ಜೂಡಿ ನ್ಯೂಸ್ :
ಹೆತ್ತ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸದಿರಿ:ಶ್ರೀಮಾತಾ ಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾದ ಜಿ ಶ್ರೀನಿವಾಸ ಅಭಿಮ
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ದಿನಾಂಕ 13.03.2025 ಗುರುವಾರ ಸಂಜೆ ಏಳು ಗಂಟೆಗೆ ಶ್ರೀ ಮಾತಾ ಸೇವಾ ಟ್ರಸ್ಟ್ (ರಿ) ವತಿಯಿಂದ ದಿವಂಗತ “ಜಿ ಹನುಮಕ್ಕ” ಅಮ್ಮನವರ ಏಳನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕ, KPTCL ನೌಕರರು, ಚಿತ್ರ ಕಲಾವಿದರಿಗೆ ಗೌರವ ಪೂರ್ವಕ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮೇಲಿನ ನುಡಿಗಳನ್ನು ಅಧ್ಯಕ್ಷರಾದ ಜಿ ಶ್ರೀನಿವಾಸ ರವರು ನುಡಿದರು..
ಇಂದಿನ ದಿನಮಾನದಲ್ಲಿ ಹೆತ್ತ ತಂದೆ ತಾಯಿಗಳನ್ನೇ ದೂರ ಮಾಡುವ ಮಕ್ಕಳು ಹುಟ್ಟಿರುವುದು ನಮ್ಮ ಸಮಾಜದ ದೌರ್ಭಾಗ್ಯವೇ ಸರಿ.. ನನ್ನ ಜೀವನದ ಜೀವಕ್ಕೆ ಉಸಿರಾಗಿದ್ದ ನನ್ನ ಹೆತ್ತ ತಾಯಿ ಜಿ ಹನುಮಕ್ಕ ನನಗೆ ಸದಾವಕಾಲ ಪ್ರೇರಣೆ, ನಮ್ಮ ತಾಯಿಯ ಪ್ರೀತಿ ತಾಯಿಯ ವಾತ್ಸಲ್ಯ, ತಾಯಿಯ ಹೃದಯ ಅಂತಕರಣ ನನ್ನ ತಾಯಿಯ ನೆರವರೆಯ ಸಮಾನತೆ ನನಗೆ ಸದಾ ಕಾಲ ಜೀವನದಲ್ಲಿ ಸ್ಫೂರ್ತಿಯ ಚಿಲುಮೆಯಾಗಿದೆ.. ಆದ್ದರಿಂದ ನನ್ನ ಹೆತ್ತ ತಾಯಿಯ ಏಳನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಸಮಾಜದಲ್ಲಿ ಎಲೆ ಮರಿಯ ಕಾಯಿಯಂತೆ ಸಮಾಜ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ, KPTCL ನೌಕರರಿಗೆ, ಚಿತ್ರ ಕಲಾವಿದರಿಗೆ, ಗೌರವ ಪೂರಕವಾಗಿ ಅಭಿನಂದನ ಪೂರ್ವಕವಾಗಿ ಸನ್ಮಾನಿಸುವ ಸಂದರ್ಭ ನಮ್ಮ ಮಾತಾ ಸೇವಾ ಟ್ರಸ್ಟಿನ ಸೌಭಾಗ್ಯ ಎಂದೇ ಹೇಳಬಹುದು. ಶ್ರೀ ಮಾತಾ ಸೇವಾ ಟ್ರಸ್ಟ್ ಹರಿಯುವ ನೀರಾಗಬೇಕೆಂದು ಸಮಾಜಕ್ಕೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ನೀಡುತ್ತೇವೆ, ಆದ್ದರಿಂದ ಸರ್ವ ನಾಗರಿಕರ ಸಹೃದಯಗಳ ಸಹಕಾರ ಅಗತ್ಯ ಎಂದು, ತಮ್ಮ ಟ್ರಸ್ಟಿನ ಉದ್ದೇಶ, ತಮ್ಮ ತಾಯಿಯ ವ್ಯಕ್ತಿತ್ವದ ಗುಣಗಾನವನ್ನು ಅತ್ಯಂತ ಸುಂದರವಾಗಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ನುಡಿದರು…
ಕಾರ್ಯಕ್ರಮದ ಉದ್ಘಾಟನೆಯನ್ನು ಹಂಪಾಪಟ್ಟಣ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಉಪ್ಪಾರ್ ಹುಲಿಗಮ್ಮ ಕಾಳಪ್ಪನವರು ಉದ್ಘಾಟನೆ ನೆರವೇರಿಸಿದರು.. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಕಲಾವಿದರಾದ ಗೆದ್ದಲಗಟ್ಟಿ ತಿಮ್ಮಣ್ಣನವರು ಶ್ರೀನಿವಾಸ ರವರು ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಗ್ರಾಮದಲ್ಲಿ ಏರ್ಪಡಿಸುತ್ತಿರುವುದು ಸಂತೋಷಕರವಾದ ಅಭಿನಂದನೆಯ ವಿಷಯ ಎಂದು ಟ್ರಸ್ಟಿಗೆ ಶುಭ ಹಾರೈಸಿದರು..
ಹಾಗೆ ಗ್ರಾಮದ ಮುಖಂಡರಾದ ಶ್ರೀ ಟಿ ಮಹೇಂದ್ರರವರು ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಸಂಸ್ಕಾರಹೀನ ಸಮಾಜ ಬೆಳೆಯುತ್ತಿರುವುದು ಅತ್ಯಂತ ನೋವಿನ ವಿಷಯವಾಗಿದೆ, ಆದ್ದರಿಂದ ಸರ್ವರೂ ತಂದೆ ತಾಯಿಗಳ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಉತ್ತಮ ಸಂಸ್ಕಾರವಂತ ನಾಗರಿಕರಾಗಬೇಕೆಂದು, ಕರೆ ನೀಡಿದರು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗ್ರಾಮ ಪಂಚಾಯತಿಯ ಸದಸ್ಯರಾದ ಟಿ ಮಂಜುನಾಥ್, ವಿ ಎಸ್ ಎಸ್ ಎನ್ ಸದಸ್ಯರಾದ ಕೆ ಹುಲಗಪ್ಪನವರು ತಮ್ಮ ಅತಿಥಿ ನುಡಿಗಳನ್ನಾಡಿದರು…
ವೇದಿಕೆ ಮೇಲೆ ಮಾತಾ ಸೇವಾ ಟ್ರಸ್ಟಿನ ಉಪಾಧ್ಯಕ್ಷರಾದ ಜಿ ವೆಂಕಣ್ಣ ಶೆಟ್ಟಿ ಆರ್ ಕಾಜಾ ಸಾಬ್, ಓ ಕೊಟ್ರೇಶ್, ಓಂಕಾರಿ ಆಚಾರ್ , ಮಣೆಗಾರ್ ಉಮೇಶ್, ಕರ್ನಾಟಕ ಕಾರ್ಮಿಕ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಹಡಗಲಿ ಖಾಜಾ, ವೇದಿಕೆ ಮೇಲೆ ಉಪಸ್ಥಿತರಿದ್ದರು..
ದಿವಂಗತ ಜಿ ಹನುಮಕ್ಕನವರ ಏಳನೇ ವರ್ಷದ ಪುಣ್ಯ ಸ್ಮರಣೀಯ ಪ್ರಯುಕ್ತ..
ಪೌರ ಕಾರ್ಮಿಕರಾದ..ನೇತ್ರಾವತಿ,ಶ್ರುತಿ, ಸುಧಾ ಹಾಗೂ KPTCL ನೌಕರರಾದ ಅಂಜಿನಪ್ಪ,* *ಸುರೇಶ್ ,ಅಜಯ್ ಕುಮಾರ್, ಹಾಗೆ ಚಿತ್ರ ಕಲಾವಿದರಾದ ಆನಂದ ಕಡ್ಲಿ, ತಳವಾರ್ ಕೊಟ್ರೇಶ್, ಇಂತಹ ಮಹಾನ್ ಸಾಧಕರಿಗೆ ಅತ್ಯಂತ ಗೌರವ ಪೂರಕವಾಗಿ, ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಾರ್ಥನೆ ಮತ್ತು ಸಂಗೀತದ ರಸದೌತಣವನ್ನು ಸಂಗೀತ ಶಿಕ್ಷಕಿ ಸುರೇಖಾ ಮೇಡಂ ಕಾರ್ಯಕ್ರಮದ ಸಭಾ ನಿರ್ವಹಣೆಯನ್ನು ನಾಗರಾಜ್ ಗಂಟಿ ನೆರವೇರಿಸಿದರು,ಸವಿತಾ ಶ್ರೀನಿವಾಸ ಸ್ವಾಗತಿಸಿದರು..
ಸಿಗೆನಹಳ್ಳಿ ಬಸವರಾಜ್ ವಂದಿಸಿದರು. ಈ ಸಂದರ್ಭದಲ್ಲಿ ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೇಶವ ಮೂರ್ತಿ.. ಜಿ ಸರಸ್ವತಿ ಸುಮಾ ಪದ್ಮ ಸೌಮ್ಯ ಜಿ ಸತ್ಯನಾರಾಯಣ ಮ್ಯಾಗಳ ಮನೆ ಕನಕಪ್ಪ ಸೋಮು ವಾಲ್ಮೀಕಿ,ಸಣ್ಣ ಮಂಜುನಾಥ್ ಗಂಟಿ, ವಡ್ಡರ ಹಾಲಪ್ಪ, ಕೊಟ್ರೇಶ ಗೋ ಮಾತಾ,ನಾಗರಾಜ್, ಸುನಿಲ್, ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ