ಜೂಡಿ ನ್ಯೂಸ್ :
ಮರಿಯಮ್ಮನಹಳ್ಳಿ:ಉತ್ತರಾಧಿಮಠದ ಮಠಾಧೀಶರಾದ ಸತ್ಯಾತ್ಮತೀರ್ಥ ಪಾದಂಗಳವರು,ಬುಧವಾರ ಬೆಳಿಗ್ಗೆ ಅನಿರೀಕ್ಷಿತವಾಗಿ ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ,ಶ್ರೀಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಭೇಟಿನೀಡಿ ದೇವರದರ್ಶನ ಪಡೆದರು.ಇವರು ಪಟ್ಟಣದ ಮಾರ್ಗವಾಗಿ ಸಂಚರಿಸುವ ವೇಳೆ,ಪ್ರತಿ ಬಾರಿಯೂ ಇವರು,ಇವರ ಗುರುಗಳಾದ ನರಹರಿತೀರ್ಥರಿಂದ ಪ್ರತಿಷ್ಟಾಪನೆಗೊಂಡ ಉಭಯದೇವರುಗಳಿಗೆ ಮಂಗಳಾರತಿ ನೆರವೇರಿಸಿ,ದರ್ಶನಮಾಡುತ್ತಾರೆ.
ಇದೀಗ ಉಭಯದೇವರುಗಳ ದೇವಸ್ಥಾನಗಳಲ್ಲಿ ನಡೆದಿರುವ ಕಾಮಗಾರಿಗಳ ಕುರಿತು,ದೇವಸ್ಥಾನದ ಸಮಿತಿಯ ಸದಸ್ಯರಿಂದ ಮಾಹಿತಿಪಡೆದು,ಕೆಲವು ಸಲಹೆಗಳನ್ನು ನೀಡಿದರು.ನಂತರ ಜೋಡುರಥಗಳ ನಿರ್ಮಾಣದ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ,ರಥಗಳ ವಾಸ್ತುಶಿಲ್ಪ,ಎತ್ತರವನ್ನು ಕಂಡು ಮೂಕವಿಸ್ಮಿತರಾಗಿ,ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ವೇದವ್ಯಾಸಜೋಷಿ,ದೇವಸ್ಥಾನಸಮಿತಿಯ ಸದಸ್ಯರಾದಚಿದ್ರಿಸತೀಶ್,ಗೋವಿಂದರಪರಶುರಾಮ,ತಳವಾರದೊಡ್ಡರಾಮಣ್ಣ,ಸಜ್ಜೇದವಿಶ್ವನಾಥ,ಈ.ಯರಿಸ್ವಾಮಿ,ಎಲೆಗಾರಮಂಜುನಾಥ,ನರಸಿಂಹಮೂರ್ತಿ,ಸ್ಥಳಿಯಮುಖಂಡರಾದಎಂ.ವಿಶ್ವನಾಥಶೆಟ್ಟಿ,ಜಿ.ಸತ್ಯನಾರಾಯಣಶೆಟ್ಟಿ,ಕಲ್ಲಾಳಪರಶುರಾಮ,ಪ್ರಸಾದ್ ಜೋಷಿ,ಬಿ.ರುದ್ರಮುನಿ ಸೇರಿದಂತೆ ಇತರರಿದ್ದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ