ಜೂಡಿ ನ್ಯೂಸ್ :
ಅರುಣಾ ನರೇಂದ್ರ ಅವರ ‘ಕಮಲಿಯ ಕುರಿಮರಿ’ ಕೃತಿ ವಿಮರ್ಶೆ
ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅರುಣಾ ನರೇಂದ್ರ ಕೊಪ್ಳಳದವರು. ಅವರು ಪ್ರವೃತ್ತಿಯಲ್ಲಿ ಮಕ್ಕಳ ಸಾಹಿತಿಯಾಗಿ,ಗಜಲ್ ಲೇಖಕಿಯಾಗಿ ಈ ನಾಡಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.ಮಕ್ಕಳಿಗಾಗಿ ಒಂಬತ್ತು ಕವನ ಸಂಕಲಗಳನ್ನು ಬರೆದು ಪ್ರಕಟಿಸಿ ಮಕ್ಕಳ ಸಾಹಿತಿಯಾಗಿ ಜನಪ್ರಿಯತೆ ಪಡೆದಿದ್ದಾರೆ.ಇತ್ತೀಚೆಗೆ ಲೋಕಾರ್ಪಣೆಗೊಂಡ ಅವರ ಮಕ್ಕಳ ಕವನ ಸಂಕಲನ ಕಮಲಿಯ ಕುರಿಮರಿ ನನ್ನ ಕೈ ಸೇರಿ ಬಿಡದಂತೆ ಓದಿಸಿಕೊಂಡಿತು.ಓದುತ್ತ ಓದುತ್ತಾ ನಾನೂ ಮಗುವಾಗಿ ಬಿಟ್ಟೆ.ಈ ಕೃತಿಯಲ್ಲಿಯ ಕವಿತೆಗಳು ನನ್ನ ಮನಸ್ಸನ್ನು ಸೆಳೆದು ಮುದಗೊಳಿಸಿದವು.ಓದುಗರ ಮನಸ್ಸು ಗೆಲ್ಲುವ, ಮಕ್ಕಳ ಮನಸ್ಸನ್ನು ಕದಿಯುವ ಈ ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನ ಚಾಪನ್ನು ಮೂಡಿಸುತ್ತದೆ.
ಕೆಟ್ಟು ಹೋಗಿರುವ ಫೋನ್ ಹಿಡ್ಕೊಂಡು
ಮಾಮಗೆ ಮಾತಾಡ್ತಾಳೆ
ಚಾಕ್ಲೇಟ್ ಕೊಡಿಸದ ಅಣ್ಣನ ಬಗ್ಗೆ
ಅಳ್ತಾ ಚಾಡಿ ಹೇಳ್ತಾಳೆ
ಕವಿತೆಯಲ್ಲಿ ವ್ಯಕ್ತವಾದ ಈ ಮೇಲಿನ ಸಾಲುಗಳು ಮಕ್ಕಳ ಆಲೋಚನೆ ಮತ್ತು ಕಲ್ಪನಾ ಶಕ್ತಿಯನ್ನು ಎತ್ತಿ ತೋರಿಸುವಂತಿವೆ ಎಲ್ಲರ ಮನೆಯಲ್ಲೂ ಮಕ್ಕಳ ಸಾಮಾನ್ಯ ವಾಗಿ ನಿರ್ಜೀವ ವಸ್ತುಗಳನ್ನು ಹಿಡಿದುಕೊಂಡು ದೂರದ ಸಂಬಂಧಿಕರೊಂದಿಗೆ ಸಂಭಾಷಣೆ ಮಾಡುವ ಅದೆಷ್ಟೋ ಸನ್ನಿವೇಶಗಳು ನಮ್ಮ ಕಣ್ಣಿಗೆ ಸೆರೆಯಾಗಿರುತ್ತೇವೆ
ಮಕ್ಕಳು ತಮ್ಮ ತೊದಲ ನುಡಿಗಳ ಮೂಲಕ ಅಣ್ಣ ತಮ್ಮ ಅಕ್ಕನ ಬಗ್ಗೆ ಚಾಡಿ ಹೇಳಿ ಅಪ್ಪ ಅಮ್ಮನ ಕಡೆಯಿಂದ ಶಿಕ್ಷೆ ಕೊಡಿಸಿ ಕುಣಿದು ನಲೆದಾಡುವ ಮಕ್ಕಳ ಖುಷಿಗೆ ಪಾರವೇ ಇಲ್ಲ ಅರುಣಾ ನರೇಂದ್ರ ಅವರು ಮಕ್ಕಳ ಬಾಲ್ಯದಲ್ಲಿ ನಡೆಯುವ ಸಂಭಾಷಣೆಯನ್ನು ತಮ್ಮ ಕವಿತೆಯ ಸಾಲಿನಲ್ಲಿ ದಾಖಲಿಸಿದ್ದಾರೆ.
ಬೀದಿಯ ನಾಯಿ ಅಡ್ಡ ಬಂದಿತ್ತು
ಬ್ಯಾಲೇನ್ಸ್ ಸಿದ್ದುಗೆ ಸಿಗದೆ ಹೋಯಿತು
ತೆಗ್ಗಲಿ ಸೈಕಲ್ ಧೊಪ್ಪನೆ ಬಿತ್ತು
ಓಡುತ ನಾಯಿ ಕುಯ್ಯಿ ಕುಯ್ಯಿ ಅಂತು
ಅರುಣಾ ನರೇಂದ್ರ ಅವರು ಈ ಕವಿತೆಯಲ್ಲಿ ಅತ್ಯಂತ ಸುಂದರವಾದ ಪದಗಳನ್ನು ಹುಡುಕಿ ಹೆಣದಿದ್ದಾರೆ
ಹರಿಯುವ ಹಾವನ್ನೇ ಹಿಡಿದು ಕೊರಳಿಗೆ ಹಾಕಿಕೊಳ್ಳುವಷ್ಟು ಧೈರ್ಯ ಬಾಲ್ಯದಲ್ಲಿ ಮಕ್ಕಳಿಗೆ ಇರುತ್ತೆ ಎನ್ನುವ ಅಕ್ಷರಕ್ಷ ಸತ್ಯ
ಅಂಬೆಗಾಲಿಡುವ ಮಕ್ಕಳ ಅಂಗಳದಲ್ಲಿ ಹೆಜ್ಜೆ ಇಡಲು ಪ್ರಾರಂಭ ಮಾಡಿದರೆ ಹೆತ್ತವರಿಗೆ ಎರಡು ಕಣ್ಣು ಸಾಲುವುದೇ ಇಲ್ಲ ಅವರನ್ನು ಗಮನಿಸಲು ಬಾಲ್ಯದಲ್ಲಿ ಸೈಕಲ್ ಕಲಿಯಲು ಮಕ್ಕಳ ಪಡುವ ಹರಸಾಹಸವನ್ನು ನೋಡಲೇಬೇಕು ತಮ್ಮ ಕಾಲು ನೆಲಕ್ಕೆ ನಿಲುಕದಿದ್ದರೂ ಸೈಕಲ್ ಏರಿ ದಾರಿಗೆ ಅಡ್ಡ ಬರುವ ಕೋಳಿ ಕುರಿ ನಾಯಿ ಬೆಕ್ಕಿನ ಮೇಲೆ ಬಿದ್ದು ಗಾಯ ಮಾಡಿಕೊಂಡು ಮನೆಗೆ ಜಗಳ ತರುವ ಮಕ್ಕಳ ಕೀಟಲೆ ತುಂಟಾಟವನ್ನು ಈ ಕವಿತೆಯಲ್ಲಿ ನೋಡಬಹುದು
ನೆಲುವಿಗಿಟ್ಟ ಬೆಣ್ಣೆ
ನನಗೂ ನಿಲುಕುವುದೇನು
ಬಾಲ ನಾನು ಸೀರೆಯನು
ಕದಿಯುವೆನೆ ಅಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲರೂ ಸೇರಿ ಅವರೇ ನನ್ನ ಬಾಯಿಗೆ ಮೆತ್ತಿದರಮ್ಮ ಎನ್ನುವ ಕಿಲಾಡಿ ಕೃಷ್ಣನ ಹಾಡನ್ನೇ ಮತ್ತೆ ಮೆಲುಕು ಹಾಕಿಸುವಂತಿದೆ ಅರುಣಾ ನರೇಂದ್ರ ಅವರ ಕವಿತೆಯ ಸಾಲುಗಳು
ಬಾಲದಲ್ಲಿ ಮಕ್ಕಳು ಮಾಡುವ ಕೀಟಲೆ ತುಂಟಾಟ ತಮಾಷೆಗಳನ್ನು ನಾವು ಈ ಕವಿತೆಯಲ್ಲಿ ನೋಡಬಹುದು ತಪ್ಪು ಮಾಡಿದರು ತಪ್ಪು ಮಾಡಿಲ್ಲ ಎಂದು ವಾದಿಸುವ ಮಕ್ಕಳ ಮುಂದೆ ಅಮ್ಮನೇ ಸೋತು ಹೋಗಿ ಬಿಡುತ್ತಾಳೆ ಮಕ್ಕಳ ತೊದಲು ನುಡಿಗಳು ಅಮ್ಮನ ಮನಸ್ಸನ್ನು ಗೆದ್ದು ಬಿಡುತ್ತದೆ ಈ ಹಂತದಲ್ಲಿ ಮಕ್ಕಳು ಆಲೋಚನೆ ಶಕ್ತಿಯ ಸಾಮರ್ಥ್ಯವನ್ನು ಹೊಂದಿರುತ್ತಾರೆ ತಮ್ಮ ತಪ್ಪಿಗೆ ಇನ್ಯಾರದ ಹೆಸರನ್ನು ಸೇರಿಸಿ ಹೇಳುವಷ್ಟು ಮುಂದಾಲೋಚನೆಯ ಮಾಡಿರುತ್ತಾರೆ ಇಂತಹ ಹಂತದಲ್ಲಿ ಹೆತ್ತವರು ಮಕ್ಕಳ ಕಡೆಗೆ ಗಮನ ಕೊಡಿ ಎಂದು ಲೇಖಕಿ ಕಿವಿ ಮಾತು ಹೇಳಿದ್ದಾರೆ
ಇಲ್ಲಿ ನೋಡು ಸುಬ್ಬು ಬರೆದ
ಎಷ್ಟು ಚಂದ ಅಕ್ಷರ
ಒತ್ತು ದೀರ್ಘ ತಲೆಗೆ ಕೊಂಬು
ಕಟ್ಟಿ ಇಟ್ಟ ಹೂ ಸರ
ಈ ಕವಿತೆಯ ಸಾಲುಗಳಲ್ಲಿ ಅರುಣ ನರೇಂದ್ರ ಅವರು ಹೆತ್ತವರಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ ಮಕ್ಕಳಿಗೆ ಕಲಿಕಾ ವಿಷಯಗಳನ್ನು ಕಲಿಸುವಾಗ ಕಲಿಕೆಯಲ್ಲಿ ಮುಂದಿರುವ ಮಕ್ಕಳು ಸರಿಯಾದ ಉತ್ತರ ಕೊಟ್ಟಾಗ ಅವರನ್ನು ಹೊಗಳುವುದು ಅವರಿಗೆ ಚಪ್ಪಾಳೆಯನ್ನು ತಟ್ಟಿಸುವ ಮೂಲಕ ಇನ್ನುಳಿದ ಹಿಂದುಳಿದ ಮಕ್ಕಳಿಗೆ ನಾನು ಅವರಂತೆ ಕಲಿಯಬೇಕೆನ್ನುವ ಕಲಿಕಾ ಆಸಕ್ತಿಯನ್ನು ಪ್ರಚೋದನೆ ಮಾಡುವಂತೆ ಸಲಹೆ ನೀಡಿದ್ದಾರೆ
ಕಲಿಕೆಯಲ್ಲಿ ಆಸಕ್ತಿ ತೋರಿಸದ ಹಿಂದುಳಿದ ಮಕ್ಕಳಿಗೆ ಹೆತ್ತವರು ಶಿಕ್ಷಿಸುವುದು ಬೇಡ ಕಲಿಕೆಯಲ್ಲಿ ಮುಂದಿರುವ ಮಕ್ಕಳೊಂದಿಗೆ ಅವರನ್ನು ಓದಲು ಬಿಡಿ ಈ ರೀತಿಯಾಗಿಯೂ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ
ವಾರಕ್ಕೆ ಎರಡೇ ಎರೆಡು ದಿನ
ಶಾಲೆ ಇರಬೇಕಿತ್ತು
ಉಳಿದ ಎಲ್ಲಾ ದಿನಗಳನ್ನು
ಆಟಕೆ ಇಡಬೇಕಿತ್ತು
ನಮ್ಮ ಬಾಲ್ಯದ ದಿನಗಳನ್ನು ನಾವೇ ಮತ್ತೆ ಮೇಲಕ್ಕೆ ಹಾಕಿ ನಗುವಂತಿದೆ ಅರುಣಾ ನರೇಂದ್ರ ಅವರ ಬರೆದಿರುವ ಈ ಮೇಲಿನ ಸಾಲುಗಳು
ಬಾಲ್ಯದ ಹಂತದಲ್ಲಿ ಮಕ್ಕಳು ಅತಿ ಹೆಚ್ಚು ಆಟದ ಕಡೆಗೆ ಒಲವನ್ನು ತೋರಿಸುತ್ತಾರೆ ಮತ್ತು ಆಕರ್ಷಿತರಾಗಿರುತ್ತಾರೆ ಅವರಿಗೆ ಶಾಲೆ ಪಾಠ ಬೋಧನೆ ಸೆರೆಮನೆಯಲ್ಲಿ ಕೈದಿಗಳನ್ನು ಕೂಡಿಟ್ಟಿರುವ ಹಾಗೆ ಹಿಂಸೆ ಆಗುತ್ತಿರುತ್ತದೆ ನಿತ್ಯವೂ ಶಾಲೆಗೆ ಹೋಗಿ ಗುರುಗಳ ಪಾಠಗಳನ್ನು ಕೇಳಿ ಮನೆ ಕೆಲಸದ ಕಾರ್ಯವನ್ನು ಮಾಡುವ ಅಷ್ಟೊತ್ತಿಗಾಗಲೇ ಅವರಿಗೆ ಶಾಲೆಯ ಬೇಸರವಾಗಿ ಬಿಡುತ್ತಿದೆ ರಜಾ ದಿನ ಬಂದರೆ ಸಾಕು ಅದೇನು ಸಿಕ್ಕ ಹಾಗೆ ಅದೇನು ಗೆದ್ದ ಹಾಗೆ ಮಕ್ಕಳು ಖುಷಿ ಖುಷಿಯಾಗಿ ಸಮಯವನ್ನು ಕಳೆಯುತ್ತಾರೆ ಅರುಣಾ ನರೇಂದ್ರ ಅವರು ಆಟದೊಂದಿಗೆ ಮಕ್ಕಳಿಗೆ ಪಾಠವನ್ನು ಹೇಳಿ ಕೊಡಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದ್ದಾರೆ
ಜಾತ್ರೆ ತೇರು ಅಜ್ಜಿ ಊರು
ಮೋಜು ಮಸ್ತಿ ಸಾಕು
ಮತ್ತೆ ಓದಿ ಬರೆಯಬೇಕು
ಬೇಗ ಬನ್ನಿ ಮಕ್ಕಳೇ
ನಮ್ಮ ಬಾಲ್ಯದ ದಿನಗಳಲ್ಲಿ ಶಾಲಾ ರಜಾ ಕೊಟ್ಟಾಗ ಅಜ್ಜ ಅಜ್ಜಿಯ ಊರಿಗೆ ಹೋಗಿ ಜಾತ್ರೆಯಲ್ಲಿ ದೇವರ ತೇರು ನೋಡಿ ಉತ್ತತ್ತಿ ಎಸೆದು ಬಳೆ ಬಲೂನ್ ಆಟಿಕೆಯ ಗೊಂಬೆಗಳನ್ನು ತಂದು ಊರ ಕೆರೆಯಲ್ಲಿ ಅತ್ತೆಯೊಂದೆಗೆ ಬಟ್ಟೆ ತೊಳೆಯಲು ಹೋಗಿ ಮೈ ನೆನೆಸಿಕೊಂಡು ಜ್ವರ ಬಂದು ಮಲುಗಿದ ಘಟನೆಗಳು ನೆನಪಾದವು
ಶಾಲೆ ರಜಾ ಕೊಡುವುದು ಅಷ್ಟೇ ಸಾಕು ಮಕ್ಕಳು ಅಜ್ಜ ಅಮ್ಮನ ಊರಿಗೆ ಪ್ರಯಾಣ ಬೆಳೆಸಿ ಓಣಿಯ ಮಕ್ಕಳೊಂದಿಗೆ ಸೇರಿ ಆಟ ಆಡುವುದು ಊರ ಕೆರೆಯಲ್ಲಿ ಈಜಿ ಕಲಿಯುವುದು ಊರ ಜಾತ್ರೆಯಲ್ಲಿ ಸಂಭ್ರಮ ಪಡೆಯುವುದು ಬೆಟ್ಟ ಗುಡ್ಡಗಳನ್ನು ತಿರುಗುವುದು ಶಾಲೆ ಇದೇ ಎನ್ನುವುದನ್ನೇ ಮರೆತು ಬಿಡುತ್ತಾರೆ ಶಾಲೆ ಪ್ರಾರಂಭ ಎನ್ನುವುದು ಗೊತ್ತಾದರೆ ಮತ್ತೆ ಬೇಜಾರಿನಿಂದ ಊರ ಕಡೆಗೆ ಹೆಜ್ಜೆ ಇಡುವ ಮಕ್ಕಳ ಮನಸ್ಥಿತಿಯನ್ನು ಲೇಖಕಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ ಈ ಕವಿತೆಯಲ್ಲಿ
ಕುರಿಮರಿ ನೋಡಲು
ಕಮಲಿಯು ಬಂದಳು
ಹಟ್ಟಿಯ ಬಾಗಿಲು ತೆರೆಯುತಲಿ
ಮೈಯನು ಮುಟ್ಟಲು
ಹತ್ತಿಯ ತೆರದಿ
ಹಿತವೆನಿಸಿತು ಆ ಗಳಿಗೆಯಲಿ
ಈ ಕವಿತೆಯ ಸಾಲುಗಳು ಸಾಕು ಪ್ರಾಣಿಗಳ ಮಹತ್ವವನ್ನು ಎತ್ತಿ ತೋರಿಸುವಂತಿವೆ ಸಾಕು ಪ್ರಾಣಿಗಳನ್ನು ಕುಟುಂಬದ ಸದಸ್ಯರ ಹಾಗೇ ನೋಡಿಕೊಳ್ಳುವ ಸಂಸ್ಕೃತಿ ಆಚರಣೆಯ ಸಂಪ್ರದಾಯ ನಮ್ಮದು ಹಳೆಯ ಮನೆಯ ಛಾವಣಿಯಲ್ಲಿ ಎತ್ತಿನೊಂದಿಗೆ ಮನೆಯ ಎಲ್ಲಾ ಸದಸ್ಯರು ನಿಂತುಕೊಂಡು ಪೋಟೋ ತಗಿಸಿಕೊಂಡಿರುವ ಭಾವ ಚಿತ್ರ ತಮ್ಮ ಕಣ್ಣಿಗೆ ಕಂಡೆ ಕಂಡಿರುತ್ತದೆ
ಕಮಲಿ ತನ್ನ ಕುರಿ ಮರಿಯ ಮೇಲೆ ಇಟ್ಟರುವ ಕಾಳಜಿ ಪ್ರೀತಿಯನ್ನು ಈ ಕಮಲಿಯ ಕುರಿಮರಿ ಪುಸ್ತಕದಲ್ಲಿ ನೋಡಬಹುದಾಗಿದೆ ತಾನು ಇಷ್ಟ ಪಟ್ಟು ಸಾಕಿದ ಪ್ರಾಣಿಗಳಿಗೆ ಗಾಯವಾದರೆ ನೋವು ಆದರೆ ತಾವೇ ಅತ್ತು ದೇವರ ದೇವರ ಮರೆ ಹೋಗಿ ಬೇಡಿಕೊಳ್ಳುವ ಅದೆಷ್ಟು ಘಟನೆಗಳು ನಮ್ಮ ನಿಮ್ಮ ಮನೆಯಲ್ಲಿ ನಮ್ಮ ಮಕ್ಕಳೆ ಮಾಡಿರುವುದು ನೆನಪಿಗೆ ಬರುತ್ತದೆ
ಉತ್ತಮ ಸಂದೇಶಗಳನ್ನು ಉತ್ತಮ ಕಲಿಕಾ ಮೌಲ್ಯಗಳನ್ನು ಹೊಂದಿರುವ ಅರುಣಾ ನರೇಂದ್ರ ಅವರ ಈ ಕಮಲಿಯ ಕುರಿಮರಿ ನಿಮ್ಮ ಮಕ್ಕಳಿಗೆ ಓದಲು ಹಾಡಿ ನಲಿಯಲು ತುಂಬಾ ಉಪಯುಕ್ತವಾಗಿದೆ.
ಶುಭವಾಗಲಿ ಅರುಣಾ ಮೇಡಂ ಅವರಿಗೆ.
ವಿಮರ್ಶಕರು :- ಶ್ರೀಮತಿ. ಚಂದ್ರಕಲಾ ಮ ಇಟಗಿಮಠ
ಸಂಸ್ಥಾಪಕ ಅಧ್ಯಕ್ಷರು ಕಪ್ಪತ್ತಗಿರಿ ಫೌಂಡೇಶನ್
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ