ಜೂಡಿ ನ್ಯೂಸ್ :
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅವಾಂತರ
ಹದಿನಾಲ್ಕು ವರ್ಷಗಳ ಹಳೆಯ ಪ್ರಕರಣವನ್ನು ಕೆದಕಿ ಕೈ ಸುಟ್ಟುಕೊಂಡ ನಿರ್ದೇಶಕರು….
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಯಾವುದೇ ನಿಯಮಗಳಿಲ್ಲ ಮಾರ್ಗಸೂಚಿಗಳಿಲ್ಲ, ಮಾರ್ಗಸೂಚಿಗಳನ್ನು ಪಾಲಿಸುವವರೇ ಇಲ್ಲ ಎನ್ನುವಂತಾಗಿದೆ… ಇಲಾಖೆಯ ಪರಿಸ್ಥಿತಿ. ಕಲಾವಿದರಿಗೆ ಕಾರ್ಯಕ್ರಮ ಮಾಡಿದ ಪ್ರಾಯೋಜನೆ ಹಣವಿಲ್ಲ, ಸಂಘ ಸಂಸ್ಥೆಗಳಿಗೆ ದನಸಹಾಯವಿಲ್ಲ, ಮಾಶಾಸನ ಪಡೆಯುತ್ತಿರುವ ಹಿರಿಯ ಕಲಾವಿದರು ಜಿಲ್ಲೆಯ ಸ ನಿರ್ದೇಶಕರಿಗೆ ಜೀ ಹುಜುರು ಎನ್ನ ಬೇಕಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಯಾವುದೂ ನಿಯಮಗಳ ಅಡಿ ನಡೆದ ಉದಾಹರಣೆಗಳಿಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಕಲಬರಗಿಯ ಟೈಪಿಸ್ಟ್ ಆಗಿದ್ದಂತಹ ಶ್ರೀಮತಿ ಚನ್ನಮ್ಮನವರ ಪ್ರಕರಣ. ಹದಿನಾಲ್ಕು ವರ್ಷಗಳ ಹಿಂದೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ
ಕೆಲ ಅಧಿಕಾರಿಗಳ ಕುತಂತ್ರಗಳಿಂದಾಗಿ ಶ್ರೀಮತಿ ಚನ್ನಮ ಅವರ ಮೇಲೆ ಪ್ರಕರಣ ದಾಖಲಿಸಿದ್ದರು.
ಆ ಕುರಿತು ಜಂಟಿ ನಿರ್ದೇಶಕರು ತನಿಖೆ ಮಾಡಿ ಈ ಪ್ರಕರಣದಲ್ಲಿ ಚನ್ನಮ್ಮನವರ ಪಾತ್ರವಿಲ್ಲ ಈ ಪ್ರಕರಣದಿಂದ ಅವರನ್ನ ಕೈ ಬಿಡಲಾಗಿದೆ ಎಂದು ವರದಿಯನ್ನು ನೀಡಿದ್ದರು. ಅದರ ಕರಡನ್ನು
ಪುರಸ್ಕರಿಸಿ ಇಲಾಖೆ ನಿರ್ದೇಶಕರು
ಅನುಮೋದಿಸಿ ಆದೇಶಿಸಿದ್ದರು.
ಆ ಪ್ರಕರಣದಲ್ಲಿ
ಆರ್. ಚಂದ್ರಶೇಖರ್, ಕೊಟ್ರೇಶ್ ಮರಬನಹಳ್ಳಿ ಮತ್ತು ಇತರರನ್ನು ಸಹ ಈ ಪ್ರಕರಣದಲ್ಲಿ ಇಲಾಖೆ ವಿಚಾರಣೆಗಾಗಿ ಆದೇಶಿಸಿದ್ದರು.
ಅದು ಕಸದ ಬುಟ್ಟಿ ಸೇರಿದೆ. ಈಗ ಚಂದ್ರಶೇಖರ್ ಮತ್ತು ಕೊಟ್ರೇಶ್ ಮೊರಬನಹಳ್ಳಿ ಇವರುಗಳು ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹದಿನಾಲ್ಕು ವರ್ಷಗಳ ಹಿಂದಿನ ಈ ಪ್ರಕರಣಕ್ಕೆ ಕಲಬುರಗಿ ವಲಯದ ಜಂಟಿ ನಿರ್ದೇಶಕರಾದ
ಬಸವರಾಜ್ ಹೂಗಾರ್ ರವರು ಕೇಂದ್ರ ಕಛೇರಿಯ ಆಡಳಿತ ಜಂಟಿ ನಿರ್ದೇಶಕರ ಒತ್ತಡದಿಂದ ಸರಿಯಾಗಿ ಪರಿಶೀಲಿಸದೆ ಹಿಂದಿನ ಜಂಟಿ ನಿರ್ದೇಶಕರ ಕೆ. ಚೆನ್ನೂರ್ ವರದಿಗಳನ್ನು ಪರಿಶೀಲಿಸದೆ ಪೂರ್ವಾಗ್ರಹ ಪೀಡಿತರಾಗಿ ಜಂಟಿ ನಿರ್ದೇಶಕರು ಆಡಳಿತ ಅವರ ಅಣತಿಯಂತೆ ವರದಿಯನ್ನು ತಯಾರಿಸಿ ಕೇಂದ್ರ ಕಛೇರಿಗೆ ಕಳುಹಿಸಿ
ಕೈ ತೊಳೆದುಕೊಂಡಿದ್ದರು. ಈ ಮಧ್ಯ ವಿಧಾನ ಪರಿಷತ್ತಿನ ಬರವಸೆಗಳ ಸಮಿತಿ ಮೀಟಿಂಗ್ ಬಂದಾಗ ಅನೌಪಚಾರಿಕವಾಗಿ ಮುಡಬಿ ಪ್ರಕರಣ ಎಲ್ಲಿಗೆ ಬಂತು ಎಂದು ನಿರ್ದೇಶಕರನ್ನು ವಿಚಾರಿಸಿ ಮೌಖಿಕವಾಗಿ ಇಲಾಖೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೋಳ್ಳವಂತೆ ಬರವಸೆಗಳ ಸಮಿತಿಯ ಅಧ್ಯಕ್ಷರು
ಶ್ರೀ ಶರವಣರವರು ಮೌಖಿಕವಾಗಿ ತಿಳಿಸಿದ ಹಿನ್ನೆಲೆಯಲ್ಲಿ ನಿರ್ದೇಶಕರಾದ ಶ್ರೀಮತಿ ಕೆ.ಎಂ. ಗಾಯಿತ್ರಿಯವರು ಕಲಬುರಗಿ ವಲಯದ ಜಂಟಿ ನಿರ್ದೇಶಕರ ವರದಿ ಆದರಿಸಿ ಕಲಬುರಗಿಯ ಟೈಪಿಸ್ಟ್ ಶ್ರೀಮತಿ ಚನ್ನಮ್ಮನವರನ್ನು ಅಮಾನತ್ತು ಮಾಡಿ ಆದೇಶಿಸಿರುತ್ತಾರೆ.
ಈ ಪ್ರಕರಣ ಈಗಾಗಲೆ ಕೋರ್ಟಿನಲ್ಲಿ ನಡೆಯುತ್ತಿದ್ದರೂ (ಹಿಂದಿನ ಜಂಟಿ ನಿದೇರ್ಶಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು) ಇದನ್ನು ಬರವಸೆ ಕಮಿಟಿಯ ಅಧ್ಯಕ್ಷರ ಗಮನಕ್ಕೆ ತರದೆ ಏಕಾಏಕಿ ಕ್ರಮ ಕೈಗೊಂಡಿರುವುದನ್ನು ಪ್ರಶ್ನಿಸಿ ಶ್ರೀಮತಿ ಚನ್ನಮ್ಮನವರು ಕೆಎಟಿಗೆ ಮೊರೆ ಹೋದಾಗ ಕೆಎಟಿ ಈ ಪ್ರಕರಣಕ್ಕೆ ತಡೆ ನೀಡಿ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲು ಸೂಚಿಸಿದೆ.
ಅಮಾನತ್ತಿಗೆ ಶಿಫಾರಸ್ಸು ವರದಿ ನೀಡಿದ ಜಂಟಿ ನಿರ್ದೇಶಕರು
ಅನೇಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೆಳಗಾವಿ ವಲಯದ ಜಂಟಿ ನಿರ್ದೇಶಕರಾಗಿದ್ದಾಗ ದನ ಸಹಾಯ ನೀಡುವಲ್ಲಿ ಅಧಿಕಾರ ದುರುಪಯೋಗ ಮಾಡಿ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸದೆ ಸಿಕ್ಕಿ ಹಾಕಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಈಗ ಅವರ ವರದಿಯನ್ನು ಆದರಿಸಿ ನಿರ್ದೇಶಕರು ಹದಿನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ಕೈ ಇಟ್ಟು ಕೈ ಸುಟ್ಟುಕೊಂಡರು..
ಮೊದಲಿನಿಂದಲೂ ಇಲಾಖೆಯ ನಿಯಮಗಳ ಉಲ್ಲಂಘನೆ ಕುರಿತು ಕಲಾವಿದರ ಪರವಾಗಿ ಧ್ವನಿ ಎತ್ತುತ್ತಿದ್ದ ಹೋರಾಟಗಾರ ಶ್ರೀ ಪಟ್ಲು ಗೋವಿಂದರಾಜುರವರು ಈ ವಿಚಾರವಾಗಿ ನಿರ್ದೇಶಕರನ್ನು ಭೇಟಿಯಾದಾಗ ಇದು ಆಡಳಿತಾತ್ಮಕ ವಿಚಾರ ನೀವು ಇದರಲ್ಲಿ ಭಾಗಿಯಾಗಬಾರದು ಎಂಬ ಸಬೂಬು ಹೇಳಿ ನಿರ್ಧೇಶಕರು ಜಾರಿಕೊಂಡರಂತೆ. ನಿರ್ಧೇಶಕರು ಅಲ್ಲಿ ಕುಳಿತಿರುವುದೇ ಆಡಳಿತ ನಡೆಸಲು ಸರಿಯಾಗಿ ಆಡಳಿತ ನಡೆಸಿದ್ದರೆ ಇದನ್ನು ಯಾರು ಪ್ರಶ್ನಿಸುತ್ತಿದ್ದರು. ಸಂಜೆ 3.30 ರಿಂದ 4.30ರವರೆಗೂ ಸಾರ್ವಜನಿಕರ ಭೇಟಿ ಮೀಸಲಿಡಿ ಎಂದು ಸರ್ಕಾರ ಮತ್ತು ಸರ್ಕಾರದ ಕಾರ್ಯದರ್ಶಿಗಳು ಆದೇಶಿಸಿದ್ದರೂ ಆದೇಶಕ್ಕೆ ಸೊಪ್ಪು ಹಾಕದೆ ಜಂಟಿ ನಿರ್ದೇಶಕರುಗಳ ಜೊತೆ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿರುವುದು, ಭೇಟಿಗೆ ಬಂದ ಸಾರ್ವಜನಿಕರು ಹಾಗೂ ಕಲಾವಿದರಿಗೆ ಅನಾನುಕೂಲವಾಗುವಂತೆ ಮಾಡುತ್ತಿರುವುದು ಸರಿಯಾದ ಆಡಳಿತದ ಪರಿಯೇ ಎಂಬುದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ ಎಂದು ನಿರ್ದೇಶಕರ ಹಿಟ್ಲರ್ ವರ್ತನೆಯನ್ನು ಖಂಡಿಸಿದರು.
ಬಾಗಲಕೋಟೆ, ಕೊಪ್ಪಳ, ರಾಮನಗರ, ಚಿತ್ರದುರ್ಗಗಳಿಂದ ಬಂದಂತಹ ಕಲಾವಿದರು ಮಧ್ಯಾಹ್ನ 3.30ಕ್ಕೆ ನಿರ್ದೇಶಕರ ಭೇಟಿಗಾಗಿ ಕಾದು ಕುಳಿತಾಗಲು ನಿರ್ದೇಶಕರ ಅನುಮತಿ ದೊರೆಯದೆ ಪಿ ಎ ಗಳನ್ನು ನೋಡಿ ಸಮಸ್ಯೆಗಳನ್ನು ಹೇಳದೆ ವಾಪಸ್ಸ್ ಹೋಗುವಂತಹ ಪರಿಸ್ಥಿತಿ ಕಲಾವಿದರಿಗೆ ಒದಗಿದ್ದು ಖಂಡನೀಯ. ಈ ನಿರ್ದೇಶಕರು ಬಂದ ಮೇಲೆ ಪಿ ಎ ಗಳಿಗೆ ಎಲ್ಲವನ್ನು ತಿಳಿಸಿ ಅವರ ಸರಿ ಎಂದರೆ ನಿರ್ದೇಶಕರನ್ನು ನೋಡುವ ಅವಕಾಶವನ್ನು ದೊರಕಿಸಿಕೊಡುತ್ತಾರಂತೆ. ನೇರವಾಗಿ ನಿರ್ದೇಶಕರನ್ನು ನೋಡುವ ಕರ್ಮ ಕಲಾವಿದರಿಗೆ ಇಲ್ಲವಂತೆ. ಈ ನಿರ್ದೇಶಕರು ಬಂದ ಮೇಲೆ ಸಾರ್ವಜನಿಕರ ಭೇಟಿ ಮತ್ತು ಅದರ ವ್ಯವಸ್ಥೆ ಸಂಪೂರ್ಣ ಬದಲಾಗಿದ್ದು, ಸಾರ್ವಜನಿಕರಿಗೆ ಸರಿಯಾದ ಕುಳಿತುಕೊಳ್ಳುವ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಯವಾಗಿದೆ. ಅಷ್ಟಕ್ಕೂ ಮಿಗಿಲಾಗಿ ಒಳಗಡೆ ಹೋಗಿ ನಿರ್ದೇಶಕರಿಗೆ ವಿನಂತಿಸಿದರೆ ನಾನು ಈವಾಗ ಬಂದಿದ್ದೇನೆ, ನೋಡುತ್ತೇನೆ, ಮಾಡುತ್ತೇನೆ ಎಂಬ ಹಾರಿಕೆ ಉತ್ತರಗಳನ್ನು ಹೇಳಿ ಕಳುಹಿಸುತ್ತಿದ್ದಾರೆ. ಇದು ನೋವಿನ ಸಂಗತಿ.
ಒಂದು ವಾರದ ಒಳಗಡೆ ನಿರ್ದೇಶಕರ ಒಳಕೋಟಡಿ ಮತ್ತು ಶೌಚಾಲಯಕ್ಕೆ 15 ಲಕ್ಷ ಖರ್ಚು ಮಾಡಿಸಲು ಸಿದ್ದರಾಗಿ ಆದೇಶ ಮಾಡಿರುವುದು ದುರಂತವೇ ಸರಿ.
ಕಲಾವಿದರ ಪ್ರಾಯೋಜಿತ ಹಣ ಬಂದಿಲ್ಲವೆಂದು ಕಲಾವಿದ ಬೊಬ್ಬೆ ಹಾಕುತ್ತಿರುವುದು ನಿರ್ದೇಶಕರಿಗೆ ಆಗಲಿ ಸಚಿವರಿಗಾಗಲಿ ಕೇಳುತ್ತಿಲ್ಲವೇ
ಎಂದು ರಾಮನಗರದ ಕಲಾ ಸಂಘಟಕ ಎಸ್. ಜಯಸಿಂಹ ತಿಳಿಸಿದರು.
More Stories
ಗ್ರಾಮ ಪಂಚಾಯತಿ ಸದಸ್ಯನ ಸಂಭಾವನೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ…
ಮಠ-ಮಂದಿರಗಳಿಗೆ ಮಂಜೂರಾದ ಅನುದಾನ ಬಿಡುಗಡೆಗೆ 25% ಕಮೀಷನ್: ಜಿ. ಜನಾರ್ಧನ ರೆಡ್ಡಿ ಗಂಭೀರ ಆರೋಪ
ಹಂಪಾಪಟ್ಟಣದಲ್ಲಿ ಮೊಹರಂ ವಿಶೇಷ ಆಚರಣೆ