July 12, 2025

ನಾಡೋಜ ಪ್ರಶಸ್ತಿಗೆ ಭಾಜನರಾದ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್, ಚಿಂತಕ ಕುಂ.ವೀರಭದ್ರಪ್ಪ, ಹಿಂದುಸ್ತಾನಿ ಗಾಯಕ ಎಂ.ವೆಂಕಟೇಶಕುಮಾರ್

ಜೂಡಿ ನ್ಯೂಸ್:

ಕನ್ನಡ ವಿ.ವಿ. 33ನೇ ಘಟಿಕೋತ್ಸವ :

ಹೊಸಪೇಟೆ : ಕನ್ನಡ ವಿಶ್ವವಿದ್ಯಾಲಯ ತನ್ನ 33 ನೇ ಘಟಿಕೋತ್ಸವದ ಪ್ರಯುಕ್ತ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಮಂಟಪ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಮಾನ್ಯ ಕುಲಪತಿಯವರು 33ನೇ ಘಟಿಕೋತ್ಸವದಲ್ಲಿ ನಾಡೋಜ ಗೌರವ ಪದವಿಗೆ ಭಾಜನರಾದ ಮೂವರು ಮಹನೀಯರ ಹೆಸರುಗಳನ್ನು ಪ್ರಕಟಿಸಿದರು.

ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ವಿಶ್ರಾಂತ ಸುಪ್ರೀಂಕೋರ್ಟ್ ನ್ಯಾಯಾಧೀಶರು ನವದೆಹಲಿ, ಹಾಗೂ ಲೋಕಾಯುಕ್ತರು ಕರ್ನಾಟಕ ಸರ್ಕಾರ ಬೆಂಗಳೂರು, ಕುಂ.ವೀರಭದ್ರಪ್ಪ(ಕು.ವೀ) ಪ್ರಖ್ಯಾತ ಬರಹಗಾರರು ಮತ್ತು ಚಿಂತಕರು ಕೊಟ್ಟೂರು, ವಿಜಯನಗರ ಜಿಲ್ಲೆ. ಮತ್ತು ಪದ್ಮಶ್ರೀ ಎಂ.ವೆಂಕಟೇಶ್‌ಕುಮಾರ್ ಪ್ರಖ್ಯಾತ ಹಿಂದೂಸ್ತಾನಿ ಗಾಯಕರು, ಧಾರವಾಡ, ಇವರಿಗೆ ಘನತೆವೆತ್ತ ರಾಜ್ಯಪಾಲರು ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಸರ್ಕಾರದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರೂ ಸಮಕುಲಾಧಿಪತಿಗಳೂ ಆಗಿರುವ.ಡಾ.ಎಂ.ಸಿ. ಸುಧಾಕರ್ ಅವರು ಡಿ.ಲಿಟ್ ಹಾಗೂ ಪಿಎಚ್.ಡಿ. ಪದವಿಗಳನ್ನು ಪ್ರದಾನ ಮಾಡಲಿದ್ದಾರೆ.

ಪ್ರೊ.ರಾಜಾಸಾಬ್ ಎ.ಎಚ್. ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಬೆಂಗಳೂರಿನ ರಾಮಯ್ಯ ತಾಂತ್ರಿಕ ಸಂಸ್ಥೆ, ಮತ್ತಿಕೆರೆ ಇದರ ಮುಖ್ಯ ಸಂಶೋಧನಾ ಸಲಹೆಗಾರರು ಇವರು ಘಟಿಕೋತ್ಸವ ಭಾಷಣ ಮಾಡುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಧರ್ಭದಲ್ಲಿ ಕುಲ ಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಹಣಕಾಸು ಅಧಿಕಾರಿಗಳಾದ ಡಾ. ಎ. ಶ್ರೀಧರ, ಅಧ್ಯಯನಾಂಗದ ನಿರ್ದೇಶಕ

ಡಾ. ಅಮರೇಶ ಯತಗಲ್, ಭಾಷಾನಿಕಾಯದ ಡೀನ್, ಪ್ರಾಧ್ಯಾಪಕಡಾ. ಎಫ್.ಟಿ.ಹಳ್ಳಿಕೇರಿ,ಡಾ. ಚಲುವರಾಜು, ಪ್ರಾಧ್ಯಾಪಕರು, ಡೀನ್ ಸಮಾಜವಿಜ್ಞಾನಗಳ ನಿಕಾಯಡಾ. ಶಿವಾನಂದ ಎಸ್. ವಿರಕ್ತಮಠ, ಪ್ರಾಧ್ಯಾಪಕರು, ಡೀನ್ ಲಲಿತಕಲಾ ನಿಕಾಯಡಾ. ಶೈಲಜ ಇಂ. ಹಿರೇಮಠ, ಪ್ರಾಧ್ಯಾಪಕರು, ಡೀನ್ ವಿಜ್ಞಾನಗಳ ನಿಕಾಯಡಾ. ಅಶೋಕುಮಾರ ರಂಜೇರೆ, ಪ್ರಾಧ್ಯಾಪಕರು, ಅಧ್ಯಕ್ಷರು ಮಾಧ್ಯಮ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ ಸಮಿತಿ

ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಾಧ್ಯಾಪಕರು, ಸದಸ್ಯರು, ಮಾಧ್ಯಮ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ ಸಮಿತಿಡಾ. ಎಸ್.ಆರ್. ಚನ್ನವೀರಪ್ಪ, ಪ್ರಾಧ್ಯಾಪಕರು, ಸದಸ್ಯರು, ಮಾಧ್ಯಮ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ ಸಮಿತಿಡಾ. ಈ. ಎರ‍್ರಿಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಸದಸ್ಯರು, ಮಾಧ್ಯಮ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ ಸಮಿತ ಡಾ.ಎಸ್.ವೈ. ಸೋಮಶೇಖರ, ಸಂಯೋಜನಾಧಿಕಾರಿ, ಸಮುದಾಯ ಬಾನುಲಿ ಕೇಂದ್ರಡಾ. ಎ. ವೆಂಕಟೇಶ, ಉಪಕುಲಚಿವರು, ಆಡಳಿತ ಶಾಖೆಬಿ. ಗುರುಬಸಪ್ಪ, ಸಹಾಯಕ ಕುಲಸಚಿವರು ನಿರ್ವಹಣಾ ಶಾಖೆಎಸ್.ಕೆ. ವಿಜಯೇಂದ್ರ, ಸಹಾಯಕ ನಿರ್ದೇಶಕರು, ಅಧ್ಯಕ್ಷರು, ಆನ್‌ಲೈನ್ ಪ್ರಸಾರ ಸಮಿತಿಕೆ. ಶ್ರೀನಿವಾಸಲು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಮುಖ್ಯಸ್ಥರು, ತಾಂತ್ರಿಕ ವಿಭಾಗಡಾ.ಡಿ. ಮೀನಾಕ್ಷಿ, ಉಪನಿರ್ದೇಶಕರು, ಸಂಚಾಲಕರು, ಮಾಧ್ಯಮ ಹಾಗೂ ಆಮಂತ್ರಣ ಪತ್ರಿಕೆವಿತರಣೆ ಸಮಿತಿ, ಇದ್ದರು.