July 12, 2025

ಮನುಷ್ಯನು ದೇವರಿಗಾಗಿ ಭಕ್ತಿಪೂರ್ವಕ ರಥಗಳನ್ನು ನಿರ್ಮಿಸಿರುವುದು ಭಕ್ತಿ ದ್ಯೋತಕವಾಗಿದೆ – ಉತ್ತರಾಧಿಮಠದ ಸತ್ಯಾತ್ಮತೀರ್ಥ ಪಾದಂಗಳವರು

ಜೂಡಿ ನ್ಯೂಸ್:

ಮನುಷ್ಯನು ದೇವರಿಗಾಗಿ ಭಕ್ತಿಪೂರ್ವಕ ರಥಗಳನ್ನು ನಿರ್ಮಿಸಿರುವುದು  ಭಕ್ತಿ ದ್ಯೋತಕವಾಗಿದೆ – ಉತ್ತರಾಧಿಮಠದ ಸತ್ಯಾತ್ಮತೀರ್ಥ ಪಾದಂಗಳವರು

ಮರಿಯಮ್ಮನಹಳ್ಳಿ: ಮನುಷ್ಯನ ದೇಹವೇ ಒಂದು ರಥವಾಗಿದ್ದು, ಪ್ರತಿಯೊಬ್ಬರ ಆತ್ಮ ರಥದಲ್ಲಿ ದೇವರು ಪ್ರತಿಷ್ಠಾಪನೆಯಾಗಿತ್ತಾನೆ. ಮನುಷ್ಯನ ದೇಹದ ರಥಕ್ಕೆ ಅಂಗಾಂಗಳ ರಥವನ್ನು ಪಡೆದುಕೊಂಡ ಮನುಷ್ಯನು ದೇವರಿಗಾಗಿ ಒಂದು ಭಕ್ತಿಪೂರ್ವಕ ರಥಗಳನ್ನು ನಿರ್ಮಿಸಿರುವದಕ್ಕೆ ಭಕ್ತಿಯ ಧೂತಕವಾಗಿದೆ ಎಂದು ಉತ್ತರಾಧಿಮಠದ ಸತ್ಯಾತ್ಮತೀರ್ಥ ಪಾದಂಗಳವರು ಹೇಳಿದರು.

ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ನವೀಕರಣದ ಶುಧ್ದೀಕರಣ ಹಾಗೂ ನೂತನ ಜೋಡಿ ರಥಗಳ ಲೋಕಾರ್ಪಣೆಯ ಅಂಗವಾಗಿ ಉಭಯಸ್ವಾಮಿಗಳಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.

ದೇವರ ಮೇಲಿನ ಭಕ್ತಿಯಿಂದ ಸುಂದರವಾಗಿ ಮತ್ತು ಭಕ್ತಿಯಿಂದ ರಥಗಳನ್ನುನಿರ್ಮಿಸಿರುವಂಥ ರಥದಲ್ಲಿ ದೇವರನ್ನು ಕಾಣಬೇಕು. ಈ ಊರಿನ ಭಕ್ತರು ಶ್ರೀಲಕ್ಷ್ಮೀನಾರಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಗಳನ್ನು ಶಾಸ್ತ್ರಕ್ತವಾಗಿ ನವೀಕರಣಗೊಳಿಸಿರುವುದು ಪುರಾತನ ದೇಗುಲದಂತಿದೆ. ಹಾಗೂ ವೈಭವಿಯುತ ಜೋಡಿ ರಥಗಳನ್ನು ನಿರ್ಮಿಸಿ ದೇವರನ್ನು ಅತ್ಯಂತ ಎತ್ತರ ಸ್ಥಾನದಲ್ಲಿ ಕೂಡಿಸಿ ರಥೋತ್ಸವದಲ್ಲಿ ಜನರಿಗೆ ದರ್ಶನ ನೀಡುವ ಭಾಗ್ಯ ಒದಗಿಸಿದಂದಾಗಿದೆ ಎಂದರು.

ನಂತರ ಶ್ರೀಗಳು ನೂತನ ಜೋಡಿ ರಥಗಳಲ್ಲಿ ಮೂಲ ರಾಮದೇವರು, ಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪುಷ್ಪಾರ್ಚಾನೆ ಗೈದರು. ದೇವಸ್ಥಾನದಲ್ಲಿ ನಡೆದ ಹೋಮ ಹವಣಗಳಿಂದ ಆಹ್ವಾನಿತ ದೇವರನ್ನು ನೂತನ ಜೋಡಿ ರಥದಲ್ಲಿ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಿದರು.

ಶಾಸಕ ಕೆ. ನೇಮಿರಾಜ್‌ ನಾಯ್ಕ ಮಾತನಾಡಿ, ಶ್ರೀಲಕ್ಷ್ಮೀನಾರಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಜೋಡಿ ನೂತನ ರಥಗಳ ನಿರ್ಮಾಣಕ್ಕೆ ಭಕ್ತರು ಸಲ್ಲಿಸಿದ ದೇಣೆಗೆಯಿಂದಲೇ ಎರಡು ನೂತನ ರಥಗಳ ನಿರ್ಮಾಣವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಲ್ಲಿ ಒಂದು ರಥ ಅಂದರ ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥದ ಸಂಪೂರ್ಣ ವೆಚ್ಚವನ್ನು ಹೊಸಪೇಟೆಯ ಉದ್ಯಮಿ ಶ್ಯಾಮರಾಜ ಸಿಂಗ್‌ ನೀಡುವ ಮೂಲಕ ಭಕ್ತಿಯನ್ನು ಮೆರೆದಿದ್ದಾರೆ. ಇದರಂತೆ ಇವರ ಸಹೋದರ ಜಯರಾಜ ಸಿಂಗ್‌ ಅವರು ಸಹ ಶ್ರೀ ಆಂಜನೇಯಸ್ವಾಮಿ ನೂತನ ರಥಕ್ಕೆ50 ಲಕ್ಷ ರು.ಗಳನ್ನು ದೇಣಿಗೆ ನೀಡಿದ್ದಾರೆ. ಇದರಂತೆ ಭಕ್ತರು ದಿನನಿತ್ಯ ದೇವಣಿಗೆ ನೀಡುವ ಹಣದಲ್ಲಿ ಶ್ರೀ ಆಂಜನೇಯಸ್ವಾಮಿ ರಥ ಮತ್ತು ದೇವಸ್ಥಾನ ನವೀಕರಣಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ದೇವಸ್ಥಾನದ ಅ‍ವೃದ್ದಿ ಸಮಿತಿ ಸದಸ್ಯ ಚಿದ್ರಿ ಸತೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಾಣಿಗಳಾದ ಶ್ಯಾಮರಾಜ ಸಿಂಗ್‌, ಜಯರಾಜ ಸಿಂಗ್‌ ಕುಟುಂದದವರು, ಕಿನ್ನಾಳದ ವೇದವಾಸಜೋಶಿ ಮತ್ತು ದೇವಸ್ಥಾನ ಅಭಿವೃದ್ದಿ ಸಮಿತಿ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.