ಜೂಡಿ ನ್ಯೂಸ್ :
ಶರಣರ ವಚನ ಸಾಹಿತ್ಯ ಸಾರ್ವಕಾಲಿಕ : ಡಾ ಸಿ ಸೋಮಶೇಖರ
ಕುಷ್ಟಗಿ : ನಡೆನುಡಿ ಶುದ್ದವಾವಾಗುವ ಬಗೆಗಳಲ್ಲಿ ವಚನಗಳ ಸಾರ ಅರಿಯಬೇಕಿದೆ ಇಂದಿನ ದಿನಗಳಲ್ಲಿ ವಚನ ವಾಚಿಸುವ ಪರಂಪರೆ ಉಳಿಸಿ ಬೆಳಸಬೇಕಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಶರಣ ಡಾ ಸಿ ಸೋಮಶೇಖರ ಹೇಳಿದರು.
ಅವರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಜಾಗತಿಕ ಲಿಂಗಾಯತ ಮಹಾ ಸಭಾ ಹಾಗೂ ಶರಣ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಈ ಸಂಜೆ ಬಸವ ಭವನದಲ್ಲಿ ನಡೆದ ವಚನ ಶ್ರವಣ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನಿರೇರೆವ ಮೂಲಕ ಚಾಲನೆ ನೀಡಿ ಮಾತನಾಡಿದರು
ಮುಂದುವರೆದು ಮುಂಬರುವ ದಿನಮಾನಗಳಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ವಚನ ಸಂಸ್ಕೃತಿ ಹಾಗೂ ಶರಣರ ವಚನ ಸಾಹಿತ್ಯ ಪರಂಪರೆಯನ್ನು ನಾಡಿನ ತುಂಬೆಲ್ಲಾ ಹರಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸುವ ಕೆಲಸ ಮಾಡಬೇಕಿದೆ ಎಂದರು.
ಶರಣರ ವಚನಗಳಲ್ಲಿ ಅಂತರಂಗ ಶುದ್ದಿ ಎನ್ನುವ ವಿಷಯವಾಗಿ ಬೆಂಗಳೂಲ್ಲಿ ಸರಕಾರಿ ಅಭಿಯೋಜಕರಾಗಿರುವ ಶರಣ ಬಿ ಎಸ್ ಪಾಟೀಲ ಮಾತನಾಡುತ್ತಾ ೧೨ ನೇ ಶತಮಾನದ ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಅಂತರಂಗ ಶುದ್ದಿ ಬಹಿರಂಗ ಶುದ್ದಿ ಎನ್ನುವ ಕಳಬೇಡ ಕೊಲಬೇಡ ಎನ್ನುವ ತತ್ವಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಿಕೊಂಡು ಬರಬೇಕಿದೆ ಎಂದರು
ವೇದಿಕೆಯಲ್ಲಿ ಶಸಾಪ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಗಾಂಜಿ , ಮಾಜಿ ಶಾಸಕ ಶರಣ ಕೆ ಶರಣಪ್ಪ ,ಶರಣ ದೇವೆಂದ್ರಪ್ಪ ಬಳೂಟಗಿ ಶರಣ ಡಾ ಜೀವನ ಸಾಬ ವಾಲಿಕಾರ ಶರಣ ಟಿ ಬಸವರಾಜ ಶರಣೆ ವಿದ್ಯಾ ಕಂಪಾಪೂರಮಠ ಮಾತನಾಡಿದರು
ಕಸಾಪದ ಪ್ರಮುಖರಾದ ಶರಣ ನಬಿಸಾಬ ಕುಷ್ಟಗಿ ಶರಣ ರವೀಂದ್ರ ಬಾಕಳೆ ಶರಣ ಹನುಮೇಶ ಗುಮಗೇರಿ ಶರಣ ಉಮೇಶ ಹಿರೇಮಠ ಶಸಾಪ ಅದ್ಯಕ್ಷ ಶರಣ ನಟರಾಜ ಸೋನಾರ ಶರಣ ರವೀಂದ್ರನಾಥ ಬಳಿಗೇರ ಶರಣ ಎಸ್ ಎಸ್ ಅರಳಿ ಶರಣ ಈರಣ್ಣ ಬಳಿಗಾರ ಉಪಸ್ಥಿತರಿದ್ದರು
ಕಾರ್ಯಕ್ರಮದ ಮೊದಲಿಗೆ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ನಂತರ ವಚನ ಪ್ರಾರ್ಥನೆ ಮಾಡಲಾಯಿತು ಮಹೇಶ ಹೆಚ್ ನಿರೂಪಿಸಿದರೆ ಉಪನ್ಯಾಸಕ ನಿಂಗಪ್ಪ ಸಜ್ಜನ ಪ್ರಾಸ್ತಾವಿಕ ಮಾತನಾಡಿದರು ಕೊನೆಯಲ್ಲಿ ನಟರಾಜ ಸೋನಾರ್ ವಂದಿಸಿದರು.
ವರದಿ : ನಟರಾಜ ಸೋನಾರ್
More Stories
ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸೆ. 18 ರಂದು ಆರೋಗ್ಯ ತಪಾಸಣಾ ಶಿಬಿರ
ದಾನಿ ಸುಬ್ಬಾರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಂಪಾಪಟ್ಟಣ ನಾಗರಿಕರು..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಶಿಕ್ಷಕರ ದಿನಾಚರಣೆ