July 13, 2025

ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗ ಬೇಕಿದೆ : ಮಂಜುನಾಥ್ ರಾಥೋಡ್ 

ಜೂಡಿ ನ್ಯೂಸ್ :

ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಅಕ್ರಮ ಅಕ್ಕಿ ಸಾಗಾಟ 

ಕೊಪ್ಪಳ: ನಗರ ಸೇರಿದಂತೆ ತಾಲೂಕಿನ ಹಲವಾರು ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಎಂದು ಕರುನಾಡ ಯುವರತ್ನ ವೇದಿಕೆ ರಾಜ್ಯ ಅಧ್ಯಕ್ಷ ಮಂಜುನಾಥ್ ರಾಥೋಡ್ ಗಂಭೀರವಾಗಿ ಆರೋಪಿಸಿದ್ದಾರೆ.

ಈ ಕುರಿತು ಆಹಾರ ಇಲಾಖೆಯು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ನಡೆಯುವಂತ ಅಕ್ರಮ ಅಕ್ಕಿ ದಂದೇ ಸಾಗಾಟಗಳಿಗೆ ಕಡಿವಾಣ ಹಾಕಬೇಕಾಗಿದೆ ಹಾಗೂ ನ್ಯಾಯಬೆಲೆ ಅಂಗಡಿಗಳ ಅಕ್ಕ ಪಕ್ಕದಲ್ಲಿರುವ ಸಿಸಿಟಿವಿ ಪುಟೇಜನ್ನು ನ್ಯಾಯಬೆಲೆ ಅಂಗಡಿಗಳಿಂದ ಸಾಗುವ ರಸ್ತೆಯಲ್ಲಿರುವ ಸಿಸಿಟಿವಿ ಪರೀಕ್ಷಿಸಿ ಅಕ್ರಮ ಅಕ್ಕಿ ದಂದೇ ಮಾಡುವವರ ಮೇಲೆ ಕಮ ಕೈಗೊಳ್ಳುವ ಮೂಲಕ ಕಡಿವಾಣ ಹಾಕಬೇಕು ಎಂದು ಕರುನಾಡ ಯುವರತ್ನ ವೇದಿಕೆ ರಾಜ್ಯ ಅಧ್ಯಕ್ಷ ಮಂಜುನಾಥ್ ರಾಥೋಡ್ ಒತ್ತಾಯಿಸಿದ್ದಾರೆ.

ಬಡವರಿಗೆ ವಿತರಿಸಬೇಕಾದ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವವರನ್ನು ಕಂಡು ಹಿಡಿದು ಬಡವರಿಗೆ ನ್ಯಾಯ ಒದಗಿಸಲು ಇಲಾಖೆಗಳು ಮುಂದೆ ಬರಬೇಕು, ಹಲವಾರು ಕಡೆಗಳಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಮದ್ಯವರ್ತಿಗಳು ಇವರೇ ಎಂದು ಗೊತ್ತಿದ್ದರು ಸಂಬಂಧಿಸಿದ ಇಲಾಖೆಯವರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ಪ್ರಜ್ಞಾವಂತರ ಆರೋಪವಾಗಿದೆ.

ಸರಕಾರ ಹೊರ ರಾಜ್ಯಗಳಿಂದ 35 – 40ರೂಪಾಯಿಗೆ ಒಂದು ಕೆಜಿ ಖರೀದಿಸಿ ಬಡವರಿಗೆ ಉಚಿತವಾಗಿ ನ್ಯಾಯ ಬೆಲೆ ಅಂಗಡಿಗಳಿಗೆ ವಿತರಿಸಲು ಕಳಿಸುವಾಗ ಕೆಜಿಗೆ 50-60 ವೆಚ್ಚ ತಗುಲುತ್ತದೆ. ಇಂತಹ ಜನ ಪರ ಯೋಜನೆಗಳಿಂದ ಬಡವರಿಗೆ ವಿತರಣೆಯಾಗಬೇಕಾದ ಅಕ್ಕಿ ಕಾಳ ಸಂತೆಯಲ್ಲಿ ಬಾಯಿಗೆ ಬಂದಂತೆ ಮಾರಾಟವಾಗುತ್ತಿದ್ದರು. ಇದಕ್ಕೆ ಕಡಿವಾಣ ಇಲ್ಲದಂತಾಗಿ ಎಗ್ಗಿಲ್ಲದೇ ನಿರಂತರ ವಹಿವಾಟು ನಡೆಯುತ್ತಿದೆ.

ಈ ಹಿಂದೆ ಜಿಲ್ಲೆಯ ಹಲವಾರು ಕಡೆಗಳಲ್ಲಿ ಕಾಳ ಸಂತೆಗೆ ಮಾರಾಟಕ್ಕೆ ಹೊರಟ ಸಂದರ್ಭದಲ್ಲಿ ಅಂತಹ ಪ್ರಕರಣಗಳನ್ನು ಭೇದಿಸಿದರು ಸಹಿತ ಅಕ್ರಮ ಅಕ್ಕಿ ಸಾಗಾಟ ನಿರಂತರವಾಗಿದೆ ಎನ್ನುವುದ ನಾಗರಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಇದಕ್ಕೆ ಸಂಬಂಧಿಸಿದ ಇಲಾಖೆಗಳು ಕಟ್ಟು ನಿಟ್ಟಿನ ಆದೇಶ ಕೈಗೊಳ್ಳುವ ಮೂಲಕ ಸರಕಾರಕ್ಕೆ ಆಗುವ ನಷ್ಟವನ್ನು ಭರಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.