July 13, 2025

ಹಂಪಾಪಟ್ಟಣದಲ್ಲಿ ಹೆಚ್ ಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ

ಜೂಡಿ ನ್ಯೂಸ್ :

ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ:ಸಮಾಜ ಸೇವಕ ಸಿಕಂದರ್‌ ಅಭಿಮತ

ಹಂಪಾಪಟ್ಟಣ: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಕ್ರೀಡಾ ಪ್ರತಿಭಾನ್ವಿತರು ಇದ್ದಾರೆ, ಅವರಿಗೆ ಸರ್ಕಾರದ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದು ಹಗರಿಬೊಮ್ಮನಹಳ್ಳಿಯ ಸಮಾಜ ಸೇವಕ ಸಿಕಂದರ್‌ ಅಭಿಪ್ರಾಯ ಪಟ್ಟರು.

ಹಂಪಾಪಟ್ಟಣ ಗ್ರಾಮದಲ್ಲಿ ಹಂಪಾಪಟ್ಟಣ ಕ್ರಿಕೆಟರ್ಸ್ ವತಿಯಿಂದ ಶ್ರೀ ನರಗಲ್ ದುರ್ಗಾದೇವಿ ಜಾತ್ರೆ ಪ್ರಯುಕ್ತ ಹಮ್ಮಿಕೊಂಡಿರುವ ಎಚ್ ಪಿ ಎಲ್ ಟೆಂಪರ್ ಬಾಲ್ ಟೂರ್ನಮೆಂಟ್ -2025ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. 

ಇತ್ತೀಚೆಗೆ ದೇಶದಲ್ಲಿ ಗ್ರಾಮೀಣ ಮಟ್ಟದ ಕ್ರೀಡಾ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ದೇಶೀಯ ಕ್ರೀಡೆಯಾದ ಖೋ ಖೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರುಷರು ಹಾಗೂ ಮಹಿಳಾ ವಿಭಾಗದಲ್ಲಿ ಗೆಲುವು ಸಾಧಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದರಲ್ಲಿ ನಮ್ಮ ರಾಜ್ಯದ ಗ್ರಾಮೀಣ ಪ್ರತಿಭಾನ್ವಿತ ಕ್ರೀಡಾಪಟುಗಳೂ ಇದ್ದಾರೆ. ಅದೇ ರೀತಿ ಇತ್ತೀಚೆಗೆ ಕ್ರಿಕೆಟ್‌ ಗೆ ಹೆಚ್ಚಿನ ಮನ್ನಣೆ ಇದೆ. ಕ್ರಿಕೆಟ್‌ ಕ್ರೀಡೆಯಲ್ಲಿಯೂ ಸಹ ತೀರ ಕಡುಬಡತನದಲ್ಲಿ ಸಾಧನೆ ಮಾಡಿದ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟ ಆಡುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ದೊರೆತ ಪ್ರೋತ್ಸಾಹವೇ ಇದಕ್ಕೆ ಕಾರಣ ಎಂದು ಹೇಳಿದರು.

ಟೂರ್ನಮೆಂಟ್‌ ನ ಆಯೋಜಕರು ಹಾಗೂ ಗ್ರಾಮದ ಯುವ ಮುಖಂಡ ಟಿ. ಕೊಟ್ರೇಶ್‌ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಂಪಾಪಟ್ಟಣ ಗ್ರಾಮವು ಕ್ರಿಕೆಟ್‌ ಆಟಗಾರರಿಗೆ ಸ್ವರ್ಗ ಎಂದರೆ ತಪ್ಪಾಗಲಾರದು. ನಮ್ಮ ಗ್ರಾಮದಲ್ಲಿ ವರ್ಷದಲ್ಲಿ ಕನಿಷ್ಠ ಎರಡು ಕ್ರಿಕೆಟ್‌ ಟೂರ್ನಮೆಂಟ್‌ ಗಳನ್ನು ಆಯೋಜನೆ ಮಾಡಲಾಗುತ್ತದೆ. ಇದರಿಂದ ಯುವ ಕ್ರೀಡಾಸಕ್ತರಿಗೆ ಒಂದು ರೀತಿಯಲ್ಲಿ ಪ್ರೋತ್ಸಾಹ ನೀಡಿದಂತಾಗುತ್ತದೆ. ಕ್ರಿಕೆಟ್‌ ಆಟ ಆಡುವ ಜೊತೆಗೆ ಯುವ ಸಮೂಹ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ನಮ್ಮ ಊರಿನಲ್ಲಿಯೇ ಹಲವರು ಪೊಲೀಸ್‌ ಇಲಾಖೆಯಲ್ಲಿ ನೌಕರಿಯನ್ನು ಪಡೆದುಕೊಂಡಿದ್ದಾರೆ. ಎಲ್ಲೋ ಒಂದು ಕಡೆಗೆ ಈ ಒಂದು ಕ್ರೀಡಾ ಸ್ಪೂರ್ತಿಯೂ ಕಾರಣ ಎಂದು ಹೇಳಬಹುದು ಎಂದು ಅಭಿಪ್ರಾಯಪಟ್ಟರು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಉಪ್ಪಾರ ಹುಲಿಗೆಮ್ಮ ಕಾಳಪ್ಪ, ಗಿರೀಶ್ ರಾಥೋಡ್, ಹಗರಿಬೊಮ್ಮಹಳ್ಳಿ ಕಿಶೋರ..ಯುವ ಮುಖಂಡ.ಬಿ.ಕುಬೇರ, ಶೀಗೆನಹಳ್ಳಿ ಚಂದ್ರು, ಗೂಳಿ ಕೊಟ್ರೇಶ್ . ತಳವಾರ್. ಸೋಮನಾಥ.ಸೀಗೆನಹಳ್ಳಿ ಬಸವರಾಜ್.ಎಚ್ .ಸೋಮನಾಥ. ಎಸ್ ಟಿ ಎಂ ಸಿ ಅಧ್ಯಕ್ಷರು ಎಚ್ .ರಮೇಶ ಡಿಎಸ್ಎಸ್ ಜಿಲ್ಲಾಧ್ಯಕ್ಷರು, ತೀರ್ಥ ಪ್ರಸಾದ, ಡಾ ಬಿಆರ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರು ಗೊಂದಳಿ ರಾಮಣ್ಣ ‌ ಸುವರ್ಣ ಪ್ರಶಸ್ತಿ. ಪುರಸ್ಕೃತರು ನಿರ್ಣಯಕರಾದ ಎಮ್. ಕೆ. ಕೊಟ್ರೇಶ್, ಶಿಕ್ಷಕರಾದ ಕೆ.ವಿಶ್ವನಾಥ್ , ಗ್ರಾಮದ ಮುಖಂಡರು ಇದ್ದರು.