ಜೂಡಿ ನ್ಯೂಸ್ :
ಕೊಪ್ಪಳದ ಹಿರಿಯ ಸಾಹಿತಿ ಮಕ್ಕಳ ಕವಯತ್ರಿ, ಗಜಲ್ಗಾರ್ತಿ, ಆಧುನಿಕ ವಚನಕಾರ್ತಿ, ತತ್ವಪದಕಾರ್ತಿ, ಶಿಕ್ಷಕಿ ಶ್ರೀಮತಿ ಅರುಣಾ ನರೇಂದ್ರ ಅವರು 2023- 24ನೇ ಸಾಲಿನ ಕರ್ನಾಟಕ ಸರಕಾರದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅರುಣಾ ನರೇಂದ್ರ ಅವರು ಮುದ್ದಿನ ಗಿಣಿ, ಪಾಟಿ ಚೀಲ,ಬೆಕ್ಕಣ್ಣನ ಉಪಾಯ, ಬೆಳ್ಳಿ ಮೋಡದ ಬೆಳಕು, ಅಮ್ಮನ ಸೆರಗು, ಚುಕ್ಕಿ ಹಾಡು, ಮುತ್ತಿನ ರಾಶಿ, ನೇಸರ ನೋಡು, ಕಮಲಿಯ ಕುರಿಮರಿ, ಹೀಗೆ ಒಂಭತ್ತು ಕೃತಿಗಳನ್ನು ತಂದಿದ್ದಾರೆ.
ಇವುಗಳಲ್ಲಿ ಕೆಲವು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಪರಿಷತ್ ಬೆಂಗಳೂರಿನ ದತ್ತಿನಿಧಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತ್ತಿನಿಧಿ ಪ್ರಶಸ್ತಿ, ಬಿ.ಎಮ್. ಶ್ರೀ. ಪ್ರತಿಷ್ಠಾನದಿಂದ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಮಧುರ ಚೆನ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ರಾಯಚೂರು ಕೊಡುವ ಚೆಲುವ ಚಿಣ್ಣರು ಪುಸ್ತಕ ಬಹುಮಾನ, ಸೇಡಂನಿಂದ ಮಹಾದೇವಮ್ಮ ನಾಗಪ್ಪ ಪ್ರತಿಷ್ಠಾನದಿಂದ ಕೊಡ ಮಾಡುವ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಹೀಗೆ ಮಕ್ಕಳ ಸಾಹಿತ್ಯಕ್ಕಾಗಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದ ಅರುಣಾ ನರೇಂದ್ರ ಅವರು ಬರೆದ ಮಕ್ಕಳ ನಾಟಕಗಳು ಮುದ್ರಣ ಗೊಳ್ಳುವ ಹಂತದಲ್ಲಿವೆ.
ಇವರ ಮಕ್ಕಳ ಸಾಹಿತ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಇವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ದಿನಾಂಕ 16-12-2025 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸಂಗಮೇಶ್ವರ ಬಬಲೇಶ್ವರ ಅವರು ತಿಳಿಸಿದ್ದಾರೆ.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ