July 12, 2025

ಈಜುಕೊಳದಲ್ಲಿ ಮೃತಪಟ್ಟ ಬಾಲಕನ ಮನೆಗೆ ಜಿಲ್ಲಾಧಿಕಾರಿ ಭೇಟಿ: ಸಾಂತ್ವನ

ಜೂಡಿ ನ್ಯೂಸ್ :

ಈಜುಕೊಳದಲ್ಲಿ ಮೃತಪಟ್ಟ ಬಾಲಕನ ಮನೆಗೆ ಜಿಲ್ಲಾಧಿಕಾರಿ ಭೇಟಿ: ಸಾಂತ್ವನ

ಕೊಪ್ಪಳ ಏಪ್ರೀಲ್ 28 : ಕೊಪ್ಪಳ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಇತ್ತೀಚೆಗೆ ಮೃತಪಟ್ಟ ಬಾಲಕ ಇಂದ್ರೇಶ್ ಈಳಿಗೇರ ಮನೆಗೆ ಜಿಲ್ಲಾಧಿಕಾರಿ ನಲಿನ ಅತುಲ್ ಅವರು ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕೊಪ್ಪಳ ತಾಲ್ಲೂಕಿನ ಇಂದರಗಿ ಗ್ರಾಮದ ರಾಮಪ್ಪ ಈಳಿಗೇರ ಅವರ ಮಗನಾದ 17 ವರ್ಷದ ಇಂದ್ರೇಶ್ ಇತನು ತನ್ನ ಸ್ನೇಹಿತರೊಂದಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಈಜಾಡುವ ವೇಳೆ ಮುಳುಗಿ ಮೃತಪಟ್ಟಿರುತ್ತಾನೆ. 

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್, ಮೃತಪಟ್ಟ ಬಾಲಕನ ತಂದೆ ರಾಮಪ್ಪ ಈಳಿಗೇರ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಮತ್ತಿತರರಿದ್ದರು.