September 14, 2025

ಅರುಣಾ ನರೇಂದ್ರ ಅವರ ಎರಡು ಕೃತಿಗಳ ಲೋಕಾರ್ಪಣೆ 

ಜೂಡಿ ನ್ಯೂಸ್ :

ಅರುಣಾ ನರೇಂದ್ರ ಅವರ ಎರಡು ಕೃತಿಗಳ ಲೋಕಾರ್ಪಣೆ 

 ಕೊಪ್ಪಳ, ಜು. 18: ಶಿಕ್ಷಕಿ, ಮಕ್ಕಳ ಸಾಹಿತಿ ಅರುಣಾ ನರೇಂದ್ರ ಅವರ ‘ ಚಂದಿರನಿಲ್ಲದ ಬಾನಿನಲಿ’ ಮತ್ತು ಕಮಲಿಯ ಕುರಿಮರಿ’ ಕೃತಿಗಳ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

 ಜುಲೈ 20ರಂದು ಬೆಳಗ್ಗೆ 10 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಈರಪ್ಪ ಕಂಬಳಿ ವಹಿಸುವರು. ಜಗದೀಶ ಸಿಂಗನಾಳ ಉದ್ಘಾಟಿಸುವರು. ಡಾಕ್ಟರ್ ಕೆ ರವೀಂದ್ರನಾಥ್ ಪುಸ್ತಕಗಳ ಲೋಕಾರ್ಪಣೆ ಗೊಳಿಸುವರು. ಅಬ್ದುಲ್ ಹೈ ತೋರಣಗಲ್ಲು, ಡಿ. ರಾಮಣ್ಣ ಕಲ್ಮರ್ಸಿಕೇರಿ ಅವರು ಪುಸ್ತಕ ಕುರಿತು ಮಾತನಾಡುವರು. ಮಂಜುನಾಥ ಡೊಳ್ಳಿನ, ವಿಶ್ವನಾಥ ಅಗಡಿ, ಗವಿಸಿದ್ದಪ್ಪ ಅಳವಂಡಿ, ಸಹದೇವ ಯರಗೊಪ್ಪ ಮುಖ್ಯ ಅತಿಥಿಗಳಾಗಿರುವರು. ಕವಯಿತ್ರಿ ಅರುಣಾ ನರೇಂದ್ರ ಉಪಸ್ಥಿತರಿರುವರು. ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮಹೇಶ ಬಳ್ಳಾರಿ ಅವರು ಕಾರ್ಯಕ್ರಮ ನಿರ್ವಹಿಸುವರು.

 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ ಎಂ ಮದರಿ, ಡಾ. ಜಿ. ಬಿ. ಬೀಡನಾಳ, ಶರಣಪ್ಪ ವಡಿಗೇರಿ, ರಂಗಭೂಮಿ ಕಲಾವಿದೆ ಹೆಚ್‌ಬಿ ಸರೋಜಮ್ಮ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ರಾಜೀವಕುಮಾರ್ ಜೈನ್, ಚಂದ್ರಕಲಾ ಇಟಗಿ ಮಠ, ಪರಶುರಾಮ್ ಗರೆಬಾಳ, ಬೀರಪ್ಪ ಅಂಡಗಿ ಹಾಗೂ ರಮೇಶ ಗಬ್ಬುರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.

 ಮಧ್ಯಾಹ್ನ 2:30 ರಿಂದ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಅಕ್ಬರ್ ಸಿ ಖಾಲಿಮಿರ್ಚಿ ವಹಿಸುವರು, ಶಿಲ್ಪಾ ಮ್ಯಾಗೇರಿ, ಸಿಕಂದರ್ ಮೀರ್ ಅಲಿ ಹಾಗೂ ಸಾವಿತ್ರಿ ಮುಜುಮದಾರ ಉಪಸ್ಥಿತರಿರುವರು. ಪವನ ಕುಮಾರ್ ಕಾರ್ಯಕ್ರಮ ನಿರ್ವಹಿಸುವರು.

 ಕವಿಗಳಾಗಿ ಮಹೇಶ ಬಳ್ಳಾರಿ, ಶಿ ಕಾ ಬಡಿಗೇರ, ಅಂಕಲಿ ಬಸಮ್ಮ, ನೂರ್ ಜಹಾನ್, ರಮೇಶ ಬನ್ನಿಕೊಪ್ಪ, ಮೈಲಾರಪ್ಪ ಬೂದಿಹಾಳ, ವಿಜಯಲಕ್ಷ್ಮಿ ಕೊಟ್ಟಗಿ, ಖಾಜಾಬಿ, ಮರುಳ ಸಿದ್ದಪ್ಪ ದೊಡ್ಡಮನಿ, ನೀಲಮ್ಮ ಅಂಗಡಿ, ಪದ್ಮ ಬೆಳವಾಡಿ, ರೇಖಾ ನಾಲ್ವಾಡ, ಅನಸೂಯ ಜಹಗಿರದಾರ್, ವೈ ಎಂ ಕೋಲಕಾರ್, ಯಲ್ಲಪ್ಪ ಹರನಾಳಗಿ, ಡಾ. ಮಹಾಂತೇಶ್ ನೆಲಾಗಣಿ, ಡಾ. ಕವಿತಾ ಹ್ಯಾಟಿ, ಅನ್ನಪೂರ್ಣ ಪದ್ಮಸಾಲಿ, ಶಿವಪ್ರಸಾದ ಹಾದಿಮನಿ, ಬಾಲ ನಾಗಮ್ಮ, ಮಹಾಂತೇಶ ಬೆರಗಣ್ಣವರ್, ಪುಷ್ಪಲತಾ ಏಳುಬಾವಿ, ಮಂಜುಳಾ ಶ್ಯಾವಿ, ಸುಮಂಗಲ ಹಂಚಿನಾಳ, ಸೋಮಲಿಂಗಪ್ಪ ಬೆಣ್ಣಿ, ಸುರೇಶ ಕಂಬಳಿ, ಕೋಮಲಾ ಕುದುರೆಮೋತಿ, ಅನ್ನಪೂರ್ಣ ಮನ್ನಾಪುರ, ವೀರೇಶ ಬ ಕುರಿ ಸೋಂಪುರ, ನಿಂಗಮ್ಮ ಪಟ್ಟಣಶೆಟ್ಟಿ, ಎ ಪಿ ಅಂಗಡಿ, ಈರಪ್ಪ ಬಿಜಲಿ, ಶಿವನಗೌಡ ಪಾಟೀಲ, ಎಂ ಎಸ್ ಗೌಡರ, ಶಾರದಾ ರಜಪೂತ, ಹನುಮವ್ವ, ಬಸವರಾಜ ಚೌಡಕಿ ಅವರು ಕವಿತಾ ವಾಚನ ಮಾಡುವರು ಎಂದು ಸಿದ್ದಾರ್ಥ ಪ್ರಕಾಶನದ ಸಂಚಾಲಕರಾದ ನರೇಂದ್ರ ಎಚ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.