July 12, 2025

ಸಂಸದರಿಂದ ಮೊಬೈಲ್ ಫಿಶ್ ಕ್ಯಾಂಟೀನ್ ವಿತರಣೆಸಂಸದರಿಂದ ಮೊಬೈಲ್ ಫಿಶ್ ಕ್ಯಾಂಟೀನ್ ವಿತರಣೆ

ಜೂಡಿ ನ್ಯೂಸ್ :

ಸಂಸದರಿಂದ ಮೊಬೈಲ್ ಫಿಶ್ ಕ್ಯಾಂಟೀನ್ ವಿತರಣೆಸಂಸದರಿಂದ ಮೊಬೈಲ್ ಫಿಶ್ ಕ್ಯಾಂಟೀನ್ ವಿತರಣೆ

ಕೊಪ್ಪಳ ಜೂನ್ 06 : ಪ್ರಧಾನಮಂತ್ರಿ ಮತ್ಸö್ಯ ಸಂಪದ ಯೋಜನೆಯಡಿ ಮಂಜೂರಾಗಿರುವ ಮತ್ಸö್ಯ ವಾಹಿನಿ ಮೊಬೈಲ್ ಫಿಶ್ ಕ್ಯಾಂಟೀನ್‌ಗಳನ್ನು ಶುಕ್ರವಾರದಂದು ಕೊಪ್ಪಳ ಲೋಕಸಭಾ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ್ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಾನುಭವಿಗಳಿಗೆ ವಿತರಿಸಿದರು.

ನಂತರ ಮಾತನಾಡಿದ ಸಂಸದರು ಸ್ವ ಉದ್ಯೋಗ ಹಾಗೂ ಸ್ವಾವಲಂಬನೆಗೆ ಮೀನುಗಾರಿಕೆ ಇಲಾಖೆಯಿಂದ ನೀಡಿರುವ ವಾಹನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಿ ಎಂದು ಫಲಾನುಭವಿಗಳಿಗೆ ತಿಳಿಸಿದರು.

ಮೀನುಗಾರಿಕೆ ಉಪನಿರ್ದೇಶಕರಾದ ಶ್ರೀನಿವಾಸ ಕುಲಕರ್ಣಿ ಅವರು ಮಾತನಾಡಿ, ಈ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ 3 ಮೊಬೈಲ್ ಫಿಶ್ ಕ್ಯಾಂಟೀನ್‌ಗಳನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿ ಫಲಾನುಭವಿಯು ರೂ.50,000/- ಗಳ ಠೇವಣಿ ಮಾಡಿ ನಂತರದಲ್ಲಿ ಪ್ರತಿ ತಿಂಗಳು ರೂ.3000/- ರಂತೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಬಾಡಿಗೆ ಭರಿಸಬೇಕು ಎಂದು ಯೋಜನೆಯ ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜು ಟಿ., ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಪಿ.ಎಂ.ಮಲ್ಲಯ್ಯ, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಆನಂದ ಪಾಟೀಲ, ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷರಾದ ಏಕನಾಥ, ಉಪಾಧ್ಯಕ್ಷರಾದ ಸಯ್ಯದ್ ಮಹೆಬೂಬ್, ಎಫ್‌ಎಫ್‌ಪಿಒ ಅಧ್ಯಕ್ಷರಾದ ಮಂಜುನಾಥ ಕಲಾಲ್, ಫಲಾನುಭವಿಗಳು ಹಾಜರಿದ್ದರು.