July 13, 2025

ಇಟಗಿ ಉತ್ಸವದಲ್ಲಿ 5ನೇ ಜಾನಪದ ಸಮ್ಮೇಳನ

ಜೂಡಿ ನ್ಯೂಸ್ :

ಒಬ್ಬರ ಬಾಯಿಯಿಂದ ಇನ್ನೊಬ್ಬರಿಗೆ ಹರಿದು ಬಂದ ಕಲೆಯೇ ಜಾನಪದ : ಡಾ. ಜೀವನ್ ಸಾಬ್ ಬಿನ್ನಾಳ 

ಇಟಗಿ (ಕುಕನೂರು): ಮೊಬೈಲ್ ಯುಗದಲ್ಲಿಮೂಲ ಜನಪದ ಕಲೆ ನಶಿಸಿ ಹೋಗುತ್ತಿದ್ದು ಇಂದಿನ ಯುವ ಪೀಳಿಗೆ ಜಾನಪದ ದತ್ತ ಒಲವು ತೋರಿಸಬೇಕಿದೆ ಜನಪದದಲ್ಲಿ ನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಗ್ರಾಮೀಣ ಸೊಗಡಿನ ಹಾಡುಗಾರಿಕೆ ಇದ್ದು ಎಲ್ಲ ವರ್ಗಕ್ಕೂ ಇಷ್ಟವಾಗುವ ಒಂದು ಗಾಯನ ಶೈಲಿ .ಜನಪದದ ಮೂಲಕ ಭಾಷೆಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಅರ್ಥಮಾಡಿಕೊಳ್ಳಬಹುದು ಕನ್ನಡ ನಾಡಿನ ಜನಪದ ಸಂಸ್ಕೃತಿಯು ಉಚ್ರಾಯ ಸ್ಥಿತಿಯಲ್ಲಿ ಇದ್ದು ನಮ್ಮ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದೆ.ಕನ್ನಡ ನಾಡಿನ ಜನಪದ ಸಂಸ್ಕೃತಿಯ ಕುರಿತು ಅದ್ಭುತವಾಗಿ ಹಾಡಿನ ಮೂಲಕ ತಮ್ಮ ಉದ್ಘಾಟನಾ ನುಡಿಗಳಲ್ಲಿ ಜಾನಪದ ವೈಶಿಷ್ಟ್ಯವನ್ನು ಎಳೆ ಎಳೆಯಾಗಿ ಮಾರ್ಮಿಕವಾಗಿ ವಿವರಿಸುತ್ತಾ ಮಾತು ಮತ್ತು ಹಾಡುಗಳ ಮೂಲಕ ನಡೆದಿದ್ದ ಪ್ರೇಕ್ಷಕರಿಗೆ ಜಾನಪದ ರಸದೌತಣವನ್ನು ಉಣ ಬಡಿಸಿದರು.

ಕಂಪ್ಯೂಟರ್ ಜಗತ್ತಿನ ಇಂದಿನ ದಿನಮಾನಗಳಲ್ಲಿ ಜಾನಪದ ಹಾಡು,ಕಥೆ,ಕಾವ್ಯ,ಒಗಟು, ಗಾದೆ ಮಾತುಗಳು ಅವಸಾನದತ್ತ ಸಾಗುತ್ತಿದ್ದು, ಪ್ರವೃತ್ತಿಯಾಗಿಯಾದರೂ ಜಾನಪದ ಸಂಸ್ಕೃತಿಯನ್ನು ಇಂದಿನ ತಲೆಮಾರಿನವರಿಗೆ ಕಲಿಸಿ ಉಳಿಸಿ ಬೆಳೆಸಬೇಕಾಗಿದೆ ಎಂದು ಉತ್ಸವದ 5ನೇ ಜನಪದ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಹಿರೇಮಠ್ ಹೇಳಿದರು. ಅವರು ಇಟಗಿ ಉತ್ಸವ ಸಂಸ್ಕೃತಿಕ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು, ಪ್ರವಾಸೋದ್ಯಮ ಇಲಾಖೆ ಬೆಂಗಳೂರು,ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಇಟಗಿ ಉತ್ಸವದ ಐದನೇ ಜಾನಪದ ಸಮ್ಮೇಳನದ ಸರ್ವಾ ಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.

ಜಾನಪದ ಸಮ್ಮೇಳನದ ಕಾರ್ಯಕ್ರಮದ ನಿಮಿತ್ತ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರಿಂದ ಸೋಬಾನೇ ಪದಗಳು, ಜನಪದ ಹಾಡುಗಳು, ಸುಗಮ ಸಂಗೀತ,ನೃತ್ಯ ರೂಪಕ,ಹಂತಿ ಪದಗಳು,ಜನಪದ ಗೀತ ಗಾಯನದಂತ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ದೈನಂದಿನ ಜೀವನದಲ್ಲಿ ಜನಪದದ ಮಹತ್ವ ಕುರಿತು ಗಾಯನದ ಮೂಲಕ ವಿವರಿಸಿದರು. 

ವೈವಿಧ್ಯಮಯ ಜನಪದ ನೃತ್ಯ ರೂಪಕಗಳು ಸಮೂಹ ಜನಪದ ನೃತ್ಯಗಳು ಜನಪದ ಹಾಸ್ಯ ಜನಪದ ಗೀತೆ ಗಾಯನ ಕಾರ್ಯಕ್ರಮಗಳು ನಡೆದಿದ್ದ ಜನರನ್ನ ರಂಜಿಸಿದರು

ಮ್ಯೂಸಿಕ್ ಮೈಲಾರಿಯ ಜನಪದ ಗಾಯನಕ್ಕೆಜೈ ಕರುನಾಡ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕೊಡ್ಲಿ ಅವರ ಕನ್ನಡಪರ ಹೋರಾಟಕ್ಕೆ,  ಶ್ರೀಮತಿ ಅನ್ನಪೂರ್ಣ ಅವರ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಸೇವೆಗಾಗಿ, ಯಲ್ಲಪ್ಪ ಬಡಿಗೇರ್ ಬಾಣಾಪುರ್ ಅವರ ರಥ ಶಿಲ್ಪ ಕ್ಷೇತ್ರದ ಸೇವೆಗಾಗಿದೀಪ ಶ್ಯಾಮ್ ಗಂಗಾವತಿಯವರ ನೃತ್ಯ ಕ್ಷೇತ್ರದ ಸೇವೆಗಾಗಿ ರಾಮನಗರ ಜಿಲ್ಲೆಯ ಜಯಸಿಂಹ ಅವರ ಗಾಯನ ಕ್ಷೇತ್ರದ ಸೇವೆಗಾಗಿ ಕೋಲಾರದ ನೇಲದ ಕೃಷ್ಣಪ್ಪ ಅವರ ಹೋರಾಟದ ಗೀತೆಗಳ ಸೇವೆಗಾಗಿ ತುಮಕೂರಿರ ರಾಮಚಂದ್ರ ಕುಣಿಗಲ್ ಅವರ ಜನಪದ ಗಾಯನಕ್ಕಾಗಿ ಅರುಣ್ ಬಡಿಗೇರ್ ಕುಕನೂರ್ ಅವರ ರಥ ಶಿಲ್ಪ ಕ್ಷೇತ್ರದ ಸೇವೆಗಾಗಿಲೀಲಾದರ್ ಬೈಕಂಪಾಡಿ ಬಹರೇನ ಅವರ ಆನಿವಾಸಿ ಕನ್ನಡ ಸೇವೆಗಾಗಿ ಬಸವ ರೆಡ್ಡಿ ಅಬ್ಬಿಗೇರಿ ಗೋವಾ ಅವರ ಹೂರನಾಡ ಕನ್ನಡ ಸೇವೆ ಸೇರಿದಂತೆಇತರಅನೇಕ ಸಾಧಕರಿಗೆ ರಾಜ್ಯಮಟ್ಟದ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು 

ಕೋಲಾರದ ಎಂ ವಿ ಕೃಷ್ಣಪ್ಪ ಹಾಗೂ ಹುಲಗಿಯ ಶೃತಿ ಹ್ಯಾಟಿ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡು ಪ್ರೇಕ್ಷಕರಿಗೆ ಮುದ ನೀಡಿತು ನಂತರ ಯಲಬುರ್ಗಾ ತಾಲೂಕಿನ ಕೊಡಗುಂಟಿಯ ಮ್ಯೂಸಿಕ್ ಮೈಲಾರಿಯ ಜನಪದ ಹಾಡು ನೇರೆದಿದ್ದ ಪ್ರೇಕ್ಷಕರನ್ನ ಕುಣಿಯುವಂತೆ ಮಾಡಿತು

ಬೆಂಗಳೂರಿನ ರುಕ್ಮಿಣಿ ಸುರ್ವೆ ತಂಡದಿಂದ ಸಮೂಹ ನೃತ್ಯ ಬಿಜಾಪುರದ ಜೈವಿಹಾನ್ ಮಲ್ಲಿಕಾರ್ಜುನ ಮಠ ತಂಡದಿಂದ ಸಮೂಹ ಭರತನಾಟ್ಯಕುಕನೂರಿನ ರೀದ೦ ಡ್ಯಾನ್ಸ್ ಸ್ಟುಡಿಯೋ ತoಡದಿಂದ ಜಾನಪದ ನೃತ್ಯಗಳು ಇಟಗಿಯ ನ್ಯೂ ಮಹೇಶ್ವರ ಪಬ್ಲಿಕ್ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು

 ಇಟಗಿ ಉತ್ಸವ ಸಮಿತಿಯ ಎಂ ಬಿ ಅಳವಂಡಿ, ಮಹೇಶಬಾಬು ಸುರ್ವೆ,ಸಂಗಪ್ಪ ಕೊಪ್ಪಳ, ಬಸವರಾಜ್ ಹಳ್ಳಿ,ಸಾದಿಕ್ ಅಲಿ, ಶರಣಯ್ಯ ಗೊರಲೆಕೊಪ್ಪ, ಮಲ್ಲನಗೌಡ ಪಾಟೀಲ್,ಉಮೇಶ್ ಸುರ್ವೆ,ರಾಮಣ್ಣ ಬಾರಕೇರ,ಸರಸ್ವತಿ ಶಶಿಮಠ, ಶರಣಪ್ಪ ಹಾದಿ, ವೈ. ಬಿ. ಜೂಡಿ, ಉದಯ ತೋಟದ, ಇತರರಿದ್ದರು.

ಇಟಗಿ ಉತ್ಸವ ಸಮಿತಿಯ ಸಂಚಾಲಕ ಮಹೇಶ್ ಬಾಬು ಸುರ್ವೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರುರoಗಕರ್ಮಿ ಮತ್ತು ವಕೀಲರಾದಮಲ್ಲನಗೌಡ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರೂಇಟಗಿ ಉತ್ಸವ ಸಮಿತಿಯ ಅಧ್ಯಕ್ಷ ಬಾಬು ಸುರ್ವೆ  ವಂದಿಸಿದರು.