July 13, 2025

ನಗರದ ತಾಲೂಕ ಕ್ರೀಡಾಂಗಣದಲ್ಲಿ ನಾಳೆಯಿಂದ ಪ್ರವಚನ ಪ್ರಾರಂಭ

ಜೂಡಿ ನ್ಯೂಸ್ :

ನಗರದ ತಾಲೂಕು ಕ್ರೀಡಾಂಗಣದಲ್ಲಿ ನಾಳೆಯಿಂದ ಪ್ರವಚನ ಪ್ರಾರಂಭ

 ಕೊಪ್ಪಳ : ಬಸವ ಜಯಂತಿ ಆಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ 9ನೇ ವರ್ಷವು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕೊಪ್ಪಳ ಹಾಗೂ ಪ್ರವಚನ ಸೇವ ಸಮಿತಿ ಕೊಪ್ಪಳ ಇವರಿಂದ ದಿನಾಂಕ 13-04- 2025ರ ರವಿವಾರದಿಂದ ದಿನಾಂಕ 30-04-2025ರ ಬಸವ ಜಯಂತಿಯವರೆಗೂ 18 ದಿನಗಳ ಕಾಲ ಪ್ರತಿ ನಿತ್ಯ ಸಂಜೆ 6:30 ರಿಂದ 8:00 ಗಂಂಟೆವರೆಗೆ ನಗರದ ತಾಲೂಕ ಕೀಡಾಂಗಣದಲ್ಲಿ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಪ್ರವಚನಕಾರರಾಗಿ ಅಥಣಿ ತಾಲೂಕಿನ ಜನವಾಡ ಗ್ರಾಮದ ಅಲ್ಲಮ ಪ್ರಭು ಮಠದ ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿತ್ಯ ಪ್ರವಚನ ನೆರವೇರಿಸಲಿದ್ದಾರೆ. ದಿನಾಂಕ 13-04-2025 ರವಿವಾರ ಸಂಜೆ 6:30ಕ್ಕೆ ಪ್ರವಚನ ಕಾರ್ಯಕ್ರಮದ ಉದ್ಘಾಟಕರಾಗಿ ಬಸವಧಾಮ ಅತ್ತಿವೇರಿಯ ಪೂಜ್ಯ ಶ್ರೀಮಾತೆ ಬಸವೇಶ್ವರಿ ತಾಯಿ ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಸದರಾದ ಕೆ. ರಾಜಶೇಖರ ಹಿಟ್ನಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ನಗರ ಸಭೆ ಅಧ್ಯಕ್ಷರಾದ ಅಮದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಜೆ.ಡಿ.ಎಸ್. ಮುಖಂಡರಾದ ಸಿ.ವಿ. ಚಂದ್ರಶೇಖರ, ಬಿ.ಜೆ.ಪಿ ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಕ್ರೀಡಾ ಇಲಾಖೆಯ ವಿಠಲ್ ಜಾಬಗೌಡರ, ಸರಕಾರಿ ಅಭಿಯೋಜಕರಾದ ಬಿ.ಎಸ್. ಪಾಟೀಲ್,

ಮುಖಂಡರಾದ ಮಹಾಂತೇಶ ಮೈನಳ್ಳಿ, ಸೋಮನಗೌಡ ಮಾಲಿಪಾಟೀಲ್, ಬಸವರಾಜ ಬೆಳೊಳ್ಳಿ, ವೆಂಕಟೇಶ್ ಬಾರಕೇರ್, ಮುತ್ತುರಾಜ ಕುಷ್ಟಗಿ, ರಾಜಶೇಖರ್ ಆಡೂರು, ಚಂದ್ರಶೇಖರ್ ಕಚಲೂರು, ಗುರುರಾಜ ಹಲಗೇರಿ, ಹನುಮಂತಪ್ಪ ಸರಿಗಮ, ವಿರೇಶ ಮಾಂತಯ್ಯನಮಠ, ನಿರ್ಮಲಾ ಬೆಳ್ಕೊಳ್ಳಿ, ಸಾವಿತ್ರಿ ಮುಜುಂದಾರ, ಶಿವಕುಮಾರ ಪಾವಲಿಶೆಟ್ಟರ್, ಮಂಜುನಾಥ ಗೊಂಡಬಾಳ, ಮುಂತಾದವರು ಆಗಮಿಸಲಿದ್ದಾರೆ. ಎಲ್ಲಾ ಬಸವ ಸಂಘ ಸಂಸ್ಥೆಯ ಮುಖ್ಯಸ್ಥರ ವೇದಿಕೆ ಮೇಲೆ ಉಪಸ್ಥಿತರಿರುವರು.

ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ಕಾರ್ಯದರ್ಶಿ ರಾಜೇಶ ಸಸಿಮಠ ಮನವಿ ಮಾಡಿದ್ದಾರೆ.