July 12, 2025

ಜಾತಿಗಣತಿಯಲ್ಲಿ ಲಂಬಾಣಿ ಜಾತಿ ಎಂದು ನಮೂದಿಸಿ : ಡಿ.ಲಾಲ್ಯಾನಾಯ್ಕ್ 

ಜೂಡಿ ನ್ಯೂಸ್ :

ಜಾತಿಗಣತಿಯಲ್ಲಿ ಲಂಬಾಣಿ ಜಾತಿ ಎಂದು ನಮೂದಿಸಿ : ಡಿ.ಲಾಲ್ಯಾನಾಯ್ಕ್ 

ಮರಿಯಮ್ಮನಹಳ್ಳಿ:ಪರಿಶಿಷ್ಟ ಜಾತಿಗಳಲ್ಲಿ ಉಪಜಾತಿಯ ಗಣತಿ ಕಾರ್ಯ ಸದ್ಯದಲ್ಲೇ ಪ್ರಾರಂಭವಾಗುತ್ತದೆ.ಅದಕ್ಕಾಗಿ ಎಲ್ಲಾ ಬಂಜಾರ ಬಂಧುಗಳು ತಪ್ಪದೇ ಕಡ್ಡಾಯವಾಗಿ,ಜಾತಿಗಣತಿಯಲ್ಲಿ ಲಂಬಾಣಿ ಜಾತಿ ಎಂದು ನಮೂದಿಸಲು,ಕರ್ನಾಟಕಪ್ರದೇಶ ಬಂಜಾರ(ಲಂಬಾಣಿ)ಸೇವಾಸಂಘದ ಜಿಲ್ಲಾಧ್ಯಕ್ಷ ಡಿ.ಲಾಲ್ಯಾನಾಯ್ಕ್ ಕರೆನೀಡಿದರು.ಅವರು ಪತ್ರಿಕಾಪ್ರಕಟಣೆ ನೀಡಿ, ತಾಂಡಗಳಲ್ಲಿ,ಊರಿನಲ್ಲಿ,ಪಟ್ಟಣ ಪ್ರದೇಶಗಳಲ್ಲಿ,ನಗರ ಪ್ರದೇಶ,ನಗರಸಭೆ ವ್ಯಾಪ್ತಿಯಲ್ಲಿ,ಮಹಾನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಂಜಾರ ಸಮಾಜದ ನೌಕರರು,ಅಧಿಕಾರಿಗಳು ಉಪಜಾತಿಯಲ್ಲಿ ಪರಿಶಿಷ್ಟ ಜಾತಿ ಎಂದು ಜಾತಿಯಲ್ಲಿ ಲಂಬಾಣಿ ಎಂದು ಗಣಕಿದಾರರ ಮುಂದೆ ಹಾಜರಿದ್ದು ಕಡ್ಡಾಯವಾಗಿ ಗಣತಿಯಲ್ಲಿ ಜಾತಿ ನಮೂದಿಸಲು .ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಇಟ್ಟುಕೊಳ್ಳಿ,ಯಾರೂ ಈ ಗಣತಿಯಿಂದ ವಂಚಿತರಾಗದೆ ಮಕ್ಕಳ ಭವಿಷ್ಯಕ್ಕಾಗಿ ನಾಯ್ಕ,ಕಾರ್‌ಬಾರಿ,ಡಾವ್, ಡಾವ್‌ಸಾಣ್, ಎಲ್ಲರೂ ತಾಂಡಗಳಲ್ಲಿ ಡಂಗೂರ ಸಾರಿಸಿ ಗಣತಿಯಲ್ಲಿ ಭಾಗವಹಿಸಿ ಬೇರೆ ಕಡೆಗೆ ವಲಸೆಹೋದವರು ಗಣತಿಯಲ್ಲಿ ಭಾಗವಹಿಸಬೇಕು. 

ಚುನಾಯಿತ ಪ್ರತಿನಿಧಿಗಳಾದ ಗ್ರಾಮ ಪಂಚಾಯಿತಿ ಸದಸ್ಯರು,ನಗರಸಭೆ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು, ಸಂಘಸಂಸ್ಥೆಗಳ ಮುಖಂಡರು,ರಾಜಕೀಯ ಮುಖಂಡರು ಎಲ್ಲರೂ ಹೆಚ್ಚಿನ ರೀತಿಯಲ್ಲಿ ಜಾಗೃತಿಮೂಡಿಸಿ, ಗಣತಿಯಿಂದ ನಮ್ಮ ಜನಾಂಗದವರು ಹೊರಗೆ ಉಳಿಯದಂತೆ ಎಚ್ಚರವಹಿಸಬೇಕಾಗುತ್ತದೆ.ಆದ್ದರಿಂದ ವಿಜಯನಗರ ಜಿಲ್ಲೆಯ ಎಲ್ಲಾ ತಾಂಡದ ದೈವಸ್ಥರು,ಸಂಘ ಸಂಸ್ಥೆಗಳ ಪದಾಧಿಕಾರಿಗಲಕು, ಎಲ್ಲಾ ಜನ ಪ್ರತಿನಿಧಿಗಳು ಈ ಕುರಿತು ಆಧ್ಯತೆ ಕೊಟ್ಟು ಈ ಗಣತಿಯಿಂದ ಯಾರೂ ದೂರ ಉಳಿಯದಂತೆ ಎಲ್ಲರೂ ಜಾಗೃತಿ ಮೂಡಿಸಬೇಕೆಂದು ಹಾಗೂ ಎಲ್ಲರೂ ಕೂಡ ತಮ್ಮ ತಮ್ಮ ಕೆಲಸಗಳನ್ನು ಬದಿಗೊತ್ತಿ, ಗಣತಿಯ ಸಮಯದಲ್ಲಿ ಹಾಜರಿದ್ದು, ಜಾತಿಯ ಕಾಲಂನಲ್ಲಿ ಲಂಬಾಣಿ ಎಂದು ನಮೂದಿಸಬೇಕೆಂದು ಈ ಪ್ರಕಟಣೆ ಮೂಲಕ ಮನವಿಮಾಡಿದರು.