,ಸಾತ್ಮರ್, ಡಾ: ಪಾರ್ವತಿ ಕೆಎಂ. ಡಾ:ಮಲ್ಲಿಕಾ, ಡಾ: ಶೋಭಾ ಪಾಟೀಲ್, ಡಾ:ಸಿದ್ದಲಿಂಗಸ್ವಾಮಿ,
ಇಟ್ಟಗಿ ಮಲ್ಲಿಕಾರ್ಜುನ, ಬಿದರಿಕುಂದಿ ಮಲ್ಲಿಕಾರ್ಜುನ, ಮಹಾವಿದ್ಯಾಲಯದ ಅಧ್ಯಾಪಕರು ಅಭಿನಂದನೆ ತಿಳಿಸಿ, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಮಹಾವಿದ್ಯಾಲಯಕ್ಕೆ ಹೆಸರು ತಂದಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ….
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ