July 12, 2025

ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿಗೆ ಹಂಪಾಪಟ್ಟಣದ ಯುವ ಜಾನಪದ ಕಲಾವಿದ ನಾಗರಾಜ್ ಗಂಟಿ ಆಯ್ಕೆ

ಜೂಡಿ ನ್ಯೂಸ್ :

ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿಗೆ ಹಂಪಾಪಟ್ಟಣದ ಯುವ ಜಾನಪದ ಕಲಾವಿದ ನಾಗರಾಜ್ ಗಂಟಿ ಆಯ್ಕೆ

ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವ ಸಮಾರಂಭ ಹಾಗೂ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನದದಲ್ಲಿ ರಾಜ್ಯ ಜಾನಪದ ಯುವ ಸಿರಿ. ಪ್ರಶಸ್ತಿಗೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮಹಳ್ಳಿ ತಾಲೂಕು ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣ ಗ್ರಾಮದ ನಾಗರಾಜ್ ಗಂಟಿ ಆಯ್ಕೆಯಾಗಿದ್ದಾರೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ: 25-06-2025. ಬುಧವಾರ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್ ಬಾಲಾಜಿ ಸರ್ ತಿಳಿಸಿದರು. 

ತಾಲೂಕಿನ ಜಾನಪದ ತವರು ಎಂದೇ ಖ್ಯಾತಿ ಪಡೆದ ಹಂಪಾಪಟ್ಟಣ ಗ್ರಾಮದ ಸಿದ್ದರ ಸಣ್ಣ ಮಂಜುನಾಥ ಗಂಟಿ, ಶಿವಗಂಗಮ್ಮ ಗಂಟಿ ಇವರ ದ್ವಿತೀಯ ಸುಪುತ್ರ ನಾಗರಾಜ್ ಗಂಟಿಯವರು, ಜಿಲ್ಲೆಯ ನಿರೂಪಕರಾಗಿ, ಯುವ ಜಾನಪದ ಕಲಾವಿದರಾಗಿ ಖ್ಯಾತಿಗಳಿಸಿದ್ದಾರೆ, ಹಾಗೆಯೇ ತಮ್ಮ ಸಮುದಾಯದ ಬುದ್ಧ ಮತ್ತು ಬಸವ ಶರಣ ಪರಂಪರೆಯ ವೈಚಾರಿಕ ಸಹಿತ ಮನರಂಜನೆ ಬೆರೆತ.. ಜಾನಪದ ಸುಡುಗಾಡು ಸಿದ್ದ ಕೈಚಳಕ ಯುವ ಜಾನಪದ ಕಲಾವಿದರಾಗಿ ಕಿರಿಯ ವಯಸ್ಸಿನಲ್ಲಿ 2024 ನೇ ಸಾಲಿನ ವಿಶ್ವ ವಿಖ್ಯಾತಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಕೈಚಳಕ ಕಾರ್ಯಕ್ರಮವು ಸಹ ನೀಡಿದ್ದಾರೆ

ಇವರ ಜಾನಪದ ಪ್ರತಿಭೆ ಪ್ರಾರಂಭವಾಗಿದ್ದು ಗ್ರಾಮದ ಚಂದ್ರಮೌಳೇಶ್ವರ ಪ್ರೌಢಶಾಲೆಯ ಎಂಟನೇ ತರಗತಿಯ ಪ್ರೌಢಶಾಲಾ ಪ್ರತಿಭಾ ಕಾರಂಜಿಯ ಚದ್ಮಾವೇಶದಲ್ಲಿ ಸುಡುಗಾಡು ಸಿದ್ದ ಜಾನಪದ ವೇಷವನ್ನು ಧರಿಸುವ ಮೂಲಕ ಜಾನಪದ ಕಲೆಗೆ ಪಾದರ್ಪಣೆ ಮಾಡಿದರು..

ನಂತರ ಪ್ರತಿಭಾ ಕಾರಂಜಿಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರು, ನಂತರ 9ಮತ್ತು 10ನೇ ತರಗತಿಯ ವಿವಿಧ ಸಾಂಸ್ಕೃತಿಗೆ ಕಾರ್ಯಕ್ರಮದಲ್ಲಿ ಒಬ್ಬಂಟಿಯಾಗಿ ಸುಡುಗಾಡು ಸಿದ್ಧ ಕಲಾವಿದರಾಗಿ ಭಾಗವಹಿಸಿ, ಗ್ರಾಮದ ಪ್ರೌಢಶಾಲೆಯ 2018ನೇ ಸಾಲಿನ ಎಸ್ ಎಲ್ ಸಿ ಫಲಿತಾಂಶದಲ್ಲಿ ಪ್ರೌಢಶಾಲೆಗೆ ಪ್ರಥಮ ಸ್ಥಾನವನ್ನು ಪಡೆದು,ನಂತರ ಹಗರಿಬೊಮ್ಮನಹಳ್ಳಿಯ ಗಂಗಾವತಿ ಭೀಮಪ್ಪನವರ ಪದವಿ ಪೂರ್ವ ಕಾಲೇಜಿನಲ್ಲಿಯೂ ಸಹ ಕಲಾ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ ಆಯ್ಕೆಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು, ಈ ವೇಳೆಯಲ್ಲಿ ಎನ್ಎಸ್ಎಸ್ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ್ದಾರೆ, ನಂತರ ಹೊಸಪೇಟೆಯ ಶಂಕರ್ ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಓದುತ್ತಿರುವಾಗ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನ NSS ಪದವಿ ವಿದ್ಯಾರ್ಥಿಗಳ ಆಯ್ಕೆ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾಪ್ರದರ್ಶನ ನೀಡಿದ್ದಾರೆ, ನಂತರ ಪದವಿಯ ಹಂತದಲ್ಲಿ ನ್ಯಾಕ್ ಕಮಿಟಿಯ ಮುಂದೆ ತಮ್ಮ ಜಾನಪದ ಕಲಾತಂಡದೊಂದಿಗೆ ಸುಡುಗಾಡು ಸಿದ್ದ ಜಾನಪದ ಕೈಚಳಕ ಪ್ರದರ್ಶನ ನೀಡಿ, ಮದ್ರಾಸ್ ತಮಿಳುನಾಡಿನ ಪ್ರೊಫೆಸರ್ ರಿಂದ ಮೆಚ್ಚುಗೆಯನ್ನು ಗಳಿಸಿಕೊಂಡುರು,

ನಂತರ ಗ್ರಾಮದ ಪೂಜಾರ್ ಮಾಯಪ್ಪ, ಅಯ್ಯಪ್ಪ, ಮತ್ತು ಜಾನಪದ ಹಿರಿಯ ಕಲಾವಿದ ಕಿಂಡ್ರಿ ಲಕ್ಷ್ಮಿಪತಿ ಅವರ ಜೊತೆಗೂಡಿ ಜಿಲ್ಲೆಯಲ್ಲಿ ವಸತಿ ಶಾಲೆಯಲ್ಲಿ ಜಾನಪದ ಕೈಚಳಕದ ಮೂಲಕ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಭಯ ನಿವಾರಣೆ, ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಪ್ರಮುಖ ಕಾರಣರಾಗಿದ್ದಾರೆ, ನಂತರ ಹೊಸಪೇಟೆಯಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಾಂಸ್ಕೃತಿಕ, ಕಾರ್ಯಕ್ರಮದಲ್ಲಿ ನಿರೂಪಕರಾಗಿ, 2023 ನೇ ಸಾಲಿನಲ್ಲಿ ಹಂಪಿ ಉತ್ಸವದ ನಿರೂಪಕರಾಗಿ ಆಯ್ಕೆಯಾದರು, ನಂತರ ಹಿರಿಯ ಜಾನಪದ ಕಲಾವಿದರ ಜೊತೆ ಸೇರಿ ಹಂಪಿ ಉತ್ಸವದಲ್ಲಿಯೂ ಸಹ ಭಾಗಿಯಾದರು, ಮೈಸೂರು ದಸರಾ ಉತ್ಸವ, ಕೂಡ್ಲಿಗಿ ತಾಲೂಕಿನ ಗುಡಿಕೋಟೆ ಉತ್ಸವ, ವಿಜಯನಗರ ಜಿಲ್ಲಾ ಯುವಜನೋತ್ಸವ, ತಮಿಳುನಾಡಿನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ, ದ್ರಾವಿಡ ಬಳಗದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದಾರೆ,ಹಾಗೆ ಸರ್ಕಾರದ, ವಿವಿಧ ಮೆರವಣಿಗೆಗಳು, ಸಂವಿಧಾನ ಜಾತ ಕಾರ್ಯಕ್ರಮ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ಕಾರ್ಯಕ್ರಮದಲ್ಲಿ, ವಿವಿಧ ಎನ್ಎಸ್ಎಸ್ ಶಿಬಿರದಲ್ಲಿ, ವಿವಿಧ ತಾಲೂಕಿನ ಸಾಂಸ್ಕೃತಿಯ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾಗಿ, ನಿರೂಪಕಗರಾಗಿ, ಭಾಗವಹಿಸಿ ಪ್ರಸ್ತುತ ಹೊಸಪೇಟೆಯ SBBN ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿದ್ದು, ಗಮಕ ಸಾಹಿತ್ಯ ಪರಿಷತ್ತಿನ ಕವಿ ಕಾವ್ಯ ಪರಿಚಯ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಭಾಷಣ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ, ಹೀಗೆ ಓದಿನ ಬಿಡುವಿನ ವೇಳೆಯಲ್ಲಿ, ತಮ್ಮ ಸಮುದಾಯದ ನಾಟಿ ವಿದ್ಯಾ, ಜಾನಪದ ವೈಚಾರಿಕ ಸುಡುಗಾಡು ಸಿದ್ದ ಕಲೆಯ ಮೂಲಕ ಜನರಿಗೆ ಬುದ್ಧ ಬಸವ ಶಿವಶರಣರ ತತ್ವ ವಿಚಾರವನ್ನು, ಮಾನವೀಯ ಮೌಲ್ಯವನ್ನು ತಿಳಿಸುವುದು, ಸುಡುಗಾಡಿನ ಬಗ್ಗೆ ಇರತಕ್ಕಂತ ಅಜ್ಞಾನವನ್ನು ಹೋಗಲಾಡಿಸಿ, ಜನರಲ್ಲಿ ಕಾಯಕ ಪ್ರಜ್ಞೆ, ದೈವ ಪ್ರಜ್ಞೆ, ಪರಸ್ಪರ ಸಹೋದರತೆ ಸಹಕಾರ ಗುಣ ಬೆಳೆಸುವಲ್ಲಿ, ಪ್ರಮುಖ ಪಾತ್ರ ವಹಿಸುತ್ತಾ, ಹಾಗೆ ರಾಜ್ಯ,ಜಿಲ್ಲಾ ತಾಲೂಕು, ಗ್ರಾಮ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ನುಡಿಯಂತೆ, ಓದುವ ವಯಸ್ಸಿನಲ್ಲಿಯೇ ಜಾನಪದ ಕಲೆಯ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದಾರೆ, ನಮ್ಮ ಗ್ರಾಮದ ಯುವಕರಾದ ನಾಗರಾಜ್ ಗಂಟಿಯವರಿಗೆ ರಾಜ್ಯಮಟ್ಟದ ಜಾನಪದ ಯುವ ಸಿರಿ ಪ್ರಶಸ್ತಿ ಬಂದಿದ್ದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು, ಕಣ್ಮರೆ ಯಾಗುತ್ತಿರುವ ಸುಡುಗಾಡು ಸಿದ್ದ ಜಾನಪದ ಕಲಿಯನ್ನು ಉಳಿಸಲು ಬೆಳೆಸಲು ಕಂಕಣಭದ್ಧರಾಗಿರುವ ಗಂಟೆಯವರಿಗೆ ತುಂಬು ಹೃದಯದ ಅಭಿನಂದನೆಗಳು . ಶ್ರೀ ಬುಡ್ಡಿ ಬಸವರಾಜ್. ಕನ್ನಡ ಜಾಗೃತ ವೇದಿಕೆಯ ರಾಜ್ಯ ಉಪಾಧ್ಯಕ್ಷ . ಬಲ್ಲಾಹುಣಿಸಿ ನಾಗರಾಜ ನಿಕಟ ಪೂರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೇಶವಮೂರ್ತಿ , ಮಂಜಪ್ಪ ಗಂಟಿ ಶಿಕ್ಷಕರು, ಹನುಮಂತಪ್ಪ ಘಂಟಿ, ಎಸ್ ಗಾಳಪ್ಪ ಎಸ್ ನಾಗೇಂದ್ರ, ಜಿ ಶ್ರೀನಿವಾಸ್ ಶ್ರೀ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷರು.. ವಿ ಹನುಮಂತ ನವೋದಯ ಯುವಕ ಅಧ್ಯಕ್ಷರು. ಹಡಗಲಿ ಖಾಜಾ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಅಧ್ಯಕ್ಷರು. ಬಿಕುಬೇರ . ಟೀ ಮಹೇಂದ್ರಗ್ರಾಮದ ಎಲ್ಲಾ ನಾಗರಿಕ ಬಂಧುಗಳು, ಹಾಗೂ ಹಿತೈಷಿಗಳು ಮತ್ತು SBBN B.ed,ಹಾಗೂ ಬಿಎಡ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಾದಾಮಿ ಕರಿ ಬಸವರಾಜ್ ಸರ್, ಪ್ರಾಂಶುಪಾಲರಾದ ಡಾ ಶಿವನಗೌಡ ಸಾತ್ಮರ್, ಹಾಗೆ ಎಲ್ಲಾ ಆಧ್ಯಾಪಕ ಬಳಗದವರು ಅಭಿನಂದನೆ ತಿಳಿಸಿ, ಹೀಗೆ ಓದು ಅಧ್ಯಯನ ಜಾನಪದ ಸೇವೆ ಮುಂದುವರಿದು, ಇನ್ನು ಹೆಚ್ಚಿನ ಅತ್ಯುತ್ತಮ ಮಟ್ಟದ ಸಾಧನೆ ಮಾಡಲಿ ಎಂದು. ಹಾರೈಸಿದ್ದಾರೆ..

ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್ ಗಂಟಿಯವರು ಎಲ್ಲದಕ್ಕೂ ತಾಯಿಬೇರು ಜಾನಪದ ಸಾಹಿತ್ಯ,ಎಲ್ಲದಕ್ಕೂ ಜಾನಪದವೇ ಮೂಲ, ಆದ್ದರಿಂದ ಜಾನಪದ ಕಲೆಯನ್ನು ಉಳಿಸುವಲ್ಲಿ ಬೆಳೆಸುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ತರವಾದದ್ದು, ಇಂತಹ ಸಂದರ್ಭದಲ್ಲಿ ನಮ್ಮ ಅಳಿಲು ಸೇವೆಯನ್ನು ಗುರುತಿಸಿ ಜಾನಪದ ಯುವ ಸೇರಿ ಪ್ರಶಸ್ತಿ ನೀಡಲು ಆಯ್ಕೆ ಮಾಡಿದ ಡಾ‌ ಜಾನಪದ ಬಾಲಾಜಿ ಸರ್ ಅವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತಾ, ಈ ಪ್ರಶಸ್ತಿಯನ್ನು ನಮ್ಮ ಸಮುದಾಯದ ಸುಡುಗಾಡು ಸಿದ್ಧ ಜಾನಪದ ಕಲೆಗೆ ಸಮರ್ಪಿಸುತ್ತಾರೆ, …