July 13, 2025

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಂಜಮ್ಮಜೋಗ್ತಿ ರವರ ಮನೆಗೆ ಮೇಘಾಲಯ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ ಭೇಟಿ

ಜೂಡಿ ನ್ಯೂಸ್ :

ಮರಿಯಮ್ಮನಹಳ್ಳಿ:2021ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಮಂಜಮ್ಮಜೋಗ್ತಿ ರವರ ಮನೆಗೆ ಭಾನುವಾರದಂದು ಮೇಘಾಲಯ ರಾಜ್ಯದ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ ಅವರು ಭೇಟಿ ನೀಡಿದ,ಅವರೊಂದಿಗೆ ಔಪಚಾರಿಕ ಚರ್ಚೆ ನಡೆಸಿದರು.

 ಪದ್ಮಶ್ರೀಮಂಜಮ್ಮಜೋಗ್ತಿ ರವರಿಗೆ ಮೇಘಾಲಯರಾಜ್ಯದ ಸ್ನರಣಿಕೆ ನೀಡಿ ಗೌರವಾನ್ವಿತ ರಾಜ್ಯಪಾಲರು ಸನ್ಮಾನಿಸಿ, ಅಭಿನಂದಿಸಿದರು.ಇದಕ್ಕೂ ಮುನ್ನ ಮಂಜಮ್ಮಜೋಗ್ತಿರವರ ತಂಡದ ಸದಸ್ಯರು ಜೋಗ್ತಿ ಹಾಡು ನೃತ್ಯದ ಮೂಲಕ ಸ್ವಾಗತಿಸಿ ಕೊಂಡರು.

ಜೋಗ್ತಿನೃತ್ಯ,ಹಾಡುಗಳನ್ನು ಆಲಿಸಿದ ರಾಜ್ಯಪಾಲರು ಚಕಿತರಾದರು,ಇದನ್ನು ತದೇಕಚಿತ್ತದಿಂದ ಇವರ ನೃತ್ಯ,ಹಾಡು ಪ್ರದರ್ಶನಗಳಿಂದ ಗಮನ ಸೆಳೆದರು.

ಜೋಗ್ತಿಯರ ಸಮಸ್ಯೆಗಳ ಕುರಿತು ‌ಮನವಿಸಲ್ಲಿಸಿದ ಮನವಿಯಲ್ಲಿ,ತೃತೀಯಲಿಂಗಿ ಸಮುದಾಯದ ಪ್ರಗತಿಗಾಗಿ ನನ್ನ ಬೇಡಿಕೆಯಾದ ಭೂಮಿ ನೆರವು ಇನ್ನೂ ದೊರಕಿಲ್ಲ. ನಾನು ಸುಮಾರು 3 ಎಕರೆ ಭೂಮಿಯನ್ನು ಸರ್ಕಾರದಿಂದ ಕೇಳಿಕೊಂಡಿದ್ದು, ಅಲ್ಲಿ ತೃತೀಯಲಿಂಗ ಸಮುದಾಯದ ಹಿರಿಯರಿಗಾಗಿ ವೃದ್ದಾಶ್ರಮ ಹಾಗೂ ನಮ್ಮ ನೆಲದ ಹೆಮ್ಮೆಯ ಸಾಂಸ್ಕೃತಿಕತೆಯ ಗುರುತಿನ ಜೋಗತಿ ಸಂಪ್ರದಾಯದ ಕಲಾ ಸಂಸ್ಥೆ ಸ್ಥಾಪಿಸಿ ಮುಂದಿನ ಪೀಳಿಗೆಗಳಿಗೆ ಅದನ್ನು ಉಳಿಸುವ ಮತ್ತು ಸಮಾಜಕ್ಕೆ ಮುಟ್ಟಿಸುವ ಕೆಲಸಗಳಿಗೆ ಬಳಸಲು ಬಯಸಿದ್ದೇನೆ.

ನಾನು ಸ್ವತಃ ತೃತೀಯಲಿಂಗಿಗಳ ಜೀವನದ ಕಠಿಣ ಪರಿಸ್ಥಿತಿಗಳನ್ನು ಕಂಡುಬಂದಿದ್ದೇನೆ. ವಯಸ್ಸಾದ ತೃತೀಯಲಿಂಗಿಗಳು ಬದುಕಿನ ಇಳಿಗಾಲದಲ್ಲಿ ಇಡೀ ಸಮಾಜದಿಂದಲೇ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಾರೆ. ಅವರ ಅಂತಿಮ ವಿಧಿವಿಧಾನಗಳಿಗೂ ಮಾನವೀಯ ಸ್ಪರ್ಶದ ಕೊರತೆ ಉಂಟಾಗುತ್ತದೆ. ಈ ಕಾರಣಕ್ಕಾಗಿ, ಅವರಿಗೊಂದು ಸರ್ವತೋಮುಖ ಸಮಾಧಾನಕರ ಜೀವನವನ್ನು ಕಲ್ಪಿಸುವ ವೃದ್ಧಾಶ್ರಮದ ಅಗತ್ಯತೆಯಿದೆ.

ಕಲಾ ಸಂಸ್ಥೆಯು ತೃತೀಯಲಿಂಗ ವ್ಯಕ್ತಿಗಳಿಗೆ ಕಲೆಯನ್ನು ಅಭ್ಯಾಸ ಮಾಡಲು, ಅದರ ಶಿಕ್ಷಣವನ್ನು ಮುಂದುವರಿಸಲು ಮತ್ತು ಜೀವನೋತ್ತರ ಜೀವನ ಸುಧಾರಿಸಲು ಸಹಾಯ ಮಾಡಲಿದೆ. ಕಲಾ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಕ ತೃತೀಯಲಿಂಗಿಗಳ ಸ್ವಾವಲಂಬನೆಯನ್ನು ಉತ್ತೇಜಿಸುವ ಗುರಿ ನನ್ನದು.ಬೆಂಬಲ ಬೇಗ ಸಿಗಬೇಕೆಂದು ತುಂಬಾ ವರ್ಷಗಳಿಂದ ದೊಡ್ಡ ನಿರೀಕ್ಷೆಯಲ್ಲಿದ್ದೇನೆ. ಈ ನಿಟ್ಟಿನಲ್ಲಿ ತಮ್ಮಿಂದ ಆಗುವ ನೆರವು ನಮ್ಮ ಬದುಕುಗಳನ್ನು ಹಸನಾಗಿಸುತ್ತದೆ.

ನನ್ನ ಈ ಮನವಿಯು ತೃತೀಯಲಿಂಗಿಗಳ ಬದುಕನ್ನು ಏಳಿಗೆಯತ್ತ ಕರೆದೊಯ್ಯಲಿದೆ ಎಂದು ಆಶಿಸುತ್ತಾ, ಈ ಮಹತ್ವದ ಉದಾತ್ತ ಉದ್ದೇಶವನ್ನು ನನಸಾಗಿಸಲು ಸರ್ಕಾರದಿಂದ ಅಗತ್ಯ ಬೆಂಬಲ ದೊರಕಿಸಿಕೊಡಬೇಕೆಂದು ನಿಮ್ಮನ್ನು ಅತ್ಯಂತ ವಿನಮ್ರಳಾಗಿ ಕೇಳಿಕೊಳ್ಳುತ್ತೇನೆ.

ಈ ಸಂಧರ್ಭದಲ್ಲಿ ಮಂಜಮ್ಮಜೋಗ್ತಿರವರು ಮನವಿಸಲ್ಲಿಸಿದರು.

ಈ ಸಂಧರ್ಭದಲ್ಲಿ ತಹಶಿಲ್ದಾರೆ ಶೃತಿ ಎಂ.ಮಳ್ಳಪ್ಪಗೌಡ,ಪ.ಪಂ.ಮುಖ್ಯಾಧಿಕಾರಿ ಎಂ.ಖಾಜ,ಉಪತಹಶಿಲ್ದಾರ ಶ್ರೀಧರ,ಜಿಲ್ಲಾಬಿಜೆಪಿ ಅಧ್ಯಕ್ಷ ಸಂಜೀವರೆಡ್ಡಿ,

ಹ.ಬೊ.ಹಳ್ಳಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ,ಎಸ್.ಕೃಷ್ಣನಾಯ್ಕ್,ಬಲಹುಣುಸಿರಾಮಣ್ಣ,ಗುಂಡಾ ಕೃಷ್ಣ,ವೀರೇಶ್ವರಸ್ವಾಮಿ,ಗಂಡಿ ಬಸವರಾಜ ಸೇರಿದಂತೆ ಇತರರಿದ್ದರು.

ಬಂದೋಬಸ್ತ್:

1ಡಿ.ವೈ‌ಎಸ್ಪಿ,1ಸಿ.ಪಿ.ಐ,2ಪಿ.ಎಸ್.ಐ,5ಎ.ಎಸ್.ಐ,11ಮುಖ್ಯಪೇದೆ,20 ಪೇದೆ,1ಸಿ.ಆರ್.ಪಿ,1ಡಿ.ಆರ್. ಬಂದೋಬಸ್ತ್ ಗೆ ನಿಯೋಜನೆ ಗೊಂಡಿದ್ದರು.”