July 13, 2025

ಬದುಕೆಂಬ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಜಾನಪದರ ಬದುಕು ಪರಿಪೂರ್ಣ..

ಜೂಡಿ ನ್ಯೂಸ್ :

ಮಂಕುತಿಮ್ಮನ ಕಗ್ಗದ ವ್ಯಾಖ್ಯಾನಕಾರರು, ವಿದ್ವಾನ್ ಜಿ ಎಸ್ ನಟೇಶ್. 

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶ್ರೀ ಶ್ರೀ ಮಹಾದಾಸೋಹಿ ಶರಣಬಸವೇಶ್ವರ ಸೇವಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಶ್ರೀ ಶ್ರೀ ಮಹಾದಾಸೋಹಿ ಶರಣಬಸವೇಶ್ವರ 20ನೇ ವರ್ಷದ ಪುರಾಣ ಮಂಗಳ ಕಾರ್ಯಕ್ರಮದಲ್ಲಿ ಜಾನಪದ, ಶರಣ ಸಾಹಿತ್ಯ ಮಂಕುತಿಮ್ಮನ ಕಗ್ಗದ ಬಗ್ಗೆ ಅರಿವಿನ ಉಪನ್ಯಾಸ ನೀಡಿದರು…

ಜ್ಞಾನವು ಅತ್ಯಂತ ಪವಿತ್ರವಾದದ್ದು, ಜಾನಪದರು ಯಾವುದೇ ಪದವಿ ಪಡೆಯದೆ ಇದ್ದರೂ ಸಹ, ಬದುಕೆಂಬ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಜಾನಪದರ ಬದುಕೇ ಅತ್ಯಂತ ಪವಿತ್ರವಾದದ್ದು, ಜಾನಪದರು ತಮ್ಮ ಕಾಯಕದ ಮೂಲಕ ಜಾನಪದ ಸಾಹಿತ್ಯವನ್ನು ಉತ್ಪತ್ತಿ ಮಾಡಿದರು ಜಾನಪದರ ಕಾಯಕ ದಾಸೋಹ ಇವರ ತತ್ವ ನಿಷ್ಠೆಯು ಸರ್ವರಿಗೂ ಪ್ರೇರಣಾದಾಯಕವಾದದ್ದು, 12ನೇ ಶತಮಾನದ ಅಲ್ಲಮ ಬಸವೇಶ್ವರ ಶರಣರ ಅನುಭವ ಮಂಟಪದಲ್ಲಿ ಎಲ್ಲಾ ಕಾಯಕ ವರ್ಗದ, ಜಾನಪದ ಕಲಾವಿದರು, ವಿದ್ವಾಂಸರು, ಮಹಾತ್ಮರು ಪಾಲ್ಗೊಂಡಿದ್ದು ನಮ್ಮ ಕನ್ನಡ ನಾಡಿನ ಸುದೈವವೇ ಸರಿ, ಇಂತಹ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಕೃಷಿ ಯೋಗಿ, ಕಾಯಕ ಜೀವಿ, ಜನಪದ ಬದುಕನ್ನು ಎತ್ತಿ ಹಿಡಿದ ಮಹಾಶಿವಯೋಗಿ ಕಲಬುರಗಿ ಶರಣಬಸವೇಶ್ವರರ ತತ್ವ ವಿಚಾರಗಳು ಎಲ್ಲಾ ಕಾಲಕ್ಕೂ ಸಲ್ಲುವಂತದ್ದು, ಇಂದಿನ ಶಿಕ್ಷಣ ಮೌಲ್ಯವಿಲ್ಲದೆ ಸಾಗುತ್ತಿರುವುದರಿಂದ, ಭಾರತೀಯ ಸಂಸ್ಕೃತಿ, ಹಾಗೆ ಭಾರತೀಯ ಪರಂಪರೆ ವಿನಾಶದತ್ತ ಸಾಗುತ್ತಿರುವುದು ದುರಂತವೇ ಸರಿ, ನಾವು ಮಾಡುವ ಕೆಲಸವೇ ಪೂಜೆಯಾಗಬೇಕು, ನಮ್ಮ ನಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡಬೇಕು, ಮನಸ್ಸಿಗೆ ಆತ್ಮಸಾಕ್ಷಿ ತಕ್ಕಂತೆ ನಡೆದರೆ, ನಮ್ಮೆಲ್ಲರ ಬದುಕೇ ಪವಿತ್ರ ಪಾವನವಾದದ್ದು, ಇಂತಹ ಆತ್ಮ ಸಾಕ್ಷಿ ತಕ್ಕಂತೆ ನಡೆದ ಬಸವೇಶ್ವರ ಅಲ್ಲಮ, ಕಲಬುರ್ಗಿ ಶರಣಬಸವೇಶ್ವರರು ನಮ್ಮೆಲ್ಲರಿಗೂ ಆದರ್ಶಪ್ರಾಯರು, ಜೀವನವನ್ನು ಯಶಸ್ವಿಯಾಗಿ ಹೇಗೆ ನಡೆಸಿಕೊಂಡು ಹೋಗುವುದಕ್ಕೆ ಶರಣ ತತ್ವ ನಮಗೆ ಮಾರ್ಗದರ್ಶನ ಮಾಡುತ್ತದೆ, ಜಾನಪದರ ಶರಣರ ಬದುಕೇ ನಮಗೆ ಆದರ್ಶ .. ಇಂತಹ ಆದರ್ಶವನ್ನು ಡಿವಿಜಿ ಗುಂಡಪ್ಪನವರು. ಮಂಕುತಿಮ್ಮನ ಕಗ್ಗದ ಮೂಲಕ ಮನುಕುಲವನ್ನು ಬೆಳಿಗ್ಗೆದ ಮಹಾತ್ಮರು, ಪರಿಸರ ಅಹಂಕಾರ ನಿರಸನ, ಇಂತಹ ಮಾನವಿಯ ಮೌಲ್ಯಗಳ ಬಗ್ಗೆ ಉದಾತ್ತ ಚಿಂತನೆಯ ಮೂಲಕ ನಮ್ಮ ನಾಡಿಗೆ ಅದ್ಭುತವಾದ ಸಾಹಿತ್ಯವನ್ನು ನೀಡಿದ ಕಗ್ಗದ ಸೃಷ್ಟಿಕರ್ತರಾದ ಡಿವಿಜಿ ಗುಂಡಪ್ಪನವರಿಗೆ ಸಲ್ಲುತ್ತದೆ, ಮಂಕುತಿಮ್ಮನ ಕಗ್ಗವು ಮಾನವರ ಬಾಳಿಗೆ ದಿವ್ಯ ಬೆಳಕಾಗಿದೆ, ಪರಿಸರವು ತನ್ನ ಬೆಳವಣಿಗೆಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೆ ಜಗತ್ತಿಗೆ ಕೃತಜ್ಞತೆಯಿಂದ ಸೇವೆ ಸಲ್ಲಿಸುತ್ತದೆ, ಆದರೆ ಮನುಷ್ಯರು ಪ್ರತಿಯೊಂದು ಬೆಳವಣಿಗೆಯಲ್ಲೂ ಸಹ ಅಹಂಕಾರ ಇನ್ನೊಬ್ಬರನ್ನು ತುಳಿಯುತ್ತ ಬದುಕುವುದು ಪ್ರಕೃತಿಗೆ ವಿರೋಧವಾಗಿದೆ, ಆದ್ದರಿಂದ ನಾವು ಪ್ರಕೃತಿ ಮಾತೆಗೆ ಸದಾಾವಕಾಲ ಕೃತಜ್ಞರಾಗಿರಬೇಕು, ಇಂದಿನ ದಿನಮಾನದಲ್ಲಿ ಯಂತ್ರಗಳ ಬದುಕಿನಿಂದ ಬದುಕು ಅತಂತ್ರ ವಾಗಿದೆ ಟೀವಿ , ಸಾಮಾಜಿಕ ಮಾಧ್ಯಮಗಳಿಂದ, ಬದುಕಿನ ಸಾಮರಸ್ಯವು ಹಾಳಾಗುತ್ತಿವೆ, ಆದ್ದರಿಂದ ಯುವಕರು ಸರ್ವರೂ ಜನಪದ ಸಾಹಿತ್ಯ ಶರಣ ಸಾಹಿತ್ಯ ಮತ್ತು ಮಂಕುತಿಮ್ಮನ ಕಗ್ಗ ಓದುವ ಮೂಲಕ ಉದಾತ್ತ ಮೂಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕೆಂದು ಜಾನಪದ ಒಗಟುಗಳ ಮೂಲಕ ಜನರನ್ನು ನಗಿಸುತ್ತ, ಸುಮಾರು ಒಂದು ಗಂಟೆಯ ಕಾಲ ಅತ್ಯಂತ ಉಪಯುಕ್ತವಾಗಿ ಅರಿವಿನ ಉಪನ್ಯಾಸ ನೀಡಿದರು. ಟ್ರಸ್ಟಿನ ಪರವಾಗಿ ವಿದ್ವಾನ್ ಜೆ ಎಸ್ ನಟಿಸ್ ರವರಿಗೆ ಗೌರವ ಪೂರಕವಾಗಿ ಸನ್ಮಾನಿಸಲಾಯಿತು.

ಸುಮಾರು 21 ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಪ್ರವಚನಕಾರರಾದ ಓಂ ಸುಕುಮಾರ ಗುರೂಜಿ,ಬೆಳಗಾವಿ ಗವಾಯಿಗಳಾದ ದೀಪಕ್ ಸಿಂಗ್ ಹಜರೇ ತಾಳಿಕೋಟೆ, ತಬಲಾ ಕಲಾವಿದರಾದ ರಾಜಶೇಖರ ಗೆಜ್ಜೆ, ಗ್ರಾಮದ ಮಠಸ್ಥರಾದ ಜಿಎಂ ರಾಜಶೇಖರಯ್ಯ, ಧ್ವನಿ ವರ್ಧಕದ ಸೇವಕರಾದ ನಾಗರಾಜಯ್ಯ ಸ್ವಾಮಿ, ಶರಣಪ್ಪ, ಮಾಧ್ಯಮ ಮಿತ್ರರಾದ ಚಂದ್ರಶೇಖರ್, , ಕರಿಬಸಪ್ಪ, ಭಜನೆ ಕಲಾವಿದರಾದ ಬಡಿಗೇರ್ ಪಂಪಣ್ಣ ರವರಿಗೆ ಗೌರವ ಪೂರ್ವಕವಾಗಿ ಶರಣ ಬಸವೇಶ್ವರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಟ್ರಸ್ಟಿನ ಬುಳ್ಳನ ಗೌಡ, ಎಚ್ ಶಿವಾನಂದ, ಈಶ್ವರ ಗೌಡ್ರು, ಉಪ್ಪರ್ ನಾಗಪ್ಪ, ತಳವಾರ್ ಬಿದ್ದಪ್ಪ,ನಾಗರಾಜ, ಮಾಲ್ವಿ ಕಿಟ್ಟಪ್ಪ, ಕೊಟ್ರೇಶ್, ಕಂಬಾರ್ ಹನುಮಂತಪ್ಪ, ಸರ್ವ ಸದಸ್ಯರು, ಗ್ರಾಮದ ಮುಖಂಡರಾದ ಎಚ್ ಭೀಮಣ್ಣ, ಗದ್ಲಿಗಟ್ಟಿ ತಿಮ್ಮಣ್ಣ, ರೆಡ್ಡಿ ಖಾಜಾ ಹುಸೇನ್, ಮಂಜುನಾಥ್ ಗಂಟಿ, ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಿ ಶ್ರೀನಿವಾಸ್, ಗ್ರಾಮದ ಸಮಸ್ತ ಗ್ರಾಮಸ್ಥರು ಸದ್ಭಕ್ತರು, ಹಂಪಾಪಟ್ಟಣ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಎಚ್ ಶಿವಾನಂದ, ವಂದನಾರ್ಪಣೆಯನ್ನು ವಿ ಗೋವಿಂದ ನಾಗರಾಜ್ ಗಂಟಿರವರು ವೇದಿಕೆಯನ್ನು ನಿರ್ವಹಿಸಿದರು.