July 13, 2025

ನಿಸ್ವಾರ್ಥ ಜನಸೇವೆ ಮಾಡುವ ಜನ ಸೇವಾ ಟ್ರಸ್ಟಿನ ಕಾರ್ಯ ಶ್ಲಾಘನೀಯ: ಉಮಾಪತಿ ಶೆಟ್ಟರ್ 

ಜೂಡಿ ನ್ಯೂಸ್ :

ನಿಸ್ವಾರ್ಥ ಜನಸೇವೆ ಮಾಡುವ ಜನ ಸೇವಾ ಟ್ರಸ್ಟಿನ ಕಾರ್ಯ ಶ್ಲಾಘನೀಯ: ಉಮಾಪತಿ ಶೆಟ್ಟರ್ 

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಜೈ ಹನುಮಾ ಬಯಲು ರಂಗ ಮಂದಿರದಲ್ಲಿ ಜುಲೈ 12 ರಂದು ಜನ ಸೇವಾ ಟ್ರಸ್ಟ್ ಆಶ್ರಯದಲ್ಲಿ ನವೋದಯ ಯುವಕ ಮಂಡಳಿಯ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತ್ತು ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಪತ್ರಿಕೆ ಸಂಘದ ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್ ಅವರು ಉದ್ಘಾಟಿಸಿದರು..

ಕರ್ನಾಟಕ ರಾಜ್ಯದಲ್ಲಿ ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರೇ ಜನ ಸೇವಾ ಟ್ರಸ್ಟ್.

ಸ್ವಾರ್ಥ ರಹಿತ ಸಮಾಜ ಸೇವೆಗೆ ಕಂಕಣ ಬದ್ಧರಾಗಿ ಟ್ರಸ್ಟಿನ ಆಶ್ರಯದಲ್ಲಿ ಪ್ರತಿ ವರ್ಷವೂ ಸಾಮೂಹಿಕ ಉಚಿತ ವಿವಾಹ ಮಹೋತ್ಸವ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಗಾರ, ಉಚಿತ ನೋಟ್ಸ್ ಬುಕ್ ವಿತರಣೆ ಕಾರ್ಯಕ್ರಮ ಇಂತಹ ಅನೇಕ ಜನೋಪಯೋಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಸವರಾಜ್ ರವರು ನಿಜವಾಗಿಯೂ ಹೃದಯ ಶ್ರೀಮಂತಿಕೆಯನ್ನು, ಮಾನವೀಯ ಉದಾತ್ತ ಗುಣವನ್ನು, ಅತ್ಯಂತ ಘನ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದಾರೆ,

ಭವಿಷ್ಯದ ರೂವಾರಿಗಳು ಸತ್ಪ್ರಜೆಗಳಾದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷವೂ ಶೈಕ್ಷಣಿಕವಾಗಿ ಮುಂದುವರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚಿತ ನೋಟ್ಸ್ ಬುಕ್ ನೀಡುವ ಕಾರ್ಯ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡಿದಂತೆ, ವಿದ್ಯಾರ್ಥಿಗಳು ಸರ್ಕಾರದ ಹಲವಾರು ಯೋಜನೆಗಳನ್ನು, ಸಂಘ ಸಂಸ್ಥೆಗಳ ಶೈಕ್ಷಣಿಕ ವಿಚಾರಗಳನ್ನು, ಸದುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣ ಮೊಬೈಲ್ ಗಿಳಿನಿಂದ ದೂರವಿದ್ದು, ಉತ್ತಮ ಅಭ್ಯಾಸ ಮಾಡುವ ಮೂಲಕ ಎತ್ತ ತಂದೆ ತಾಯಿಗಳಿಗೆ ಹುಟ್ಟಿದ ನಾಡಿಗೆ ಹೆಸರನ್ನು ತರಬೇಕೆಂದು ತಿಳಿಸಿ. ವಿದ್ಯಾರ್ಥಿಗಳಿಗೆ ತಾಯಿಯ ತ್ಯಾಗದ ಕತೆಯ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ಮಾತನಾಡಿದರು…

 ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ನುಡಿಗಳ ನಾಡಿನ ಜನ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಬುಡ್ಡಿ ಬಸವರಾಜ್ ರವರು ಶಿಕ್ಷಣದ ಕಾರ್ಯ ಅದು ಇಂದಿಗೆ ನಿನ್ನೆಗೆ ಸೀಮಿತವಲ್ಲ ಅದು ಅರಿಯುವ ಚಲನಶೀಲಗಂಗೋತ್ರಿ, ಶಿಕ್ಷಣದ ಸೇವಾ ಕಾರ್ಯ ನಿಜವಾದ ಪವಿತ್ರ ಕಾರ್ಯವಾಗಿದೆ ಈ ಶಿಕ್ಷಣದ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷವೂ ನಮ್ಮ ಗ್ರಾಮದ ಎಸ್ ಎಸ್ ಎಲ್ ಸಿ ಪಿಯುಸಿ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ ಆದರೆ ಕಳೆದ ವರ್ಷ ನೋಟ್ಸ್ ಬುಕ್ ಪಡೆದುಕೊಂಡವರ ಸಂಖ್ಯೆ ಹೆಚ್ಚಾಗಿದ್ದು, ಆದರೆ ಈ ವರ್ಷ ಹೋಲಿಸಿಕೊಂಡರೆ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಕಡಿಮೆಯಾಗಿದೆ ಎಂದು ವಿದ್ಯಾರ್ಥಿಗಳ ಓದಿನ ಬಗ್ಗೆ ಆತಂಕ ವ್ಯಕ್ತಪಡಿಸಿದರು,

ಓದುವ ವಯಸ್ಸಿನಲ್ಲಿ ಕಾಯಾ ವಾಚ ಶ್ರದ್ಧೆಯ ಇಚ್ಛೆಯ ಮನಸ್ಸಿನಿಂದ ವಿದ್ಯಾರ್ಥಿಗಳು ಗುರಿಯ ಕಡೆಗೆ ಗಮನವಿಟ್ಟು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕೆಂದು ಎಂದು ತಿಳಿಸಿ.. ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆದು ಎತ್ತ ತಂದೆ ತಾಯಿಗಳಿಗೆ ಸಮಾಜಕ್ಕೆ ಸ್ಪೂರ್ತಿಯಾಗಬೇಕೆಂದು ತಿಳಿಸಿ, ಹಂಪಾಪಟ್ಟಣ ಗ್ರಾಮದಲ್ಲಿ ಉತ್ತಮ ಕಣ್ಣಿನ ಆರೋಗ್ಯಕ್ಕಾಗಿ ಆರು ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೆ ಈ ತಿಂಗಳು 22 ನೇ ತಾರೀಖಿನ ದಿನದಂದು “ಸಿದ್ಧ ಕಣ್ಣಿನ ಹನಿ” ಪಾರಂಪರಿಕ ಔಷಧಿಯನ್ನು ಪ್ರತಿ ತಿಂಗಳು 22 ತಾರೀಕಿನ ದಿನದಂದು ನೀಡಲಾಗುವುದು ಆದ್ದರಿಂದ ಹಂಪಾಪಟ್ಟಣ ಗ್ರಾಮದ ಸುತ್ತ ಮುತ್ತಲಿನ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ವಿನಂತಿಸಿಕೊಂಡರು.. 

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಜಾವಾಣಿ ಪತ್ರಿಕೆಯ ಹಿರಿಯ ಪತ್ರಕರ್ತರಾದ ಸಿ ಶಿವಾನಂದ ನನ್ನೂರು ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ. ರಾಜ್ಯದಲ್ಲಿಯೇ ಅತ್ಯಂತ ಉತ್ತಮವಾದ ಹೆಸರನ್ನು ಪಡೆದಿದ್ದು ಆದರೆ ನನ್ನ ಗ್ರಾಮಕ್ಕೆ ದ್ವಿತೀಯ ಪಿಯುಸಿ ಕಾಲೇಜು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ , ಇದನ್ನು ಮನಗೊಂಡು ಇಂತಹ ಜನೋಪಯೋಗಿ ಕಾರ್ಯವನ್ನು ಹಂಪಾಪಟ್ಟಣದ ಗ್ರಾಮ ಪಂಚಾಯತಿಯವರು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಕೊಂಡರು..

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶ್ರಮಿಕರಿಗೆ ಸನ್ಮಾನಿಸಲಾಯಿತು ಹಾಗೆ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮವು ಸಹ ನೆರವೇರಿತು, ಹಾಗೆಯೇ ಮಹಾಂತೇಶ್ ಅವರ ರಂಗತಂಡದಿಂದ ಜಾನಪದ ಗೀತೆಗಳು ನೋಡುಗರ ಕಣ್ಮನ ಸೆಳೆದವು, ಹಾಗೆಯೇ ಯಡ್ಡರಮ್ನಳ್ಳಿ ಭರಮಪ್ಪನವರ ತಂಡದಿಂದ ತೊಗಲುಗೊಂಬೆ ಆಟ ಅತ್ಯಂತ ಯಶಸ್ವಿಯಾಗಿ ನೆರವೇರಿತು,

 ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಂಪಾಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಉಪ್ಪಾರ್ ಹುಲಿಗೆಮ್ಮ ಕಾಳಪ್ಪ, .ಸದಸ್ಯರಾದ ಬಿ ನಾಗರಾಜ್, ಎನ್ ನಾಗರಾಜ್, ಸಿದ್ದರ ಗಾಳೆಪ್ಪ, ಟಿ ಮಂಜುನಾಥ್, ಪತ್ರಿ ಯಲ್ಲಪ್ಪ, ಮಂಜುಳಾ ಅಂಜಿನಪ್ಪ, ಶ್ರೀಮತಿ ಹನುಮಕ್ಕ ಹುಲುಗಪ್ಪ, ಹಾಗೆ ಪತ್ರಕರ್ತರಾದ ವಿಶ್ವನಾಥ್ ಬಾವಿಕಟ್ಟಿ, ರಾಜಾಹುಲಿ ಗಡ್ಡದ್, ಅಶೋಕ್ ಉಪ್ಪಾರ್, ಡಿ ಭೀಮರಾವ್, ಜೆ ನಾಗರಾಜ್, ವೀರೇಶ್ ಮಜ್ಜಿಗಿ ಇತರೆ ಪತ್ರಕರ್ತರು,

ಹಿಂದುಳಿದ ಜಾತಿಗಳ ತಾಲೂಕು ಅಧ್ಯಕ್ಷರಾದಲಿಂಗರಾಜ್ ಯಾದವ್, ವಿ ಎಸ್ ಎಸ್ ಎನ್ ಉಪಾಧ್ಯಕ್ಷರಾದ ಕುಬೇರ್, ವಿಎಸ್ಎಸ್ಎನ್ ಸದಸ್ಯರಾದ ಗಾಳಮ್ಮನವರು ಹುಲುಗಪ್ಪ, ಜಿ ಶ್ರೀನಿವಾಸ್ ಶೆಟ್ಟಿ, ಆರ್ ಕಾಜಾ ಸಾಬ್, ಕೆ ಮಲ್ಲಿಕಾರ್ಜುನ್. ಭಜಂತ್ರಿ ಸೋಮನಾಥ್ ಮಾರುತಿ ಭಜನಾ ಮಂಡಳಿಯ ಅಧ್ಯಕ್ಷರಾದ ಕಿಟಕಿ ಶಿವಣ್ಣ, ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಅಂಬಳಿ ಕೇಶವಮೂರ್ತಿ, ನವೋದಯ ಯುವಕ ಸಂಘದ ಅಧ್ಯಕ್ಷರಾದ ವಿ ಹನುಮಂತ್, ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ತೀರ್ಥ ಪ್ರಸಾದ್ , ಪೂಜಾರ್ ಸೋಮನಾಥ ಕಡ್ಲೆ ಪ್ಪ. ಟೀ ಮಧುಸೂದನ. ಜಿ ಪಕೀರಪ್ಪ ಜಿ ರಾಘವೇಂದ್ರ ‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.. ಕಾರ್ಯಕ್ರಮದ ನಿರೂಪಣೆಯನ್ನು ಬಾರಿಕರ ಹುಲುಗಪ್ಪ ನೆರವೇರಿಸಿದರು.