September 14, 2025

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಕಳ್ಳ ಸಾಗಾಣಿಕೆ ತಡೆಯಲು ಪ್ರತಿಯೊಬ್ಬರು ಕೈಜೋಡಿಸಬೇಕು – ಯನುನಾ ಬೆಸ್ತರ್ 

ಜೂಡಿ ನ್ಯೂಸ್ :

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಕಳ್ಳ ಸಾಗಾಣಿಕೆ ತಡೆಯಲು ಪ್ರತಿಯೊಬ್ಬರು ಕೈಜೋಡಿಸಬೇಕು – ಯನುನಾ ಬೆಸ್ತರ್ 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಖಿ ಒನ್ ಸ್ಟಾಪ್ ಸೆಂಟರ್ ಕೊಪ್ಪಳ, ದೇವದಾಸಿ ಪುನರ್ವಸತಿ ಯೋಜನೆ ಕೊಪ್ಪಳ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಜ್ಞಾನವಿಕಾಸ ಮಹಿಳಾ ಸ್ವಸಾಯ ಸಂಘ ದೇವಲಾಪುರ, ವಿಜಯನಗರ ರವರ ಸಹಯೋಗದಲ್ಲಿ‌ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಕಳ್ಳ ಸಾಗಾಣಿಕೆಯ ತಡೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಸಖಿ ಘಟಕದಲ್ಲಿ ‍30 ನೇ ಜುಲೈ 2025 ರಂದು ಹಮ್ಮಿಕೊಳ್ಳಲಾಯಿತು.

 ಜ್ಞಾನವಿಕಾಸ ಸಂಯೋಜಕಿ ರಾಧ ಅವರು ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದರು.ಕ್ಷೇತ್ರ ಭೇಟಿಯ ಉದ್ದೇಶವನ್ನು ಕುರಿತು ತಿಳಿಸಿದರು. ನಂತರ ಅತಿಥಿವೃಂದದವರು ಸಸಿಗೆ ನೀರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಶ್ರೀಮತಿ ಯಮುನಾ ಬೆಸ್ತರ್ ಘಟಕ ಆಡಳಿತಾಧಿಕಾರಿಗಳು ಸಖಿ ಒನ್ ಸ್ಟಾಪ್ ಸೆಂಟರ್ ಕೊಪ್ಪಳ ರವರು ಮಾತನಾಡಿ, ಅಕ್ರಮ ಮಾನವ ಕಳ್ಳ ಸಾಗಣೆ ಸಾಮಾಜದ ಅನಿಷ್ಠ ವಾಗಿದೆ. ಈ ಮಾನಸ ಕಳ್ಳ ಸಾಗಣೆ ಜಾಲದಲ್ಲಿ ಶೇ.80 ರಷ್ಟು ಮಹಿಳೆಯರು ಮತ್ತು ಮಕ್ಕಳು ಸಿಲುಕುತ್ತಿದ್ದಾರೆ. ನಾವುಗಳು ಅಂಕಿ ಅಂಶಗಳನ್ನು ಅವಲೋಕಿಸಿದಾಗ ದೇಶದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತದೆ. ಶೇ. 30ರಷ್ಟು ಪ್ರಕರಣಗಳು ಮಾತ್ರವೇ ಬೆಳಕಿಗೆ ಬರುತ್ತಿದೆ. ದುಡಿತಕ್ಕೆ ಹೋದ ಎಷ್ಟೋ ಜನರು ಹಲವು ಸಮಸ್ಯೆಗಳನ್ನು ಎದುರು ಹಾಕಿಕೊಂಡು ಮರಳಿ ತಮ್ಮ ಗ್ರಾಮಕ್ಕೆ ಹಿಂತಿರುಗದೆ ಶೋಷಣೆಗೆ ಒಳಗಾಗಿ ಬಲಿಯಾಗುತ್ತಿರುವುದು ಯೋಚನೆಯಾಗಿದೆ.  

ಮಕ್ಕಳು ಮತ್ತು ಮಹಿಳೆಯರು ಅನೈತಿಕ ಚಟುವಟಿಕೆಗಳಿಗೆ ಅಕ್ರಮವಾಗಿ, ಬಲವಂತವಾಗಿ ಹಾಗೂ ಅವರಿಗೆ ಅರಿವಿಲ್ಲದ ರೀತಿಯಲ್ಲಿ ಆಸೆ ಆಮಿಷುಗಳನ್ನು ತೋರಿಸಿ ಅವರನ್ನು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಾಣೆಕೆ ಮಾಡುತ್ತಿರುವುದರ ಕುರಿತು ಎಫ.ಆಯ್.ಆರ್ ಪ್ರಕರಣಗಳ ಅಂಕಿ ಅಂಶಗಳಿಂದ ತಿಳಿಯಬಹುದಾಗಿದೆ. 

ಬೆಳಕಿಗೆ ಬಾರದ ಅದೆಷ್ಟೋ ಪ್ರಕರಣಗಳಿವೆ. ಈ ಪ್ರಕರಣಗಳು ಸ್ವಸ್ಥ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇಂತಹ ತಪ್ಪುಗಳು ಮರುಕಳಿಸದಂತೆ ನಾವುಗಳು ಜಾಗೃತರಾಗಬೇಕು. ಕಾನೂನನ್ನು ಕುರಿತು ಅರಿವು ಹೊಂದುವುದು ಅಗತ್ಯವಿದೆ. ಕುಟುಂಬದಿಂದ ಹಿಡಿದು ಸಮಾಜದಲ್ಲಿನ ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಪ್ರತಿಯೊಬ್ಬ ನಾಗರಿಕರು ಬದ್ಧತೆಯನ್ನು ತೋದಬೇಕಾಗಿದೆ.

ಕುಟುಂಬದಲ್ಲಿ ಯಾರಾದರೂ ಕಾಣೆಯಾದರೆ ತಕ್ಷಣವೇ ಎಫ್ಐಆರ್ ದಾಖಲು ಮಾಡಬೇಕೆಂದು, ಸಖಿ ಘಟಕದ ಆಡಳಿತ ಅಧಿಕಾರಿ ಯಮುನಾ ಬೆಸ್ತರ್ ಅವರು ಮಾಹಿತಿ ನೀಡಿದರು.

ದಾದೆಸಾಬ ಕೊಪ್ಪಳ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನೆಯ ಜಿಲ್ಲಾ ಸಂಯೋಜಕರು ಕಾರ್ಯಕ್ರಮದ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಮಾಜದ ಅನಿಷ್ಟ ಪದ್ದತಿಯಾದ ದೇವದಾಸಿ ಪದ್ಧತಿಯ ತಡೆಯ ಕುರಿತು ಮಾಹಿತಿ ನೀಡಿದರು.

ಬಾಲ್ಯವಿವಾಹ ತಡೆ ಕಾಯ್ದೆ, ,2006 ಪೋಕ್ಸೋ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2012 ಕುರಿತು ವಕೀಲರಾದ ರಾಧ ಮತ್ತು ಪುಷ್ಪ ರವರು ಮಾಹಿತಿ ನೀಡಿದರು. 

 ಸಾಮಾಜಿಕ ಕಾರ್ಯಕರ್ತೆ ಹುಲಿಗೆಮ್ಮ ಅವರು ಮಹಿಳೆಯರ ಮತ್ತು ಮಕ್ಕಳ ಅನೈತಿಕ ಕಳ್ಳ ಸಾಗಾಣಿಕೆಯ ತಡೆಯ ಕಾನೂನು ಪ್ರತಿಜ್ಞಾವಿಧಿಯ ಪ್ರಮಾಣವನ್ನು ಎಲ್ಲರಿಗೂಂದಿಗೆ ನೆರವೇರಿಸಿ ಕಾರ್ಯಕ್ರಮ ನಿರ್ವಹಿಸಿದರು.

ಸ್ವಸಹಾಯ ಸಂಘದ ಕ್ಷೇತ್ರ ಭೇಟಿಯ ಮಹಿಳೆಯರು ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಹಿತಿಯನ್ನು ಪಡೆಯುವುದರ ಮೂಲಕ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿದರು.