ಜೂಡಿ ನ್ಯೂಸ್ :
ಯುವ ಸಮೂಹ ಶಿಕ್ಷಣಕ್ಕೆ ಆದ್ಯತೆ ನೀಡಲಿ : ಕೊಟ್ರೇಶ್
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಗೋಮಾತಾ ಕೊಟ್ರೇಶ್ ರವರ ಕಚೇರಿಯಲ್ಲಿ ಏ. 25 ರಂದು ಹಂಪಾಪಟ್ಟಣದ ಯುವಕರ ಬಳಗದ ವತಿಯಿಂದ ಪೊಲೀಸ್ ಇಲಾಖೆಗೆ ಆಯ್ಕೆಯಾದ H, ಕಿರಣ್ ಕುಮಾರ್ ಅವರಿಗೆ ಸನ್ಮಾನಿಸಿ ಗೋ ಮಾತಾ ತಳವಾರ್ ಕೊಟ್ರೇಶ್ ರವರು ಮಾತನಾಡಿದರು. …
ದೇಶದ ಶಕ್ತಿ ಎಂದರೆ ಅದುವೇ ಯುವ ಶಕ್ತಿ, ಆದ್ದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮವಾಗಿ ಅಧ್ಯಯನ ಕೈಗೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಲ್ಲಾ ಯುವ ಶಕ್ತಿ ಓದುವ ವಯಸ್ಸಿನಲ್ಲಿ ಕ್ರಮಬದ್ಧ ರೀತಿಯಲ್ಲಿ ಅಧ್ಯಯನ ಮಾಡಿ, ಉತ್ತಮವಾದ ಉದ್ಯೋಗಗಳನ್ನು ಪಡೆದು, ಹುಟ್ಟಿದ ಊರಿಗೆ ಎತ್ತ ತಂದೆ ತಾಯಿಗಳಿಗೆ ಹೆಸರನ್ನು ತರಬೇಕೆಂದು ಎಂದು ಮಾತನಾಡಿ ಅಂತಹ ಸಾಲಿನಲ್ಲಿ ನಮ್ಮ ಗ್ರಾಮದ H, ಕಿರಣ್ ಕುಮಾರ್ ರವರು ಇಂದು ಪೊಲೀಸ್ ಇಲಾಖೆಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಲ್ಲರೂ ಸಹ ಉತ್ತಮವಾದ ಅಧ್ಯಯನ ಕೈಗೊಂಡು ಅಭಿವೃದ್ಧಿ ಪದದತ್ತ ಸಾಗಬೇಕೆಂದು ತಿಳಿಸಿದರು..
ತಳ ಸಮುದಾಯಗಳ ಅಭಿವೃದ್ಧಿ ಶಿಕ್ಷಣದಿಂದಲೇ ಸಾಧ್ಯ, ಯಾರು ಸಹ ಶಿಕ್ಷಣದಿಂದ ವಂಚಿತರಾಗದೆ ಉತ್ತಮವಾದ ರೀತಿಯಲ್ಲಿ ಓದಿನಲ್ಲಿ ಪಾಲ್ಗೊಂಡು ಉನ್ನತ ಶಿಕ್ಷಣ ಉನ್ನತವಾದ ಹುದ್ದೆಯನ್ನು ಅಲಂಕರಿಸಬೇಕೆಂದು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ ಬಂಟ್ರ ಕುಬೇರ್ ರವರು ಮಾತನಾಡಿದರು ಆಂಜಿನಪ್ಪ, ದುರುಗಪ್ಪ, ಶಿಗೇನಹಳ್ಳಿ ಬಸವರಾಜ್, ತಳವಾರ್ ಸೋಮನಾಥ, ನಾಗೇಶ್ ಟಿಕಾರಿ, ಗೂಳಿ ಕೊಟ್ರೇಶ್.. ಇತರರು ಇದ್ದರು..
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ