July 13, 2025

ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅವಮಾನ:

ಜೂಡಿ ನ್ಯೂಸ್ :

ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಗಡಿಪಾರು ಮಾಡುವಂತೆ ಆಗ್ರಹ

 ಹೊಸಪೇಟೆ : ರಾಜ್ಯಸಭೆಯಲ್ಲಿ  ಡಿ.18 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಭಾಷಣದಲ್ಲಿ ಅಂಬೇಡ್ಕರ್, ಅಂಬೇಡ್ಕರ್,ಅಂಬೇಡ್ಕರ್ ಎನ್ನುವುದು ಈಗ ಕೆಲವರಿಗೆ ಫ್ಯಾಷನ್ ಆಗಿದೆ.ಇದರ ಬದಲಾಗಿ ಇಷ್ಟು ಬಾರಿ ದೇವರ ನಾಮ ಜಪಿಸಿದ್ದರೆ ಏಳೇಳು ಜನ್ಮಕ್ಕು ಸ್ವರ್ಗ ಪ್ರಾಪ್ತಿಯಾಗುತ್ತಿತ್ತು.ಎಂದು ಹೇಳಿ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಅವಮಾನಿಸಿದ್ದಾರೆ.
ಇದು ದೇಶದ ಐಕ್ಯತೆಗೆ ವಿರುದ್ಧ ಮತ್ತು ದೇಶದ್ರೋಹದ ಕೆಲಸವಾಗಿದೆ. ದೇಶದ ಶಾಂತಿ,ಕಾನೂನು ಸುವ್ಯವಸ್ಥೆ ಕಾಪಾಡುವ ಬದಲಾಗಿ ದೇಶದಲ್ಲಿ ಬೆಂಕಿ ಹಚ್ಚಿ ಶಾಂತಿ ಭಂಗ ಮಾಡುವ ಪ್ರಯತ್ನ ಮಾಡಿದ್ದಾರೆ ಹಾಗಾಗಿ ಸಂವಿಧಾನದ ಅರಿವಿಲ್ಲದ ಇವರನ್ನು ಗೃಹ ಮಂತ್ರಿ ಸ್ಥಾನದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ. ರಾಜ್ಯ ಸಮಿತಿ ಸದಸ್ಯ ಎ ಚಿದಾನಂದ ಆಗ್ರಹಿಸಿದರು.
ತಾಲೂಕಿನ ಕಮಲಾಪುರ ಪಟ್ಟಣ ಜೈ ಭೀಮ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಬಳಿಕ ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಮಾತನಾಡಿದ ಅವರು,ಡಾಕ್ಟರ್ ಬಾಬಾ ಸಾಹೇಬ್ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಇದ್ದಿದ್ದರೆ ಅಮಿತ್‍ ಶಾ ಇಂದು ಗೃಹ ಸಚಿವರಾಗಲು ಸಾಧ್ಯವಿರಲಿಲ್ಲ ಮೊದಲೇ ತಾವು ಮಾಡುತ್ತಿದ್ದ ಗುಜರಿ ಕೆಲಸವನ್ನು ಮುಂದುವರಿಸಬೇಕಿತ್ತು ಎಂಬುದನ್ನು ಅರಿಯಬೇಕು.
ಅಮಿತ್‌ ಶಾ ಅವರನ್ನು ಗಡಿಪಾರು ಮಾಡಬೇಕು ಮತ್ತು ಅವರು ದೇಶದ ಜನರಲ್ಲಿ ಕ್ಷಮೆ ಕೇಳಬೇಕು’ ಎಂದು ಡಿಎಸ್ಎಸ್  ಭೀಮವಾದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಈ ಕುರಿತು ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೆಚ್ ತಿಪ್ಪೇಸ್ವಾಮಿ ಮಾತನಾಡಿ, ಸಂಸತ್‌ನಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ ಅಪಮಾನ ಮಾಡಿರುವುದು ನಿಜವಾದ ದೇಶದ್ರೋಹದ ಕೃತ್ಯ. ಇಂತಹ ಕೀಳುಮಟ್ಟದ  ವ್ಯಕ್ತಿ ದೇಶದ ಗೃಹ ಸಚಿವ ಆಗಿರುವುದು ಈ ದೇಶಕ್ಕೆ ಮಾರಕ ರಾಜ್ಯ ಸಭೆಯಲ್ಲಿ ಮಾತನಾಡುವ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಎನ್ನುವುದು ಕೆಲವರಿಗೆ ವ್ಯಸನವಾಗಿದೆ ಎಂದು ಹೇಳುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸುವುದರ ಜೊತೆಗೆ ದೇಶದ ಸಂವಿಧಾನವನ್ನೂ ಅವಮಾನಿಸಿದ್ದಾರೆ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಎನ್ ಶರಣಪ್ಪ ಮಾತನಾಡಿ, ಅಂಬೇಡ್ಕರ್ ಅವರು ನಮಗೆ ವ್ಯಸನ ಅಲ್ಲ ನಮ್ಮ ಪಾಲಿನ ದೇವರು, ನಿತ್ಯ ಸ್ಮರಣೆ. ನಾವು ಮತ್ತು ನಮ್ಮ ಪೀಳಿಗೆ ಬದುಕಿರುವವರೆಗೂ ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಬಾಬಾಸಾಹೇಬ್ ಅಂಬೇಡ್ಕರ್ ಸ್ಮರಣೆ ಜಗತ್ತಿನಾದ್ಯಾಂತ ಇರಲಿದೆ ಇಂಥಹ ವಿಶ್ವಜ್ಞಾನಿಯನ್ನು ಅವಮಾನಿಸುವಂತಹ ಮೂರ್ಖ ಕೇಂದ್ರ ಸಚಿವ ಅಮಿತ್ ಶಾ ಅವರು  ಸಂಸತ್ತಿನಲ್ಲಿ ಇರಲು ಯೋಗ್ಯರಲ್ಲ ತಮ್ಮ ಸಚಿವ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ಕೊಟ್ಟು ಹೊರಗೆ ಹೋಗಬೇಕು ಎಂದರು.
ನಂತರ ಅಮಿತ್ ಷಾ ರವರ ಛಾಯಾ ಚಿತ್ರಗಳನ್ನು ಸುಟ್ಟು, ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಘನತೆವೆತ್ತ ರಾಷ್ಟ್ರಪತಿಗೆ ಪತ್ರ ರವಾನಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹೆಚ್ ಗೋಪಾಲಕೃಷ್ಣ, ಖಾಜಾ ಪೀರ, ಮುಖಂಡ ಕೊಟ್ಟಾಲು ವೀರೇಶ್, ಸಮಾಜ ಸೇವಕ ಖಾಜಾ ಪೀರ,ಅಮಾನುಲ್ಲ, ಕನ್ನೇಶ್ವರ, ಚಾಂದ್ ಬಾಷಾ, ಜೀರ್ ಚನ್ನಪ್ಪ, ಜಂಬಯ್ಯ,ಖಾಜಾ ಆಟೋ,ಮಲ್ಲೇಶಪ್ಪ, ಹನುಮಂತ ಬಾರೆಮರ, ಪೇಂಟರ್ ಬಾಷಾ, ರಾಘವೇಂದ್ರ,ಡೇವಿಡ್, ಎನ್ ರಾಘು, ದರ್ಶನ್,ಗೌತಮ್, ನಂದ, ಸಂತೋಷ್, ವೀರೇಶ್ ಮಧುಗುನಕೆ, ಬಸವ, ಇತರರು ಇದ್ದರು.