July 13, 2025

ಕೊಪ್ಪಳದಲ್ಲಿ ಕಾರ್ಮಿಕ ಮತ್ತು ರೈತ ಸಂಘಟನೆ ಯಿಂದ ಬೃಹತ್ ಪ್ರತಿಭಟನೆ

ಜೂಡಿ ನ್ಯೂಸ್ :

ಕೊಪ್ಪಳದಲ್ಲಿ ಕಾರ್ಮಿಕ ಮತ್ತು ರೈತ ಸಂಘಟನೆ ಯಿಂದ ಬೃಹತ್ ಪ್ರತಿಭಟನ

ಕೊಪ್ಪಳ ಏಪ್ರಿಲ್ 11, ಶುಕ್ರವಾರ ನಗರದಲ್ಲಿ ಕಾರ್ಮಿಕ ಸಂಘಟನೆ ಕಟ್ಟಡ ಕಾರ್ಮಿಕ ಸಕಟಣೆ ಮತ್ತು ರೈತ ಸಂಘಟನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಗಾಗಿ ಒತ್ತಾಯಿಸಿ ಹಾಗೂ ಕಾರ್ಮಿಕ ಇಲಾಖೆಯ ಅವ್ಯವಾರ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದವರು

 ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಬೃಹತ್ ಪ್ರತಿಭಟನೆ ಮುಖಾಂತರ ಘೋಷಣೆಗಳು ಕೂಗುತ್ತಾ ಜಿಲ್ಲಾ ಆಡಳಿತ ಭವನದ ಎದುರು ಧರಣಿ ಹಾಗೂ ಭಾಷಣಗಳ ಮುಖಾಂತರ ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಅಧಿಕಾರ. ಅಧಿಕಾರಿಗಳ ಗಮನ ಸೆಳೆಯಲಾಯಿತು ಹಾಗೂ ಪ್ರಧಾನ ಕಾರ್ಯದರ್ಶಿ ಸುಲ್ತಾನ್ ಮೆಹಬೂಬ್ ಅಲಿ ಪಠಾನ್ ಇವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಕಾರ್ಮಿಕರ ಕಿಟ್ ಗಳ ನೆಪದಲ್ಲಿ ಕೋಟಿಗಟ್ಟಲೆ ಹಣ ವನ್ನು ಲೂಟಿ ಮಾಡುವುದನ್ನು ಬಿಟ್ಟು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಯದಾನವನ್ನು ಹೆಚ್ಚಳಮಾಡುವ ಮುಖಾಂತರ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಡಬೇಕು ಹಾಗೂ ಮದುವೆ ಸಾಯದಾನ ಕೂಡ ಒಂದು ಲಕ್ಷದವರೆಗೆ ಮಾಡಬೇಕಾಗಿ ಒತ್ತಾಯಿಸಿದರು ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವ ಸಂಘದ ಅಧ್ಯಕ್ಷರು ಹಾಗೂ ರೈತ ಸಂಘದ ಜಿಲ್ಲಾ ಅಧ್ಯಕ್ಷರು ಮುಸ್ತಫ ಪಠಾನ್ ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆ ಕಾರ್ಮಿಕ ಒಕ್ಕೂಟ ಸಮಿತಿಗೆ ಬೆಂಬಲ ಕೊಟ್ಟು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ ಈ ಮಂಡಳಿ ಭದ್ರಕೋಟೆಯನ್ನಾಗಿ 2007ರಲ್ಲಿ ಮಂಡಳಿ ರಚನೆ ಮಾಡಿ 2000 ಕೋಟಿ ಹಣವನ್ನು ಜಮಾ ಮಾಡಿ ಕಾರ್ಮಿಕರಿಗೆ ಸಹಾಯ ಮಾಡಿದಏಕೈಕ ವ್ಯಕ್ತಿ ಅಂದ್ರೆ ಅದು ಮಾಜಿ ಸಚಿವರು ಇಕ್ಬಾಲ್ ಅನ್ಸಾರಿ ಎಂದು ಸ್ಮರಣೆ ಮಾಡಿದರು. ಹಾಗೂ ಶ್ರಮಜೀವಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಶಿವಕುಮಾರ್ ಗೌಡ್ರು ಭಾಗವಹಿಸಿ ಕಾರ್ಮಿಕರ ಧನಸಹಾಯವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಘೋಷಣೆ ಕೂಗುತ್ತಾ ಒತ್ತಾಯ ಮಾಡಿದರು ಹಾಗೂ ಎಲ್ಲಾ ಕಾರ್ಮಿಕ ಸಂಘದ ಮುಖಂಡರುಗಳು ಅಧ್ಯಕ್ಷರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು ಹುಲುಗಪ್ಪ ಹೋರಾಟಗಾರರು ಹನುಮಂತ ತಿಮ್ಮಪ್ಪ ಹೋರಾಟಗಾರರು ಬಾಬು ಮೇಸ್ತ್ರಿ ಮೆಹಬೂಬ್ ಸಾಬ್ ಬೂಂದಿ. ಹನುಮೇಶ್ ನಾಯಕ್ ಮೇಸ್ತ್ರಿ ಹನುಮಂತ ಐವಾಳ. ಮಹಿಳಾ ಅಧ್ಯಕ್ಷರು ಫಾತಿಮಾ. ಕಾರ್ಮಿಕ ಅಧ್ಯಕ್ಷರು ರುದ್ರಪ್ಪ ಹಾಗೂ ಪಂಪ ಪತಿ ಅಧ್ಯಕ್ಷರು. ಮಲ್ಲಿಕಾರ್ಜುನ್ ಅಧ್ಯಕ್ಷರು. ಅಂಜನಪ್ಪ ಅಧ್ಯಕ್ಷರು ಶರಣಪ್ಪ ತಳವಾರ ಎಲ್ಲಾ ಪದಾಧಿಕಾರಿಗಳು ಭಾಗವಹಿ ಜಿಲ್ಲಾ ಒಕ್ಕೂಟ ಹೋರಾಟ ಸಮಿತಿಗೆ ಬೆಂಬಲ ಕೊಟ್ಟು ಹೋರಾಟದ ಕಾರ್ಯಕ್ರಮವನ್ನು ಯಶಸ್ವಿ ಮಾಡಲಾಯಿತು ಭಾರಿ ಸಂಖ್ಯೆಯಲ್ಲಿ ಕಾರ್ಮಿಕ ವರ್ಗದವರು ಕಟ್ಟಡ ಕಾರ್ಮಿಕರು ಹಾಗೂ ರೈತ ಮುಖಂಡರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೃಹತ್ ಪ್ರತಿಭಟನೆ ಧರಣಿಯಲ್ಲಿ ಪಾಲ್ಗೊಂಡಿದ್ದರು.