ಜೂಡಿ ನ್ಯೂಸ್ :
ಶಾಸಕ, ಸಂಸದರು ಸೇರಿದಂತೆ ಕೈ ನಾಯಕರಿಗೆ ಮಹಾಂತೇಶಗೌಡ ಪಾಟೀಲರಿಂದ ಸನ್ಮಾನ

ಕೊಪ್ಪಳ : ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಆಡಳಿತ ಮಂಡಳಿಯ ನಾಮನಿರ್ದೇಶನ ಸದಸ್ಯರಾಗಿ ಮಹಾಂತೇಶಗೌಡ ಪಾಟೀಲ ಅವರನ್ನು ರಾಜ್ಯಸರ್ಕಾರದ ಶಿಫಾರಸ್ಸು ಮೇರೆಗೆ ರಾಜ್ಯಪಾಲರು ನೇಮಕ ಮಾಡಿದ್ದರು.

ಈ ಹಿನ್ನೆಲೆ ನೂತನ ಆಡಳಿತ ಮಂಡಳಿಯ ಸದಸ್ಯರಾದ ಮಹಾಂತೇಶಗೌಡ ಪಾಟೀಲ ಅವರು, ಬುಧುವಾರದಂದು ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದರಾದ ರಾಜಶೇಖರ ಹಿಟ್ನಾಳ, ಮಾಜಿ ಸಂಸದರಾದ ಕರಡಿ ಸಂಗಣ್ಣನವರನ್ನು ಭೇಟಿ ಮಾಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಬದಲ್ಲಿ ಮಹಾಂತೇಶಗೌಡ ಪಾಟೀಲ ಅವರ ಹಿತೈಷಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.

More Stories
ಮಹಿಳೆ ಕೇವಲ ಗೃಹಿಣಿ ಅಲ್ಲ, ಸಮಾಜದ ನಿರ್ಮಾತೃ, ಮಾರ್ಗದರ್ಶಕಿ : ಡಾ. ಅನುಸೂಯ ಅಂಗಡಿ
ಹಂಪಾಪಟ್ಟಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಅರವಟ್ಟಿಗೆ ಪ್ರಾರಂಭ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್