ಜೂಡಿ ನ್ಯೂಸ್ :
ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ಶಿಗೇನಹಳ್ಳಿ ಬಸವರಾಜ್..
ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿಗೇನಹಳ್ಳಿ ಬಸವರಾಜ ಇವರ 39ನೇ ಜನ್ಮದಿನದ ಅಂಗವಾಗಿ ಮಗಿಮಾವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹಂಪಾಪಟ್ಟಣದ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಣೆ ಮಾಡುವ ಮೂಲಕ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು…

ಈ ಸಂದರ್ಭದಲ್ಲಿ ಟಿ ಕೊಟ್ರೇಶ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹುಟ್ಟು ಹಬ್ಬ ಆಚರಣೆಗಳನ್ನು ಅತಿ ಹೆಚ್ಚು ದುಂದು ವೆಚ್ಚದಿಂದ ದುಶ್ಚಟಗಳಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುದೆ ರೋಗಿಗಳಿಗೆ ಹಣ್ಣು ಹಂಪಲ, ಉಪಹಾರದ ಸೇವೆಯ ಮೂಲಕ ಜನ್ಮದಿನವನ್ನು ಆಚರಿಸಿಕೊಂಡ ಗ್ರಾಮದ ಶಿಗೇನಹಳ್ಳಿ ಬಸವರಾಜ ಅವರು ಸಾಮಾಜಿಕ ಕಾರ್ಯ ಸರ್ವರಿಗೂ ಪ್ರೇರಣದಾಯಕವಾದದ್ದು ಎಂದು ಮಾತನಾಡಿದರು…
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ತಾಲೂಕು ಅಧ್ಯಕ್ಷರಾದ ಗೂಳಿ ಕೊಟ್ರೇಶ್ ರವರು ಭಗವಂತ ನಮಗೆ ಪುಣ್ಯ ದಾದ ಜೀವನವನ್ನು ನೀಡಿದ್ದಾನೇ.. ಸುಂದರವಾದ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಹಲವಾರು ಜನಪಯೋಗಿ ಕಾರ್ಯಗಳನ್ನು ಮಾಡಿ ಜನ ಮೆಚ್ಚುವಂತೆ ಮನ ಮೆಚ್ಚುವಂತೆ ಬದುಕಬೇಕು ಈ ಸಾಲಿನಲ್ಲಿ ಶಿಗೇನಹಳ್ಳಿ ಬಸವರಾಜ್ ರವರು ಸಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಮಾತನಾಡಿದರು..
ಈ ಸಂದರ್ಭದಲ್ಲಿ ನೆರೆದಿದ್ದ ಜನರು ಹಂಪಾಪಟ್ಟಣ ಗ್ರಾಮದ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಪ್ರಧಾನ ಕಾರ್ಯದರ್ಶಿ ಶಿಗೇನಹಳ್ಳಿ ಬಸವರಾಜ ಅವರ ಹುಟ್ಟುಹಬ್ಬ ಪ್ರಯುಕ್ತ ಅಣ್ಣ ಹಂಪಲುಗಳು ವಿತರಣೆ ಮಾಡಿದ್ದಾರೆ ನಿಜಕ್ಕೂ ಶ್ಲಾಘನೀಯ. ಬಸವರಾಜ ಇವರಿಗೆ ಭಗವಂತ ನೂರಾರು ವರ್ಷ ಆಯಸ್ಸು ನೀಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಮುಗಿಮಾವಿನಹಳ್ಳಿಯ ಮೇಟಿ ಮಂಜುನಾಥ್, ಸೋಮಣ್ಣ ರೇಷ್ಮೆ ಬೆಳೆಗಾರರು, ಹಾಗೂ ಇತರರು ಹಂಪಾಪಟ್ಟಣದ ಗೂಳಿ ಕೊಟ್ರೇಶ್, ಟಿ ಕೊಟ್ರೇಶ್ ಗೋ ಮಾತಾ, ಹಿರಿಯರಾದ ಕಡ್ಲಪ್ಪನವರ ಹುಲುಗಪ್ಪ, ಬಸಾಪುರದ ರಮೇಶ್, ಗಣೇಶಪ್ಪ, ಗಾಳೆಪ್ಪ, ಸಿ, ನಾಗರಾಜ್ ,ಸೋಮು ತಳವಾರ್, ಟಿ ಗೌತಮ್, ಟಿ,ನಾಗೇಶ್, ಎಂ,ಕೊಟ್ರೇಶ, ಯು,ವಕೀಲ, ಎಚ್,ಸೋಮನಾಥ. ತೀರ್ಥ ಪ್ರಸಾದ್, ರಾಮು ಡಿಎಸ್ಎಸ್, ದುರ್ಗಪ್ಪ, ಹಾಲೇಶ್, ದೊಡ್ಡ ಬಸವ, ಬಸವರಾಜ್ ಮತ್ತಿತರರು ಹಾಜರಿದ್ದರು.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ