July 12, 2025

ಕೆ ಎಸ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ 

ಜೂಡಿ ನ್ಯೂಸ್ :

 ಕೆ ಎಸ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ 

ನಗರದ ಕೆಎಸ್ ಆಸ್ಪತ್ರೆಯಲ್ಲಿ ದಿನಾಂಕ 01 ಜುಲೈ 2025 ಮಂಗಳವಾರದಂದು *ರಾಷ್ಟ್ರೀಯ ವೈದ್ಯರ ದಿನಾಚರಣೆ* ಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೆ ಎಸ್ ಆಸ್ಪತ್ರೆಯವತಿಯಿಂದ ಜನರಿಗೆ ಅನುಕೂಲವಾಗುವಂತಹ *ಹೋಂ ಕೇರ್ ಸರ್ವಿಸ್ ಸೇವೆಯನ್ನು* ಅತಿಥಿಗಳಾಗಿ ಆಗಮಿಸಿದ ಡಾ. ಧಾನರೆಡ್ಡಿ, ಡಾ. ಕೆ ಜಿ ಕುಲಕರ್ಣಿ, ಡಾ. ಪ್ರವೀಣ್, ಹಾಗೂ ಕೆ ಎಸ್ ಆಸ್ಪತ್ರೆ ಮುಖ್ಯಸ್ಥರಾದ ಡಾ. ಬಸವರಾಜ್ ಎಸ್ ಕ್ಯಾವಟರ್ ರವರು ಉದ್ಘಾಟಿಸಿದ್ದರು.

 ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕೆ.ಜಿ ಕುಲಕರ್ಣಿ ಅವರು ತಮ್ಮ ವೈದ್ಯ ವೃತ್ತಿಯಲ್ಲಿ ನಡೆದಂತಹ ಕೆಲವೊಂದು ಘಟನೆಗಳನ್ನು ನೆನಪಿಸಿದರು.ನಂತರ ಡಾ ದಾನರಡ್ಡಿ ಮಾತನಾಡಿ ವೃತ್ತಿಯಲ್ಲಿ ಇರಬೇಕಾದ ಕೆಲವು ಸಲಹೆಗಳನ್ನು ವೈದ್ಯರಿಗೆ ನೀಡಿದರು,

ಸಮಯ ಪಾಲನೆ, ಸಂಯಮ, ಮಾನವೀಯತೆ ಗುಣಗಳನ್ನು ಅವಳವಡಿಸಿಕೊಳ್ಳಬೇಕು ಎಂದರು ಜೊತೆಗೆ ವೈದ್ಯರು ರೋಗಿಗಳ ಆರೋಗ್ಯದ ಜೊತೆ ನಿಮ್ಮ ಕುಟುಂಬ ಬಗ್ಗೆ ಗಮನ ಹರಿಸಬೇಕು ಎಂದರು. ನಂತರ ಎಲ್ಲಾ ವೈದ್ಯರಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

 ಕಾರ್ಯಕ್ರಮದಲ್ಲಿ ಕೆ ಎಸ್ ಆಸ್ಪತ್ರೆಯ ನ್ಯೂರೊ ಫಿಜಿಷಿಯನ್  ಡಾ. ಕೃಷ್ಣಮೂರ್ತಿ  ಮತ್ತು ಇತರ ಎಲ್ಲಾ ವೈದ್ಯರುಗಳು ಹಾಗೂ ಕೆ ಎಸ್ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.