September 14, 2025

ಶರಣರ ಸತ್ಸಂಗ, ಅನುಭಾವದಿಂದ ಅಲೌಕಿಕ ಆನಂದ ದೊರೆಯುತ್ತದೆ – ಅರುಣಾನರೇoದ್ರ

ಜೂಡಿ ನ್ಯೂಸ್ :

ಶರಣರ ಸತ್ಸಂಗ, ಅನುಭಾವದಿಂದ ಅಲೌಕಿಕ ಆನಂದ ದೊರೆಯುತ್ತದೆ – ಅರುಣಾನರೇoದ್ರ

ಗoಗಾವತಿ 16: ಮನುಷ್ಯ ದುರಾಸೆಯಿಂದ ಅನ್ಯ ಮಾರ್ಗ ತುಳಿದು ಹಣ ಗಳಿಸಿದರೆ ಆ ಹಣ ಪಾಪದ ಹಣವಾಗುತ್ತದೆ.ಹಣ- ಆಸ್ತಿಗಿಂತ ಮಾನವನಿಗೆ ಒಳ್ಳೆಯ ವ್ಯಕ್ತಿತ್ವ ಗೌರವಾದರಗಳನ್ನು ನೀಡುತ್ತದೆ.ಶರಣರು ಭ್ರಷ್ಟಾಚಾರದ ವಿರೋಧಿಯಾಗಿದ್ದರು.ಎಂದು ಶಿಕ್ಷಕಿ,ಸಾಹಿತಿ ಅರುಣಾ ನರೇoದ್ರ ಹೇಳಿದರು.

ಅವರು ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿರುವ ಶಿವಲೀಲಾ ಸಿ.ಎಮ್ ಮತ್ತು ಬಸವರಾಜಯ್ಯ ಶಿಕ್ಷಕ ದಂಪತಿಗಳ ಮನೆಯಲ್ಲಿ ನಡೆದ ವಚನ ಶ್ರಾವಣದ 23ನೇ ಕಾರ್ಯಕ್ರಮದಲ್ಲಿ ‘ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ, ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ’ ಎನ್ನುವ ಶರಣೆ ಕಾಳವ್ವೆ ಅವರ ವಚನ ನಿರ್ವಚನ ಮಾಡುತ್ತಾ ವಚನಕಾರರ ತತ್ವ ವಿಚಾರಗಳನ್ನು ಹಂಚಿಕೊಂಡರು.

ಶ್ರೀಮತಿ ಶಿವಲೀಲಾ ಇವರು ಮಾತನಾಡಿ ಶ್ರಾವಣ ಮಾಸದಲ್ಲಿ ತಮ್ಮ ಮನೆಯಲ್ಲಿ ಈ ಕಾರ್ಯಕ್ರಮ ನಡೆದುದು ತುoಬಾ ಸoತಸ ತoದಿದೆ ಎoದರು. ಮಕ್ಕಳಾದ ಸಮರ್ಥ, ಭೂಮಿಕಾ ವಚನವನ್ನು ಹೇಳಿದರು.

ರಾಜಶೇಖರಯ್ಯ ಕಲ್ಮಠ ಇವರು ಯೋಗದ ಕುರಿತು ಮಾತನಾಡಿದರು.ಕೆ.ಬಸವರಾಜ, ಶ್ರೀಮತಿ ಚನ್ನಬಸಮ್ಮ ಕoಪ್ಲಿ ಇವರು ಅನುಕ್ರಮವಾಗಿ ಶರಣರ, ಸೃಷ್ಟಿಕರ್ತನ ಸ್ಮರಣೆಯನ್ನು ನಡೆಸಿಕೊಟ್ಟರು.

ಅರುಣಾ ನರೇoದ್ರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ರಾಜ್ಯ ಕಾರ್ಯದರ್ಶಿ ಶ್ರೀ ಶ್ರೀಶೈಲ ಪಟ್ಟಣ ಶೆಟ್ಟಿ ಅವರು ಉಪಸ್ಥಿತರಿದ್ದರು.ಗಂಗಾವತಿಯ ಎಲ್ಲ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಬಸವ ಅನುಯಾಯಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿರುವುದು ವಿಶೇಷವಾಗಿತ್ತು.

ವೀರೇಶರಡ್ಡಿ ವಚನ ಮಂಗಲದೊಂದಿಗೆ  ಸಮಾರಂಭ ಮುಕ್ತಾಯವಾಯಿತು.