September 14, 2025

ಬದಲಾದ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ಪತನಗೊಳ್ಳುತ್ತಿವೆ : ಸಂತೋಷ  ಹೆಗಡೆ

ಜೂಡಿ ನ್ಯೂಸ್ :

ಬದಲಾದ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ಪತನಗೊಳ್ಳುತ್ತಿವೆ : ಸಂತೋಷ  ಹೆಗಡೆ

ಯಲಬುರ್ಗಾ: ಬದಲಾದ ಕಾಲಘಟ್ಟದಲ್ಲಿ ಮನುಷ್ಯನ ಮನಸ್ಥಿತಿ ಮಾನವೀಯ ಮೌಲ್ಯಗಳು ಪತನಗೊಳ್ಳುತ್ತಿದ್ದು ಇಂದು ಮನುಷ್ಯ ಮನುಷ್ಯನ ನಡುಗೆ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದ್ದು, ಇದರಿಂದ ಇಂದು ಮನುಷ್ಯ ಜೀವಿ ಕುಬ್ಜತೆಯ ಮಡುವಿನಲ್ಲಿ ನರಳುತ್ತಿದ್ದಾನೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆ ಹೇಳಿದರು.

ಅವರು ಪಟ್ಟಣದ ಸಾಯಿ ಪ್ಯಾಲೇಸ್ ನಲ್ಲಿ ದಿ: ಗುರುಬಸಪ್ಪ ಕಳಕಪ್ಪ ಪಲ್ಲೇದ ಇವರ ೫೦ನೇ ಪುಣ್ಯತಿಥಿಯ ಪುನಸ್ಮರಣೆ ಕಾರ್ಯಕ್ರಮ ಹಾಗೂ ವಿಶ್ರಾಂತ ಜಿಲ್ಲಾ ನ್ಯಾಯಾದೀಶ ಎಸ್.ಜಿ. ಪಲ್ಲೇದ ರವರ ಆತ್ಮ ಕಥನ ಗ್ರಂಥ ಬಿಡುಗಡೆ ಮತ್ತು ತೆರಿಗೆ ಸಲಹೆಗಾಗ ಕೆ.ಜಿ. ಪಲ್ಲೇದ ರವರ ನೂತನ ಸಾಯಿ ಅಸೋಷಿಯೇಟ್ಸ್ ಉದ್ಘಾಟಿಸಿ ಮಾತನಾಡಿದರು.

ಇಂದು ಆಸೆ ಆಮಿಷಗಳು ಮಿತಿ ಮೀರುತ್ತಿದ್ದು ಹೀಗಾಗಿ ಇದರಿಂದ ಇಂದು ಮನುಷ್ಯ ಸಂಬಂಧಗಳು ಮುರಿದು ಬಿಳುತ್ತಿವೆ ಎಂದರು.

ಸಾನಿಧ್ಯ ವಹಿಸಿದ್ದ ರೋಣದ ಗುಲಗಂಜಿ ಮಠದ ಗುರುಪಾದ ದೇವರು ಮಾತನಾಡಿ ಇಂದು ಯಲಬುರ್ಗಾ ತಾಲೂಕಿನಲ್ಲಿ ಮತ್ತು ವಿಶೇಷವಾಗಿ ಜಿಲ್ಲೆಯಲ್ಲಿ ಪಲ್ಲೇದ ಮನೆತನ ಜನಪರ, ಜೀವಪರ, ಅಭಿವೃದ್ಧಿಪರ ಕಾರ್ಯಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ ಇದಕ್ಕೆ ಪಲ್ಲೇದ ಸಹೋದರರ ಸಹಬಾಳ್ವೆ ಕಾರಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ನ್ಯಾಯಾದೀಶ ಮತ್ತು ಗದಗ ಜಿಲ್ಲಾ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ವಹಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಕೋರ್ಟಿನ ವಕೀಲರಾದ ಎಸ್.ಹೆಚ್. ಮಿಟ್ಟಲಕೋಡ್, ಸಾಹಿತಿ ಸಿದ್ದು ಯಾಪಲಪರ್ವಿ ಮಾತನಾಡಿದರು.

ಈ ಸಂದರ್ಭದಲ್ಲಿ ವೀರಭದ್ರಪ್ಪ (ಅಪ್ಪಣ್ಣ) ಪಲ್ಲೇದ, ಅಡಿವೆಪ್ಪ ಗು. ಪಲ್ಲೇದ, ತೆರಿಗೆ ಸಲಹೆಗಾರ ಕಳಕಪ್ಪ ಪಲ್ಲೇದ, ಬೆಂಗಳೂರಿನ ಜಿಲ್ಲಾ ನ್ಯಾಯಾಧೀಶ ಸಂತೋಷ ಜಿ. ಪಲ್ಲೇದ, ನಿವೃತ್ತ ನ್ಯಾಯಾಧೀಶರಾದ ಈಶಪ್ಪ ಭೂತೆ, ಬಾಳಪ್ಪ ಭೂತೆ, ಕೆ.ಬಿ. ಧರಣ, ಪಂಚಮಸಾಲಿ ಸಮಾಜದ ಮಾಜಿ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ಭೂತೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಹೆಚ್.ಪಾಟೀಲ್, ಶೇಖರಗೌಡ ಉಳ್ಳಾಗಡ್ಡಿ, ಮಾಜಿ ವಕೀಲರ ಸಂಘದ ಅದ್ಯಕ್ಷ ಎಸ್.ಎನ್. ಶ್ಯಾಗೋಟಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಕಣವಿ, ತಾಲೂಕ ವಕೀಲರ ಸಂಘದ ಅಧ್ಯಕ್ಷ ಸುಭಾಸ ಹೊಂಬಳ, ಅಂದಾನಯ್ಯ ಶ್ಯಾಡಲಗೇರಿಮಠ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎನ್. ಗದ್ದಿ, ಮಾಜಿ ಜಿ.ಪಂ ಸದಸ್ಯ ಶಕುಂತಲಾದೇವಿ ಮಾಲಿ ಪಾಟೀಲ್ ಜ್ಯೋತಿ ಕ. ಪಲ್ಲೇದ, ಶಾಂತಾದೇವಿ ಎಸ್. ಪಲ್ಲೇದ ಪ್ರಮಿಳಾದೇವಿ ಪಲ್ಲೇದ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ನ್ಯಯಾದೀಶರಾದ ಎಸ್.ಜಿ. ಪಲ್ಲೇದ ಆತ್ಮ ಕಥನ ಗ್ರಂಥ ಬಿಡುಗಡೆಗೊಳಿಸಲಾಯಿತು.