ಜೂಡಿ ನ್ಯೂಸ್:
ಜನರಿಗೆ ಮನರಂಜನೆ ನೀಡಿದ ಮೋಡಿಕಾರ ಆಟ..
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣ ಗ್ರಾಮದಲ್ಲಿ ಜನಪದ ಪರಂಪರೆಯ..ಗ್ರಾಮದಲ್ಲಿ ಸುಮಾರು 150 ವರ್ಷಕ್ಕಿಂತ ಹೆಚ್ಚಿನ ಇತಿಹಾಸವಿರುವ ಮೊಡಿಕಾರ ಆಟವನ್ನು ಗ್ರಾಮದ ಹಿರಿಯರು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು…..
ವಿಜಯನಗರ ಜಿಲ್ಲೆಯಲ್ಲಿ ಎಲ್ಲಿ ನಡೆಯದ ವಿಶೇಷವಾಗಿ ಹಂಪಾಪಟ್ಟಣ ಗ್ರಾಮದಲ್ಲಿ ಯುಗಾದಿಯ ಪಾಡ್ಯದ ಮರು ದಿನ ನಡೆಯುವ ಮೋಡಿಕಾರ ಆಟಕ್ಕೆ ತನ್ನದೇ ಆದ ವಿಶೇಷವಾದ ಮಹತ್ವವಿದೆ ನೆರೆದಿರುವ ಅಪಾರ ಜನಸ್ತೋಮಕ್ಕೆ ನಕ್ಕು ನಗಿಸುವ ಮೂಲಕ ಬೇಸಿಗೆಯ ಬಿಸಿಲಿನ ದಗೆ ಮರೆಸಿ ಎಲ್ಲರಿಗೂ ಸಂತೋಷದ ಉತ್ಸಾಹದ ಹೊನಲನ್ನು ತರಿಸಿತು..
ಮೊದಲು ಗ್ರಾಮದ ಪ್ರಮುಖ ಬೀದಿಯಲ್ಲಿ ರಂಗು ರಂಗಿನ ಐದು ಚೌಕಟ್ಟನ್ನು ನಿರ್ಮಿಸಿ ಅದರೊಳಗೆ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಿ ಐದು ರಂಗದ ಒಳಗೆ ಹೋಳಿಗೆ ರೊಟ್ಟಿ, ಸಂಡಿಗೆ ಹಪ್ಪಳ ತಿಂಡಿ ತಿನಿಸುಗಳ ಈಟ್ಟು ಮೋಡಿಕಾರ ಆಟಕ್ಕೆ ಎಲ್ಲರೂ ಅಣಿಯಾಗುತ್ತಾರೆ.. ನಂತರ ಆಟದ ಪ್ರತಿವಾದಿಗಳನ್ನು ಕರೆತರಲು ಹಲಿಗೆ ವಾದನದ ಮೂಲಕ ಆರುಜನ ಮೋಡಿಗಾರ ಆಟಗಾರರನ್ನು ಮೆರೆವಣಿಗೆಯ ಮೂಲಕ ಕರೆತಂದು… ನಂತರ ಶಕ್ತಿದೇವಿತೆಯ ಆರಾಧಕನನ್ನು ರಂಗಮಂಟಪಕ್ಕೆ ಕರೆ ತಂದ ಬಳಿಕ ದೇವಿಗೆ ಪೂಜಿಸುವ ಮೂಲಕ ಆಟವನ್ನು ಪ್ರಾರಂಭ ಮಾಡುತ್ತಾರೆ…
ಪ್ರತಿವಾದಿಗಳು ತಮ್ಮ ತಂತ್ರಗಳ ಮೂಲಕ ತಮ್ಮ ಶಕ್ತಿಯ ಮೂಲಕ ಜನರನ್ನೂ ರಂಜಿಸುತ್ತ ತಮ್ಮ ಪರಾಕ್ರಮದ ಮೂಲಕ ಹಲಗೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ರಂಗ ಮಂಟಪದ ಮೇಲೆ ವಸ್ತುಗಳನ್ನು ಕದಿಯಲು ಬರುತ್ತಾರೆ… ರಂಗ ಮಂಟಪದ ಶಕ್ತಿ ದೇವತೆಯ ಆರಾಧಕ ಮೈ ಮೇಲೆ ದೇವತೆಯನ್ನು ಆಹ್ವಾನಿಸಿಕೊಂಡು ಬೇವಿನ ತಪ್ಪಲನ್ನು ಹಿಡಿದುಕೊಂಡು ತನ್ನ ವಿವಿಧ ಮೊಜುಲುಗಳನ್ನು ಪ್ರತಿವಾದಿಗಳನ್ನು ಎದುರಿಸಿ .. ತಂತ್ರ ಮಂತ್ರಗಳ ಮೂಲಕ .. ಬೂದಿ ಬೇವಿನ ಸೊಪ್ಪುಗಳ ಮೂಲಕ ಪ್ರತಿವಾದಿಗಳನ್ನು ಎದುರಿಸಿ ಹಿಮ್ಮೆಟ್ಟಿಸುತ್ತಾನೆ… ಇದೇ ರೀತಿಯಾಗಿ ರಂಗಮಂಟಪದ ಮೇಲಿರುವ ವಸ್ತುಗಳನ್ನು ಕದಿಯುತ್ತಾ ಕದಿಯುತ್ತ… ದೇವಿಯ ಆರಾಧಕ ಶಕ್ತಿಯನ್ನು ತೋರಿಸುತ್ತಾ ವಿವಿಧ ಬಗೆಯ ಮಜುಲುಗಳನ್ನು ವ್ಯಕ್ತಪಡಿಸುತ್ತಾ ಪ್ರತಿವಾದಿಗಳನ್ನು ಎದುರಿಸಿ ಜನರಿಗೆ ಮನರಂಜನೆ ನೀಡುತ್ತಾರೆ…
ಈ ಹಬ್ಬದ ವಿಶೇಷ ಏನೆಂದರೆ ಗ್ರಾಮಕ್ಕೆ ಕಾಲ ಕಾಲಕ್ಕೆ ಮಳೆ ಬೆಳೆ ಆಗಲಿ, ಗ್ರಾಮದ ಸರ್ವ ಸಮಾಜದವರಿಗೆ ಒಳ್ಳೆಯದಾಗಲಿ, ಗ್ರಾಮದಲ್ಲಿ ಕಳ್ಳತನ ರೋಗ ಬಾದೆಗಳು ಅನಾರೋಗ್ಯ ಕಾಡದಿರಲಿ… ಸರ್ವರಲ್ಲಿ ಶಾಂತಿ ಸೌಹಾರ್ದತೆ ನೆಮ್ಮದಿ .. ಒಗ್ಗಟ್ಟು ಎಲ್ಲರಲ್ಲಿ ಒಡ ಮೂಡಲಿ.. ಹಾಗೆಯೇ ಜನರಿಗೆ ಮನರಂಜನೆ ನೀಡುವುದು ಈ ಹಬ್ಬದ ಪ್ರಮುಖ ಆಶಯವಾಗಿದೆ…
ಇಲ್ಲಿ ಯಾವುದೇ ಮಂತ್ರ ತಂತ್ರಕ್ಕೆ ಮೌಡ್ಯಕ್ಕೆ ಪ್ರಧಾನ ನೀಡದೆ…
ಗ್ರಾಮದ ಜನರನ್ನು ಮನರಂಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಮೋಡಿಕಾರ ಆಟದ ಎಚ್ ಫಕೀರಪ್ಪನವರು ತಿಳಿಸಿದರು..
ಈ ಸಂದರ್ಭದಲ್ಲಿ ತೊಗರಿ ಹನುಮಂತಪ್ಪ, ಚಿಂತರಪಲ್ಲಿ ಬಸಪ್ಪ, ಮಲ್ಲಪ್ಪ, ವಟುಮ್ನಳ್ಳಿ ಮಂಜುನಾಥ, ಗುಬ್ಬೇರ್ ಅಂಜಿನಪ್ಪ ಆರು ಜನ ಪ್ರತಿವಾದಿ ಮೋಡಿಕಾರ ಆಟಗಾರರು ಆದರೆ..
ಒಬ್ಬರು ದೇವಿಯ ಆರಾಧಕರಾಗೆ ಬಡಿಗೇರ್ ಪಂಪಣ್ಣ ಇತರರಿದ್ದರು.ಹಲಗೆ ವಾದಕರಾಗಿ ಎಚ್ಚ್ ಹುಲಗಪ್ಪ ಎಚ್ ನಿಂಗಪ್ಪ ಭಾಗವಹಿಸಿದ್ದರು…
ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ತ ಮುಖಂಡರು.. ಗ್ರಾಮದ ನಾಗರಿಕರು ರೈತ ಬಾಂಧವರು ಯುವ ಜನರು ಚಿನ್ನರು ಮಕ್ಕಳು.. ಸರ್ವರು ಪಾಲ್ಗೊಂಡು ಮೋಡಿಕಾರ ಆಟವನ್ನು ಸವಿದು ಯುಗಾದಿ ಹಬ್ಬಕ್ಕೆ ತೆರೆ ಎಳೆದರು..
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ