ಜೂಡಿ ನ್ಯೂಸ್ :
ಹಗರಿಬೊಮ್ಮನಹಳ್ಳಿ : ಹಂಪಾಪಟ್ಟಣದ ಶ್ರೀ ಮಾತಾ ಸೇವಾ ಟ್ರಸ್ಟ್ ನ ಎರಡನೇ ವಾರ್ಷಿಕೋತ್ಸವ ಹಾಗೂ ಶ್ರೀ ಮಾತಾ ಸೇವ ರತ್ನ 2025 ಪ್ರಶಸ್ತಿ ಪ್ರಧಾನ ಸಮಾರಂಭವು ಜ. 24ರಂದು ಬೆಳಗ್ಗೆ 10.30 ಕ್ಕೆ ಹಂಪಾಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಾತಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಜೆ ಶ್ರೀನಿವಾಸ್ ಅವರು ವಹಿಸುವರು. ಹೊಸಪೇಟೆಯ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥಾಪಕರಾದ ಶ್ರೀಮತಿ ಆರತಿ ಕೆಟಿ ಅವರು ಸಮಾರಂಭವನ್ನು ಉದ್ಘಾಟಿಸುವರು. ನೆರಳು ಪತ್ರಿಕೆಯ ಸಂಪಾದಕರಾದ ಬುಡ್ಡಿ ಬಸವರಾಜ್ ಅವರು ಆಶಯ ನುಡಿಗಳನ್ನಾಡುವರು.
ಕಾರ್ಯಕ್ರಮದ ವಿಶೇಷ ಆವಾನಿಕರಾಗಿ ವಿಜಯನಗರ ನ್ಯೂಸ್ ಚಾನಲ್ ನ ನ್ಯೂಸ್ ರೀಡರ್ ಹಾಗೂ ಹೊಸಪೇಟೆ ಆಕಾಶವಾಣಿ ಕೇಂದ್ರದ ಪಬ್ಲಿಕ್ ಪ್ರೋಗ್ರಾಮ್ ನಲ್ಲಿ ನಿರೂಪಕಿಯಾಗಿರುವ ಬಿ ಭುವನಶ್ರೀ, ಹಗರಿಬೊಮ್ಮನಹಳ್ಳಿಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಐ. ರಾಘವೇಂದ್ರ, ಹಂಪಾಪಟ್ಟಣ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ ಉಪ್ಪಾರ, ಮಗಿ ಮಾವಿನಹಳ್ಳಿ ಆರ್ಯವೈಶ್ಯ ಸಂಘದ ಸದಸ್ಯರಾದ ಸತ್ಯನಾರಾಯಣ ಶ್ರೇಷ್ಠಿ ಶಾಪುರ್, ಯುವ ಮುಖಂಡ ಟಿ ಮಹೇಂದ್ರ ಇವರು ವಿಶೇಷ ಆಹ್ವಾನತರಾಗಿರುವರು.
ಮುಖ್ಯ ಅತಿಥಿಗಳಾಗಿ ಆರ್ಯವೈಶ್ಯ ಸಂಘದ ಖಜಾಂಚಿ ಪಿ ಗುರುರಾಜ್, ಮುಖಂಡರಾದ ಜಿ ರಾಮಚಂದ್ರ ಶ್ರೇಷ್ಠಿ, ಸಿವಿಲ್ ಕಾಂಟ್ರಾಕ್ಟರ್ ಎಸ್ ನಾಗೇಂದ್ರ, ಕಾತ್ರಿಕಿ ಶ್ರೀನಿವಾಸ್ ಹಾಗೂ ಮುಖಂಡರಾದ ಜಿ.ಲಕ್ಷ್ಮಣ್ ಆಗಮಿಸುವರು.
ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ ಶ್ರೀಮತಿ ಆರತಿ ಕೆಟಿ ಅವರಿಗೆ ಶ್ರೀ ಮಾತಾ ಮಾನವ ಬಂದು ಸೇವ ರತ್ತ ಪ್ರಶಸ್ತಿ, ಸಾಹಿತಿ ಸುಭಾಸ ಚಂದ್ರ ಅವರಿಗೆ ಶ್ರೀಮಾತಾ ಸಾಹಿತ್ಯ ರತ್ನ ಸೇವಾ ಪ್ರಶಸ್ತಿ, ಮರಿಯಮ್ಮನಹಳ್ಳಿಯ ರಂಗಭೂಮಿ ಕಲಾವಿದೆ ಶ್ರೀಮತಿ ಶಾರದಮ್ಮ ಅವರಿಗೆ ಶ್ರೀ ಮಾತಾ ರಂಗಭೂಮಿ ಸೇವಾ ಪ್ರಶಸ್ತಿ, ಕರಾಟೆ ಪಟು ಕುಮಾರಿ ಎಚ್ ಶ್ರೀರಕ್ಷಾ ಅವರಿಗೆ ಶ್ರೀ ಮಾತಾ ಶಿಶು ಶೌರ್ಯ ಸೇವಾ ರತ್ನ ಪ್ರಶಸ್ತಿ, ಸಮಾಜ ಸೇವಕ ಉಪ್ಪಾರ್ ಕಾಳಪ್ಪ ಅವರಿಗೆ ಶ್ರೀ ಮಾತಾ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ, ನಾಗಭೂಷಣ ಗದ್ದಿಕೇರಿ ಶ್ರೀ ಮಾತಾ ಜೀವ ರಕ್ಷಕ ಸೇವಾ ರತ್ನ ಪ್ರಶಸ್ತಿ, ಸಂಗೀತ ಕಲಾವಿದೆ ಶ್ರೀಮತಿ ವಿ ಅನುರಾಧ ಅವರಿಗೆ ಶ್ರೀಮಾತಾ ಸಂಗೀತ ಸೇವಾ ರತ್ನ ಪ್ರಶಸ್ತಿ, ಸಮಾಜ ಸೇವಕಿ ಎನ್ ಹುಲಿಗೆಮ್ಮ ಅವರಿಗೆ ಶ್ರೀ ಮಾತಾ ಸ್ತ್ರೀ ಶಕ್ತಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷರಾದ ಜಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ