July 13, 2025

ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ–ಶ್ವೇತಾ ಡಂಬಳ 

ಜೂಡಿ ನ್ಯೂಸ್ :

ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಆದ್ಯತೆ–ಶ್ವೇತಾ ಡಂಬಳ 

ಕೊಪ್ಪಳ, ಡಿ 25, ಅಲ್ಪ ಅಧಿಕಾರ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾರ್ಣಿಕರ್ತರಾಗಿರುವ ಸದಸ್ಯರೆಲ್ಲರ ಸಹಕಾರದಿಂದ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡಿ ಶ್ರಮಿಸುವುದಾಗಿ ಕಿನ್ನಾಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರಾಘವೇಂದ್ರ ಡಂಬಳ ಅಭಿಪ್ರಾಯ ಪಟ್ಟರು, 

ಅವರು ಮಂಗಳವಾರ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಜಯ ಸಾಧಿಸಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ ಆವರು ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ,ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ನೀಡಿರುವ ಜವಾಬ್ದಾರಿಯನ್ನೂ ಅಧಿಕಾರದ ಅಲ್ಪ ಅವಧಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಪ್ರಮಾಣಿಕವಾಗಿ ನಿಭಾಯಿಸುವೆ ಎಂದು ಹೇಳಿದವರು, ಪಂಚಾಯತಿಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಅವರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಶ್ರಮಿಸುತ್ತೇನೆ ಎಂದು ಕಿನ್ನಾಳ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರಾಘವೇಂದ್ರ ಡಂಬಳ ರವರು ಹೇಳಿದರು, 

ಈ ಸಂದರ್ಭದಲ್ಲಿ ನಾಯಕರಾದ ರಾಘವೇಂದ್ರ ಡಂಬಳ ಯುವ ನಾಯಕರಾದ ಕಾಶಿನಾಥ್ ಡoಬರ್, ಮಂಜುನಾಥ್ ಡoಬರ್ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,