September 14, 2025

ಕರ್ತವ್ಯ ಲೋಪ : ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಮಾನತು 

ಜೂಡಿ ನ್ಯೂಸ್ :

 ಕರ್ತವ್ಯ ಲೋಪ : ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಮಾನತು 

ಕೊಪ್ಪಳ : ಕನಕಗಿರಿ ತಾಲ್ಲೂಕಿನ ಕರಡೋಣ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗಲಿಂಗಪ್ಪ ಅವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅವರು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಗದಿತ ಗುರಿಗಳನ್ನು ಸಾಧಿಸಿಲ್ಲ ಹಾಗೂ ಹೆಚ್ಚುವರಿ ಕಾಮಗಾರಿಗಳನ್ನು ಆರಂಭಿಸದೆ ಇರುವುದು, ಕೇಂದ್ರ ಸರ್ಕಾರದ ಪಿ ಎಂ ಆವಾಸ್ ಯೋಜನೆಯಲ್ಲಿ ಮಂಜೂರಾದ 426 ಗುರಿಗಳಲ್ಲಿ ಕೇವಲ 119 ಮಾತ್ರ ಪ್ರಗತಿ ಮಾಡಿದ್ದು, ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆಯನ್ನು ತಲುಪಿಸದಿರುವ ವಿಷಯ ಸೇರಿದಂತೆ ವಿವಿಧ ಕಾಮಗಾರಿ ವಿಷಯಗಳಲ್ಲಿ ಕರ್ತವ್ಯಲೋಪ ಎಸಗಿರುವುದು, ಸಮರ್ಪಕವಾಗಿ ಕರ ವಸೂಲಿ ಮಾಡದಿರುವುದು ಬೆಳಕಿಗೆ ಬಂದಿದೆ.

ಪಿಡಿಒ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದರೂ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಸಲ್ಲಿಸಿದ ವರದಿ ಅನ್ವಯ ನಾಗಲಿಂಗಪ್ಪ ಅವರನ್ನು ವರ್ಣಿತ್ ನೇಗಿ ಅವರು ಮಾಡಿದ್ದಾರೆ.